ರಾಜ್ಯ ಪವರ್‌ಲಿಫ್ಟಿಂಗ್ ಸ್ಪರ್ಧೆ ಫಲಿತಾಂಶ
ಮೂಲ್ಕಿ: ಕಿನ್ನಿಗೋಳಿಯ ಶ್ರೀ ವೀರಮಾರುತಿ ವ್ಯಾಯಾಮ ಶಾಲೆ ಆಶ್ರಯದಲ್ಲಿ ಕರ್ನಾಟಕ ಪವರ್ ಲಿಫ್ಟಿಂಗ್ ಎಸೋಸಿಯೇಶನ್ ಸಹಯೋಗದೊಂದಿಗೆ ಕಿನ್ನಿಗೋಳಿಯ ಯುಗಪುರುಷದಲ್ಲಿ ನಡೆದ 35ನೇ ರಾಜ್ಯ ಜ್ಯೂನಿಯರ್, ಸಬ್‌ಜ್ಯೂನಿಯರ್ ಮತ್ತು ಮಾಸ್ಟರ್ಸ್ ಪವರ್ ಲಿಫ್ಟಿಂಗ್ ಸ್ಪರ್ಧೆಯ ಫಲಿತಾಂಶ ಪ್ರಕಟಿಸಲಾಗಿದೆ.
ಜ್ಯೂನಿಯರ್ ವಿಭಾಗ: ಜ್ಯೂನಿಯರ್ ವಿಭಾಗದ 53 ಕೆ.ಜಿ. ವಿಭಾಗದಲ್ಲಿ ಬಾಲಂಜನೇಯದ ಮಹಮ್ಮದ್ ರಮೀಜ್ ಪ್ರಥಮ, ತಿಲಕ್‌ರಾಜ್ ದ್ವಿತೀಯ ಹಾಗೂ ದುರ್ಗಾ ವ್ಯಾಯಾಮ ಶಾಲೆ ಪಡೀಲಿನ ಅಶೀಶ್ ತೃತೀಯ ಸ್ಥಾನ ಪಡೆದಿದ್ದಾರೆ. 59 ಕೆ.ಜಿ. ವಿಭಾಗದಲ್ಲಿ ಭದ್ರಾವತಿ ಕಾರಂತ ಜಿಮ್‌ನ ಸಲೀಂ ಪ್ರಥಮ, ಬೀರೇಶ್ವರ ದಾವಣಗೆರೆಯ ಬಸವರಾಜ್ ದ್ವಿತೀಯ, ವೀರಮಾರುತಿ ಸಾಲಿಗ್ರಾಮದ ಸುನೀಲ್ ತೃತೀಯ ಸ್ಥಾನ ಪಡೆದಿದ್ದಾರೆ.
66 ಕೆ.ಜಿ. ವಿಭಾಗದಲ್ಲಿ ಮಂಗಳೂರಿನ ಬಾಲಾಂಜನೇಯದ ಪ್ರಸಾದ್ ಶೆಟ್ಟಿ ಪ್ರಥಮ, ಬೆಂಗಳೂರಿನ ಸೂಪರ್ ಬಾಡೀಸ್ ಆಂಡ್ ಫಿಟ್ನೆಸ್‌ನ ಶಿವ ಎಚ್. ದ್ವಿತೀಯ, ವೀರ ಮಾರುತಿ ಸಾಲಿಗ್ರಾಮದ ಗುರುರಾಜ್ ಬಾಬು ಪೂಜಾರಿ ತೃತೀಯ ಸ್ಥಾನ ಗಳಿಸಿದ್ದಾರೆ.
74 ಕೆ.ಜಿ. ವಿಭಾಗದಲ್ಲಿ ಮಂಗಳೂರಿನ ಬಾಲಾಂಜನೇಯದ ಸಚೀಂದ್ರ ಪ್ರಥಮ, ಅಕ್ಬರ್ ಆಲಿ ದ್ವಿತೀಯ, ಬಾಲಾಂಜನೇಯದ ಮಂಜುನಾಥ ತೃತೀಯ, 82 ಕೆ.ಜಿ. ವಿಭಾಗದಲ್ಲಿ ಬೆಂಗಳೂರಿನ ಸೂಪರ್ ಬಾಡೀಸ್‌ನ ಬಿ. ವಿಶ್ವನಾಥ ಪ್ರಥಮ, ಬಾಲಾಂಜನೇಯದ ಸೂರಜ್ ಕುಮಾರ್ ಸಿಂಗ್ ದ್ವಿತೀಯ, ಎನ್‌ಇಟಿ ನಿಟ್ಟೆಯ ಶ್ರೀಶ ಭಟ್ ತೃತೀಯ, 93 ಕೆ.ಜಿ. ವಿಭಾಗದಲ್ಲಿ ಬೆಂಗಳೂರಿನ ಸೂಪರ್ ಬಾಡೀಸ್‌ನ ಅಜಯ ಕುಮಾರ್ ಬಿ. ಪ್ರಥಮ, ಬಾಲಾಂಜನೇಯದ ಜಾನ್ ಡೇವಿಡ್ ದ್ವಿತೀಯ, ವೀರಮಾರುತಿ ಸಾಲಿಗ್ರಾಮದ ಶರತ್ ಕುಮಾರ್ ತೃತೀಯ ಸ್ಥಾನ ಗಳಿಸಿದ್ದಾರೆ.
ಸಬ್ ಜ್ಯೂನಿಯರ್: ಸಬ್ ಜೂನಿಯರ್‌ನ 53 ಕೆ.ಜಿ ವಿಭಾಗದಲ್ಲಿ ಕೋಟೇಶ್ವರ ವೀರಮಾರುತಿ ವ್ಯಾಯಾಮ ಶಾಲೆಯ ಪಿ. ರಂಜಿತ್ ಪ್ರಥಮ ಸ್ಥಾನ ಪಡೆದಿದ್ದಾರೆ. ಮಂಗಳೂರಿನ ಬಾಲಂಜನೇಯದ ವಿವೇಕ್ ಕಾಮತ್ ದ್ವಿತೀಯ ಹಾಗೂ ವೀರಮಾರುತಿ ಸಾಲಿಗ್ರಾಮದ ವಿಜೇಶ್ ತೃತೀಯ ಬಹುಮಾನ ಗಳಿಸಿದ್ದಾರೆ. 59 ಕೆ.ಜಿ. ವಿಭಾಗದಲ್ಲಿ ವೀರಮಾರುತಿ ಸಾಲಿಗ್ರಾಮದ ಪ್ರಶಾಂತ್ ಪ್ರಥಮ, ಸಚಿನ್ ದ್ವಿತೀಯ, ಬಾಲಂಜನೇಯದ ಅಭಿಷೇಕ್ ತೃತೀಯ ಬಹುಮಾನ ಪಡೆದಿದ್ದಾರೆ.
66 ಕೆ.ಜಿ. ವಿಭಾಗದಲ್ಲಿ ಎಸ್‌ಡಿಎಂ ಉಜಿರೆಯ ಅಭಿಷೇಕ್ ಪ್ರಥಮ, ವೀರಮಾರುತಿ ಸಾಲಿಗ್ರಾಮದ ಪ್ರಶಾಂತ್ ದ್ವಿತೀಯ, 74 ಕೆ.ಜಿ. ವಿಭಾಗದಲ್ಲಿ ವೀರಮಾರುತಿ ಸಾಲಿಗ್ರಾಮದ ಸಚಿನ್ ಪ್ರಥಮ, ವೀರ ಮಾರುತಿ ಕಿನ್ನಿಗೋಳಿಯ ಶುಭದೀಪ್ ದ್ವಿತೀಯ ಸ್ಥಾನ ಪಡೆದಿದ್ದಾರೆ.
83 ಕೆ.ಜಿ. ವಿಭಾಗದಲ್ಲಿ ವೀರಮಾರುತಿ ಸಾಲಿಗ್ರಾಮದ ಡೊಮಿನಿಕ್ ಆರ್. ಡಿಸೋಜ ಪ್ರಥಮ, 93 ಕೆ.ಜಿ. ವಿಭಾಗದಲ್ಲಿ ವೀರಮಾರುತಿ ಸಾಲಿಗ್ರಾಮದ ಜೊಯಲ್ ಅಂತೋನಿ ಡಿ ಅಲ್ಮೇಡಾ ಪ್ರಥಮ, ಸೈಂಟ್ ಮೇರಿಸ್ ಶಿರ್ವದ ಗ್ಲೇನ್ಸ್‌ತನ್ ಎ. ರೊಡ್ರಿಗಸ್ ದ್ವಿತೀಯ ಸ್ಥಾನ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

