'ಭ್ರಷ್ಟಾಚಾರ ಮಾಡುವುದಿಲ್ಲ' ಜನಪ್ರತಿನಿಧಿಗಳ ಪ್ರಮಾಣ
ಉಡುಪಿ: ನಮ್ಮ ದೇಶದಲ್ಲಿ ಮಂತ್ರಿಗಳು, ಸಂಸದರು, ಶಾಸಕರನ್ನು ಬಿಡಿ, ಕನಿಷ್ಠ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಸದಸ್ಯರೂ ಕೂಡ ತಾನು ಭ್ರಷ್ಟಾಚಾರ ನಡೆಸುವುದಿಲ್ಲ ಎಂದು ಎದೆತಟ್ಟಿ ಹೇಳುವ ಧೈರ್ಯ ತೋರುವುದಿಲ್ಲ. ಸರ್ಕಾರಿ ಅಧಿಕಾರಿಗಳಿಂದ ಅದನ್ನು ನಿರೀಕ್ಷಿಸುವ ಹಾಗೂ ಇಲ್ಲ.
ಹೀಗಿರುವಾಗ ಉಡುಪಿ ಜಿಲ್ಲೆಯ 59ನೇ ತೆಂಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮತ್ತು ಸದಸ್ಯರು 'ತಾನು ಭ್ರಷ್ಟಾಚಾರ ನಡೆಸುವುದಿಲ್ಲ, ತನ್ನ ಗ್ರಾಮ ಪಂಚಾಯಿತಿನಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ' ಎಂದು ಲಿಖಿತ ಪ್ರಮಾಣ ಪತ್ರದ ಮೂಲಕ ಘೋಷಿಸಿದ್ದಾರೆ.
ನಾನು ಅಂತರಂಗ ಮತ್ತು ಬಹಿರಂಗ ಶುದ್ಧತೆಯನ್ನು ಪಾಲಿಸಿಕೊಂಡು, ಹಲವು ವರ್ಷಗಳಿಂದ ಮಾದರಿ ಗ್ರಾಮೀಣಾಭಿವೃದ್ಧಿ ಸೇವೆಯಲ್ಲಿ ನಿರತಳಾಗಿರುತ್ತೇನೆ. ನಾನು ನಮ್ಮ ಪಂಚಾಯಿತಿಯಲ್ಲಿ ಭ್ರಷ್ಟಾಚಾರ ಮುಕ್ತವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಹರೀಶ್ ಕೋಟ್ಯಾನ್ ಮತ್ತು ಇತರ ಸದಸ್ಯರು ಉಡುಪಿ ಜಿಲ್ಲಾ ಪ್ರಭಾರ ಒಂಬುಡ್ಸ್ಮನ್ ಶೀನ ಶೆಟ್ಟಿ ಅವರಿಗೆ ನ. 18ರಂದು ಗ್ರಾ.ಪಂ. ಕಚೇರಿಯಲ್ಲಿ ಪ್ರಮಾಣ ಪತ್ರವನ್ನು ಹಸ್ತಾಂತರಿಸಿದರು.
ಕೇವಲ ಗ್ರಾಮ ಪಂಚಾಯಿತಿ ಸದಸ್ಯರು ತಾವು ಭ್ರಷ್ಟಾಚಾರ ನಡೆಸುವುದಿಲ್ಲ ಎಂದ ಮಾತ್ರಕ್ಕೆ ಗ್ರಾ.ಪಂ. ಭ್ರಷ್ಟಾಚಾರ ಮುಕ್ತವಾಗುವುದಿಲ್ಲ. ಅಲ್ಲಿರುವ ಅಧಿಕಾರಿಗಳು ಕೂಡ ಇದಕ್ಕೆ ಸಹಕರಿಸಬೇಕಾಗುತ್ತದೆ. ಗ್ರಾ.ಪಂ. ಸದಸ್ಯರನ್ನು ಅನುಸರಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಜನಿ ಮತ್ತು ಇತರ ಸಿಬ್ಬಂದಿ ಇಂತಹದ್ದೇ ಪ್ರಮಾಣ ಪತ್ರಗಳನ್ನು ಒಂಬುಡ್ಸ್ಮನ್ಗೆ ಹಸ್ತಾಂತರಿಸಿದರು.
ಈ ಮೂಲಕ ಉಡುಪಿ ಜಿಲ್ಲೆಯ ಪ್ರಥಮ ಭ್ರಷ್ಟಾಚಾರ ಮುಕ್ತ ಗ್ರಾಮ ಪಂಚಾಯಿತಿ ಎನ್ನುವ ಹೆಗ್ಗಳಿಕೆಗೆ ತೆಂಕ ಗ್ರಾ.ಪಂ.ಗೆ ಪಾತ್ರವಾಗುವಂತೆ ಗ್ರಾ.ಪಂ. ಸದಸ್ಯರು, ಅಧಿಕಾರಿಗಳು ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಶೀನ ಶೆಟ್ಟಿ ಅವರು, ತೆಂಕ ಗ್ರಾ.ಪಂ. ಉಡುಪಿ ಜಿಲ್ಲೆಗೆ ಮಾತ್ರವಲ್ಲ ದೇಶಕ್ಕೆ ಮಾದರಿಯಾಗುವ ಕೆಲಸ ಮಾಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಗ್ರಾ.ಪಂ. ಆವರಣದಲ್ಲಿ ತೋಟಗಾರಿಕೆ ಇಲಾಖೆ ಸಹಯೋಗದೊಂದಿಗೆ 35 ಕುಟುಂಬಗಳಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಪೌಷ್ಟಿಕ ಹಣ್ಣಿನ ತೋಟ ನಿರ್ಮಾಣಕ್ಕೆ ಒಂದು ಕುಟುಂಬಕ್ಕೆ ತಲಾ 16 ಹಣ್ಣಿನ ಗಿಡಗಳನ್ನು ವಿತರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

