ನಾಳೆಯಿಂದ ನವ ಕರ್ನಾಟಕ ಪುಸ್ತಕ ಪ್ರದರ್ಶನ
ಉಡುಪಿ; ರಾಜ್ಯದ ಹೆಸರಾಂತ ಪ್ರಕಾಶನ ಸಂಸ್ಥೆ ನವ ಕರ್ನಾಟಕ ಪಬ್ಲಿಕೇಷನ್ ವತಿಯಿಂದ ಬೃಹತ್ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಉಡುಪಿಯ ಶೋಕಮಾತ ಚರ್ಚ್ನ ಡಾನ್ ಬಾಸ್ಕೊ ಹಾಲ್ನಲ್ಲಿ ನ.22ರಿಂದ ಡಿ.16ರವರೆಗೆ ಏರ್ಪಡಿಸಲಾಗಿದೆ. ಶೈಕ್ಷಣಿಕ ಪುಸ್ತಕಗಳು, ಜನಪ್ರಿಯ ವಿಜ್ಞಾನ, ಯೋಗ, ಆರೋಗ್ಯ, ಅಡುಗೆ, ಹೊಲಿಗೆ ಶಾಸ್ತ್ರ, ಕಥಾ ಸಾಹಿತ್ಯ, ಕಾನೂನು, ಜೀವನ ಚರಿತ್ರೆ, ವಿಚಾರ ಸಾಹಿತ್ಯ, ಮಾನವಿಕ ಶಾಸ್ತ್ರಗಳು, ಜ್ಞಾನಾರ್ಜನೆಯ ಎಲ್ಲ ಶಾಖೆಗಳಿಗೆ ಸಂಬಂಧಿಸಿದ ವಿವಿಧ ಭಾರತೀಯ ಮತ್ತು ವಿದೇಶಿ ಪ್ರಕಾಶಕರ 50 ಸಾವಿರಕ್ಕೂ ಹೆಚ್ಚು ಪುಸ್ತಕಗಳು ಇಲ್ಲಿ ಲಭ್ಯವಿದೆ. ಗ್ರಾಹಕರಿಗೆ ಶೇ.10 ರಿಯಾಯತಿಯನ್ನು ನೀಡಲಾಗುವುದು. 500ಗಿಂತ ಹೆಚ್ಚಿನ ಖರೀದಿಯ ಮೇಲೆ ವಿಶೇಷ ಉಡುಗೊರೆ ಕೂಡ ಇದೆ. ಪುಸ್ತಕ ಪ್ರೇಮಿಗಳು, ಶಾಲೆ- ಕಾಲೇಜುಗಳೂ ಇನ್ನಿತರ ಸಂಸ್ಥೆಗಳು ತಮ್ಮ ವಾಚನಾಲಯಗಳಿಗೆ ಪುಸ್ತಕಗಳ ಸಗಟು ಖರೀದಿ ಮಾಡಲು ಈ ಅವಕಾಶವನ್ನು ಬಳಸಿಕೊಳ್ಳಬೇಕೆಂದು ನವ ಕರ್ನಾಟಕ ಮಂಗಳೂರು ಶಾಖೆಯ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ಕೋರಿದ್ದಾರೆ. ರಾಜ್ಯೋತ್ಸವದ ಅಂಗವಾಗಿ ನವೆಂಬರ್ ತಿಂಗಳಲ್ಲಿ ನವ ಕರ್ನಾಟಕ ಪ್ರಕಾಶನದ ಮಂಗಳೂರಿನ 2 ಶಾಖೆಗಳಾದ ಕೆ.ಎಸ್. ರಾವ್ ರಸ್ತೆ ಶಾಖೆ (ವಿಶ್ವಭವನ) ಹಾಗೂ ಬಲ್ಮಠ ರಸ್ತೆ ಶಾಖೆ (ಹಿಂದಿನ ಅತ್ರಿ ಬುಕ್ ಸೆಂಟರ್ಗಳಲ್ಲಿ ಶೇ.20 ರಿಯಾಯತಿ ಇದೆ ಎಂದು ತಿಳಿಸಿದ್ದಾರೆ.
ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ 12 ಕೋಟಿ: ಅಭಿನಂದನೆ
ಉಡುಪಿ: ಜಿಲ್ಲೆಯ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ನೌಕರರ ಸಂಬಳ ಹಾಗೂ ರೈತರ ಬಾಕಿ ಹಣ ಪಾವತಿಗೆ ರಾಜ್ಯ ಸರ್ಕಾರ 12 ಕೋಟಿ ಬಿಡುಗಡೆ ಮಾಡಿದೆ. ಈ ಅನುದಾನ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ, ಇದಕ್ಕಾಗಿ ಪ್ರಯತ್ನಿಸಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಕೇಂದ್ರ ಭೂ- ಸಾರಿಗೆ ಮತ್ತು ಹೆದ್ದಾರಿ ಸಚಿವ ಆಸ್ಕರ್ ಫೆರ್ನಾಂಡಿಸ್ ಹಾಗೂ ಸಹಕಾರ ಸಚಿವ ಎಚ್.ಎಸ್. ಮಹಾದೇವ ಪ್ರಸಾದ್ ಅವರಿಗೆ ಉಡುಪಿ- ಚಿಕ್ಕಮಗಳೂರು ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಅಭಿನಂದನೆ ಸಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

