ಉಡುಪಿ

ಯು.ಆರ್. ಕಾಮತ್‌ಗೆ 'ವಾಸ್ತುತಂತ್ರ ಪ್ರವೀಣ' ಪ್ರಶಸ್ತಿ

Published On :

ಕಲ್ಯಾಣಪುರ: ಇಲ್ಲಿನ ಶ್ರೀವೆಂಕಟರಮಣ ದೇವಸ್ಥಾನಕ್ಕೆ ಆಗಮಿಸಿರುವ ಕೈವಲ್ಯ ಮಠಾಧೀಶ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಉಡುಪಿಯ ವಿಶ್ವನಾಥ ಶೆಣೈ ಮಿತ್ರ ವೃಂದದವರಿಂದ ಯು. ರಾಮಚಂದ್ರ ಕಾಮತ್ ಶಿರಿಬೀಡು ಅವರ ಸಮಾಜ ಸೇವಾ ಕಾರ್ಯಗಳನ್ನು ಗುರುತಿಸಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಸ್ವಾಮೀಜಿ ಅವರು ಕಾಮತ್ ಅವರಿಗೆ 'ವಾಸ್ತುತಂತ್ರ ಪ್ರವೀಣ' ಎಂಬ ವಿಶೇಷ ಬಿರುದನ್ನು ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರರಾದ ಕೆ. ಅನಂತಪದ್ಮನಾಭ ಕಿಣಿ, ವಿಶ್ವನಾಥ ಶೆಣೈ, ಪ್ರಭಾ ವಿ. ಶೆಣೈ, ಪ್ರಶಾಂತ್ ಕಾಮತ್, ದೇವದಾಸ್ ಕಾಮತ್, ಕೊಡಂಕೂರು ದೇವರಾಜ್ ಮೂರ್ತಿ, ಅರವಿಂದ ಬಾಳಿಗಾ, ಗಣಪತಿ ಭಟ್, ರಾಮಚಂದ್ರ ಭಟ್, ಜಯದೇವ ಭಟ್, ಸುಬ್ಬಣ್ಣ ಪೈ, ಕೆ. ತುಳಸೀದಾಸ್ ಕಿಣಿ, ಸೀತಾರಾಮ್ ಭಟ್ ಹಾಗೂ ಕಾಶಿನಾಥ್ ಭಟ್ ಮತ್ತು ಸಮಾಜಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ದೇವರ ಮಂಗಳಾರತಿಯ ಬಳಿಕ ಸಮಾರಾಧನೆ ಕಾರ್ಯಕ್ರಮ ಜರುಗಿತು.
30 ಶಿಕ್ಷಣ ಸಂಸ್ಥೆ, 50 ದೇವಸ್ಥಾನಗಳ ನಿರ್ಮಾಣ: ಕಾಮತ್ ಅವರು ಬ್ರಿಟಿಷ್ ಸರ್ಕಾರದ ಅವಧಿಯಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಗಳಿಸಿ 1956ರಿಂದ ಮಣಿಪಾಲ ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರಾಗಿ, 1987ರಿಂದ 95ರವರೆಗೆ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಸುಮಾರು 30 ಶಾಲೆ- ಕಾಲೇಜುಗಳನ್ನು ನಿರ್ಮಿಸಿದ್ದಾರೆ.
   ವಾಸ್ತುಶಾಸ್ತ್ರದಲ್ಲಿ ವಿಶೇಷ ಪರಿಣತಿ ಹೊಂದಿರುವ ಕಾಮತ್ ಉಡುಪಿ ಹಾಗೂ ಮಂಗಳೂರು ಜಿಲ್ಲೆಯಲ್ಲಿ ಸುಮಾರು 50 ದೇವಸ್ಥಾನಗಳನ್ನು ನಿರ್ಮಿಸಿಕೊಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.