ಉಡುಪಿ

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಸೆಲಿನ್ ಕರ್ಕಡ

Published On :

ಉಡುಪಿ: ಉಡುಪಿ ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಕರಂಬಳ್ಳಿ ವಾರ್ಡ್‌ನ ಸದಸ್ಯೆ ಸೆಲಿನ್ ಕರ್ಕಡ ಅವರು ಆಯ್ಕೆಯಾಗಿದ್ದಾರೆ.
ಸ್ಥಾಯಿ ಸಮಿತಿ ಅಧ್ಯಕ್ಷರಾಗುವುದಕ್ಕೆ ಆಡಳಿತ ಪಕ್ಷ ಕಾಂಗ್ರೆಸ್‌ನಲ್ಲಿ ಸಾಕಷ್ಟು ಮಂದಿ ಆಕಾಂಕ್ಷಿಗಳಿದ್ದರೂ, ಪ್ರಥಮ ಬಾರಿಗೆ ನಗರಸಭಾ ಸದಸ್ಯೆಯಾಗಿರುವ ಸೆಲಿನ್ ಅಧ್ಯಕ್ಷರಾಗುವಲ್ಲಿ ಯಶಸ್ವಿಯಾಗಿದ್ದಾರೆ.
ಶನಿವಾರ ನಗರಸಭಾ ಅಧ್ಯಕ್ಷ ಯುವರಾಜ್ ಪಿ. ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ, ಸ್ಥಾಯಿ ಸಮಿತಿ ಸದಸ್ಯರಾದ ಮೀನಾಕ್ಷಿ ಮಾಧವ ಬನ್ನಂಜೆ, ವಿಜಯ ಜತ್ತನ್ನ, ಶಾಂತರಾಮ ಸಾಲ್ವಂಕರ್, ಪ್ರಶಾಂತ್ ಭಟ್, ವಿಜಯ ಪೂಜಾರಿ, ರಮೇಶ್ ಪೂಜಾರಿ, ಶೋಭಾ ಪೂಜಾರಿ, ಹೇಮಲತಾ ಹಿಲಾರಿ ಜತ್ತನ್ನ, ಜ್ಯೋತಿ ನಾಯ್ಕ, ಗೀತಾ ರವಿ ಶೇಟ್ ಸಭೆಯಲ್ಲಿ ಇದ್ದರು. ಚುನಾವಣಾಧಿಕಾರಿಯಾಗಿ ನಗರಸಭಾ ಆಯುಕ್ತ ಶ್ರೀಕಾಂತ್ ರಾವ್ ಕೆ. ಅವರು ಚುನಾವಣೆ ನಡೆಸಿದರು. ಸಭೆಗೆ ಮೊದಲೇ ನಿರ್ಧರಿಸಿದಂತೆ ನಗರಸಭೆಯ ಹಿರಿಯ ಸದಸ್ಯೆ ಮೀನಾಕ್ಷಿ ಮಾಧವ ಬನ್ನಂಜೆ ಇವರು ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಸೆಲಿನ್ ಕರ್ಕಡ ಇವರ ಹೆಸರನ್ನು ಸೂಚಿಸಿದರು. ಸದಸ್ಯ ಪ್ರಶಾಂತ್ ಭಟ್  ಅವರು ಅನುಮೋದಿಸಿದರು. ಬೇರೆ ಯಾವುದೇ ಹೆಸರಿಲ್ಲದ ಕಾರಣ ಸೆಲಿನ್ ಕರ್ಕಡ ಅವರು ಸರ್ವಾನುಮತದಿಂದ ಅಧ್ಯಕ್ಷೆಯಾಗಿ ಆಯ್ಕೆಯಾದರು.
ನಗರಸಭಾ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿಯ ಸದಸ್ಯರು, ನಗರಸಭಾ ಸದಸ್ಯ ಹಾರ್ಮಿಸ್ ನೊರೊಹ್ನ, ಶಶಿರಾಜ್ ಕುಂದರ್, ಪ್ರಶಾಂತ್ ಅಮೀನ್, ಸಂಧ್ಯಾ ತಿಲಕ್, ಲತಾ ಆನಂದ ಸೇರಿಗಾರ್, ವಿಜಯ ಮಂಚಿ ಹಾಗೂ ಪೌರಾಯುಕ್ತರು ನೂತನ ಅಧ್ಯಕ್ಷರಿಗೆ ಶುಭ ಕೋರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.