ಫ್ಟಾಸಿಸ್ಟ್ಗಳಿಂದ ಸಮುದಾಯಕ್ಕೆ ಧಕ್ಕೆ: ಭಾಸ್ಕರ್ ಮಯ್ಯ
ಉಡುಪಿ: ಹಿಂದುತ್ವ ಅಥವಾ ಫ್ಯಾಸಿಸ್ಟ್ ಸಂಘಟನೆಗಳು ರಾಜಕೀಯ ಶಕ್ತಿಗಳ ವಿಕೃತ ರೂಪವಾಗಿದ್ದು, ಇದು ಸಮುದಾಯವನ್ನು ಹಾಳು ಮಾಡುತ್ತಿವೆ ಎಂದು ಪ್ರಗತಿಪರ ಚಿಂತಕ, ಉಪನ್ಯಾಸಕ ಜಿ. ಭಾಸ್ಕರ್ ಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿನ ಆದಿಉಡುಪಿಯ ಅಂಬೇಡ್ಕರ್ ಭವನದಲ್ಲಿ ಭಾನುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಫ್ಯಾಸಿಸ್ಟ್ ಹಿಂದು ಸಂಘಟನೆಗಳಿಗೆ ಯಶಸ್ಸು ಸಿಕ್ಕಿದ್ದು 80 ಹಾಗೂ 90ರ ದಶಕದಲ್ಲಿ. ಬಾಬ್ರಿ ಮಸೀದಿ ಕೆಡಹುವ ಫ್ಯಾಸಿಸ್ಟ್ ಅಥವಾ ಹಿಂದುತ್ವದ ಅಜೆಂಡಾಕ್ಕೆ ದಲಿತರು ಕೈಜೋಡಿಸಿದ್ದರು. ಇದಕ್ಕೆ ಬಿಜೆಪಿಯನ್ನು ಮಾತ್ರ ಹೊಣೆ ಮಾಡಲಾಗದು, ಆಡಳಿತದಲ್ಲಿದ್ದ ಕಾಂಗ್ರೆಸ್ ಪಕ್ಷವೂ ಇದನ್ನು ತಡೆಯಬಹುದಿತ್ತು ಎಂದರು. 1994ರ ನಂತರ ಸಹಸ್ರಾರು ಲಕ್ಷ ಎಕರೆ ಜಮೀನನ್ನು ಬಹುರಾಷ್ಟ್ರೀಯ ಕಂಪನಿಗಳು ಸ್ವಾಧೀನಕ್ಕೆ ಒಳಪಡಿಸಿಕೊಂಡಿವೆ. ಲಕ್ಷಾಂತರ ದಲಿತರು ಭೂರಹಿತರಾಗಿ ಉಳಿದಿದ್ದಾರೆ. ದೇಶದ ಆರ್ಥಿಕ ಸಮಾನತೆಗಾಗಿ ಸಮರ್ಪಕವಾದ ಭೂಸುಧಾರಣಾ ಕಾನೂನು ಜಾರಿಯಾಗಬೇಕಾದ ಅಗತ್ಯವಿದೆ ಎಂದರು.
ಪ್ರಗತಿಪರ ಚಿಂತಕ ಸಂಜೀವ ಬಳ್ಕೂರು ಅಧ್ಯಕ್ಷತೆ ವಹಿಸಿದ್ದರು. ದಲಿತ ಮುಖಂಡ ಸುಂದರ್ ಮಾಸ್ತರ್ ಮೂಡುಬೆಟ್ಟು, ನ್ಯಾಯವಾದಿ ಮಂಜುನಾಥ ವಿ., ದಲಿತ ಮುಖಂಡರಾದ ಶ್ಯಾಮ್ರಾಜ್ ಬಿರ್ತಿ, ವಿಶ್ವನಾಥ್ ಪೇತ್ರಿ, ರಮೇಶ್ ಕೋಟ್ಯಾನ್ ಕೆಳಾರ್ಕಳಬೆಟ್ಟು, ಪ್ರಶಾಂತ್ ತೊಟ್ಟಂ, ವಿಜಯಲಕ್ಷ್ಮೀ ಹಂದಾಡಿ ಇದ್ದರು. ಪ್ರ.ಕಾರ್ಯದರ್ಶಿ ಸುಂದರ್ ಗುಜ್ಜರಬೆಟ್ಟು ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

