ಉಡುಪಿ

ಬ್ರಹ್ಮಾವರದಲ್ಲಿ 108 ಮಂದಿ ನರೇಂದ್ರ ಮೋದಿ...!

Published On :

ಬ್ರಹ್ಮಾವರ: ಇತ್ತೀಚೆಗೆ ನಡೆದ ರ್ಯಾಲಿಯೊಂದರಲ್ಲಿ ನರೇಂದ್ರ ಮೋದಿ ಭಾಷಣ ಮಾಡುತ್ತಾ, 'ಒಬ್ಬ ಮೋದಿಯನ್ನು ಕೊಂದರೆ ನೂರು ಮೋದಿ ಹುಟ್ಟುತ್ತಾರೆ' ಎಂದು ತಮ್ಮ ವಿರೋಧಿಗಳಿಗೆ ಸವಾಲು ಹಾಕಿದ್ದರು. ಆ ಸವಾಲನ್ನೇ ಸಾಂಕೇತಿಕವಾಗಿ ಪ್ರದರ್ಶಿಸುವ ವಿಭಿನ್ನವಾದ ಪ್ರಯತ್ನವೊಂದು ಇಲ್ಲಿ ಸೋಮವಾರ ನಡೆಯಿತು.
 ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಮತ್ತು ಗ್ರಾಮಾಂತರ ಬಿಜೆಪಿ ಮೋರ್ಚಾಗಳ 108 ಮಂದಿ ಕಾರ್ಯಕರ್ತರು ಸೋಮವಾರ ಥೇಟ್ ಮೋದಿಯಂತೆ ವೇಷಭೂಷಗಳನ್ನು ತೊಟ್ಟು ಬ್ರಹ್ಮಾವರ ಪೇಟೆಯಾದ್ಯಂತ ಮೆರವಣಿಗೆ ನಡೆಸಿದರು ಮತ್ತು ಹೊಸ ಸಂಚಲನ ಉಂಟು ಮಾಡಿದರು.
ಮೋದಿಯಂತೆ ಬಿಳಿ ಗಡ್ಡ, ಬಿಳಿ ಕುರ್ತಾ ಪಾಯಿಜಾಮ ಮೇಲೆ ಕೇಸರಿ ಓವರ್ ಕೋಟ್ ಮತ್ತು ತಲೆ ಮೇಲೆ ರುಮಾಲು ಧರಿಸಿದ್ದ ಈ ವೇಷಧಾರಿಗಳು ಬ್ರಹ್ಮಾವರ ನಾರಾಯಣ ಗುರು ಭವನದಿಂದ ಆರಂಭಿಸಿ, ರಾ.ಹೆ. 66, ತಹಸೀಲ್ದಾರ್ ರಸ್ತೆ ಮತ್ತು ಇತರ ಪ್ರಮುಖ ರಸ್ತೆಗಳಲ್ಲಿ ಸಾವಿರಾರು ಮಂದಿ ಮೋದಿ ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಿದರು.
ಅಲ್ಲಲ್ಲಿ ನಿಂತು ಮೋದಿಯಂತೆ ಎದೆ ಮೇಲೆ ಕೈಕಟ್ಟಿ ನಿಲ್ಲುವ, ಗೆಲುವಿನ ಸಂಕೇತದಂತೆ ಕೈ ಬೀಸುವ, ಎದೆಯುಬ್ಬಿಸಿ ನಡೆಯುವ ಪೋಸುಗಳನ್ನು ನೀಡಿದರು. ಅವರನ್ನು ರಸ್ತೆಯುದ್ದಕ್ಕೂ ಸಾವಿರಾರು ಜನರು ನಿಂತು ನೋಡುತ್ತಿದ್ದರು, ಕೆಲವರು ತಾವು ಮೆರವಣಿಗೆಗೆ ಸೇರಿಕೊಂಡರು. ಈ ಮೋದಿ ವೇಷಧಾರಿಗಳೊಂದಿಗೆ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಉಡುಪಿಯ ಮಾಜಿ ಶಾಸಕ ಕೆ. ರಘುಪತಿ ಭಟ್, ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಯುವ ಮೋರ್ಚಾಧ್ಯಕ್ಷ ವಿಲಾಸ್ ನಾಯಕ್, ಮಹಿಳಾ ಮೋರ್ಚಾದ ನಳಿನಿ ಪ್ರದೀಪ್ ರಾವ್, ಸಂಧ್ಯಾ ರಮೇಶ್, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಸ್ಥಳೀಯ ನಾಯಕರಾದ ಸುಪ್ರಸಾದ್ ಶೆಟ್ಟಿ, ನಿಶಾನ್ ರೈ, ನವೀನ್ ಕುತ್ಯಾರು, ಯತೀಶ್ ವಾರಂಬಳ್ಳಿ, ಪ್ರಜ್ವಲ್ ಶೆಟ್ಟಿ, ಜ್ಞಾನವಸಂತ ಶೆಟ್ಟಿ, ಧನಂಜಯ ಅಮೀನ್, ಬಿ.ಎನ್. ಶಂಕರ ಪೂಜಾರಿ ಮುಂತಾದವರು ಕೂಡ ಹೆಜ್ಜೆ ಹಾಕಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.