ಯುವಕ ನಾಪತ್ತೆ
ಬ್ರಹ್ಮಾವರ: ಇಲ್ಲಿನ ವಾರಂಬಳ್ಳಿ ಗ್ರಾಮದ ಬ್ಯಾಂಕರ್ಸ್ ಕಾಲೋನಿಯಲ್ಲಿನ ಯುವಕನೋರ್ವ ನಾಪತ್ತೆಯಾದ ಪ್ರಕರಣ ಸೋಮವಾರ ನಡೆದಿದೆ. ಕಾಣೆಯಾದವರು ಮಹಮ್ಮದ್ ಫಹೀಮ್ (18). ಇವರು ಯಾವುದೋ ಕಾರ್ಯ ನಿಮಿತ್ತ ಮನೆಯಿಂದ ಹೋದವರು ಕಾಣೆಯಾಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಕೇಸು ದಾಖಲಾಗಿದೆ.
ವ್ಯಕ್ತಿ ಆತ್ಮಹತ್ಯೆ
ಮಣಿಪಾಲ: ಇಲ್ಲಿನ ಶಿವಳ್ಳಿ ಗ್ರಾಮದ ಮೂಡುಪೆರಂಪಳ್ಳಿ ಎಂಬಲ್ಲಿನ ರೈಲು ಹಳಿಯ ಮೇಲೆ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾಡಿದೆ. ಮೃತರು ಸ್ಥಳೀಯ ನಿವಾಸಿ ಪ್ರದೀಪ (50), ಇಲ್ಲಿನ ನಿವಾಸಿ ರಾಜೀವಿ ಎಂಬವರ ಪತಿ, ಮಾನಸಿಕ ರೋಗಿಯಾಗಿದ್ದು, ಕಳೆದ 5 ವರ್ಷಗಳಿಂದ ಮನೆಗೆ ಬಾರದೆ ಏಕಾಂಗಿಯಾಗಿ ಅಲೆದಾಡಿಕೊಂಡಿದ್ದರು. ಇದೀಗ ಜೀವನದಲ್ಲಿ ಜಿಗುಪ್ಸೆಗೊಂಡು ರಾತ್ರಿ ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ. ಈ ಬಗ್ಗೆ ರಾಜೀವಿ ಅವರ ಸಹೋದರ ಲಕ್ಷ್ಮಣ ಪೂಜಾರಿ ಅವರು ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲಕ ನಾಪತ್ತೆ
ಹಿರಿಯಡ್ಕ: ಇಲ್ಲಿನ ಬೊಮ್ಮರಬೆಟ್ಟು ಗ್ರಾಮದ ಮಠದಬೆಟ್ಟು ಮನೆ ಎಂಬಲ್ಲಿಂದ ಶಾಲಾ ಬಾಲಕನೊಬ್ಬ ಕಾಣೆಯಾದ ಘಟನೆ ಮಂಗಳವಾರ ನಡೆದಿದೆ. ಕಾಣೆಯಾದ ವಿದ್ಯಾರ್ಥಿ ಅಕಾಶ್ (14), ಈತ ಮಠದಬೆಟ್ಟು ಮನೆಯ ನಿವಾಸಿ ಲಕ್ಷ್ಮೀ ಶೆಟ್ಟಿ ಎಂಬವರ ಮಗ. ಪರ್ಕಳ ಬಿ.ಎಂ. ಶಾಲೆಯಲ್ಲಿ 8ನೇ ತರಗತಿಯ ವಿದ್ಯಾರ್ಥಿ. ಎಂದಿನಂತೆ ಮಂಗಳವಾರ ಬೆಳಗ್ಗೆ 8 ಗಂಟೆಗೆ ಮನೆಯಿಂದ ಶಾಲೆಗೆ ಬಸ್ಸಿನಲ್ಲಿ ಹೋದವನು ದಾರಿ ಮಧ್ಯೆ ಅಂಜಾರು ಗ್ರಾಮದ ಓಂತಿಬೆಟ್ಟು ಜಂಕ್ಷನಿನಲ್ಲಿ 8.45 ಗಂಟೆಗೆ ಬಸ್ನಿಂದ ಇಳಿದು ಹೋದವನು ಶಾಲೆಗೂ ಹೋಗದೆ, ವಾಪಾಸ್ ಮನೆಗೂ ಬಾರದೆ ಕಾಣೆಯಾಗಿರುತ್ತಾನೆ. ಈ ಬಗ್ಗೆ ಅವರು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿನ್ನಾಭರಣ ಕಳವು
ಬೈಂದೂರು: ಇಲ್ಲಿನ ಯಡ್ತೆರೆ ಗ್ರಾಮ ಹೊಸಾಡು ಎಂಬಲ್ಲಿನ ಮನೆಯೊಂದರಿಂದ ನಗನಗದು ಕಳವಿನ ಘಟನೆ ಇತ್ತೀಚೆಗೆ ನಡೆದಿದೆ. ಈ ಮನೆಯ ಸರೋಜಾ ಅವರು ಅ. 11ರಂದು ಮನೆಗೆ ಬೀಗ ಹಾಕಿ ಬೆಂಗಳೂರಿಗೆ ಹೋಗಿದ್ದು, ನ. 5ರಂದು ಹಿಂದಕ್ಕೆ ಬಂದಾಗ, ಮನೆಯ ಹಿಂಬದಿಯ ಬಾಗಿಲಿಗೆ ಹಾಕಿದ ಬೀಗವನ್ನು ಯಾರೋ ಕಳ್ಳರು ಮುರಿದು ಮನೆಯ ಒಳಗಿದ್ದ ಕಬ್ಬಿಣದ ಕಪಾಟನ್ನು ಅಡ್ಡ ಬೀಳಿಸಿ ಬಲವಂತವಾಗಿ ತೆರೆದು ಸುಮಾರು ರು. 37,500 ಮೌಲ್ಯದ ಚಿನ್ನದ ಆಭರಣ,್ಡ ರು. 2,000 ಮೌಲ್ಯದ ಬೆಳ್ಳಿಯ ಆಭರಣ ಹಾಗು ರು. 2,000 ನಗದು ಹಣವನ್ನು ಕಳ್ಳತನ ಮಾಡಿರುವುದು ಕಂಡುಬಂದಿದೆ. ಅದರಂತೆ ಸರೋಜಾ ಅವರು ಬೈಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ನದಿಗೆ ಬಿದ್ದು ಯುವಕ ಸಾವು
ಶಂಕರನಾರಾಯಣ: ಇಲ್ಲಿನ ಹಾಲಾಡಿ ಗ್ರಾಮದ ಜನತಾ ಕಾಲೋನಿಯಲ್ಲಿ ಯುವಕನೊಬ್ಬ ಆಕಸ್ಮಿಕವಾಗಿ ನದಿಗೆ ಬಿದ್ದು ಮೃತಪಟ್ಟ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ಮೃತರು ವಿಜಯಕುಮಾರ್ (18), ಸ್ಥಳೀಯ ನಿವಾಸಿ ಈಶ್ವರ ಮೊಗವೀರ ಎಂಬವರ ಮಗ. ಸ್ನೇಹಿತ ಶ್ರೀಕಾಂತ್ ಎಂಬವನೊಂದಿಗೆ ಮಧ್ಯಾಹ್ನ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ಹತ್ತಿರದ ವರಾಹಿ ನದಿಗೆ ಸ್ನಾನ ಮಾಡಲು ಹೋಗಿದ್ದು, ಕಾಲು ಜಾರಿ ನದಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

