ಉಡುಪಿ

ಮದ್ಯದ ಅಮಲಲ್ಲಿ ವಿದ್ಯುತ್ ಕಂಬವೇರಿದ!

Published On :

ಉಡುಪಿ: ಮದ್ಯದ ಅಮಲಿನಲ್ಲಿ ಯುವಕನೊಬ್ಬ ವಿದ್ಯುತ್ ಕಂಬ ಹತ್ತಿ ಕುಳಿತು ಅವಾಂತರ ಸೃಷ್ಟಿಸಿದ ಘಟನೆ ಇಲ್ಲಿನ ಗೀತಾಂಜಲಿ ಥಿಯೇಟರ್ ಬಳಿ ಭಾನುವಾರ ನಡೆದಿದೆ.
ಮಧ್ಯಾಹ್ನ ಸುಮಾರು 1.30ಕ್ಕೆ ಅಪರಿಚಿತನೊಬ್ಬ ವಿದ್ಯುತ್ ಹರಿಯುವ ಕಂಬವೇರಿದ್ದನ್ನು ಕಂಡು ಸಾರ್ವಜನಿಕರು ಆತಂಕಗೊಂಡರು. ಮಾಹಿತಿ ಪಡೆದ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಆತನನ್ನು ಕೆಳಗಿಸುವ ಪ್ರಯತ್ನ ನಡೆಸಿದರು. ಈ ಮಧ್ಯೆ ಮೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿ, ಆ ಕಂಬದ ವಿದ್ಯುತ್ ಕಡಿತಗೊಳಿಸಲಾಯಿತು. ಕಂಬದ ತಂತಿಯ ಸಹಾಯ ಪಡೆದ ಯುವಕ ಹತ್ತಿರದ ಬಹುಮಹಡಿ ಕಟ್ಟಡಕ್ಕೆ ಜಿಗಿದ. ಪೊಲೀಸರು ಹಾಗೂ ಸಾರ್ವಜನಿಕರು ಆತನ ಬೆನ್ನು ಹತ್ತಿದರು. ಆತ ಅಲ್ಲಿಂದ ಆಭರಣ ಜ್ಯುವೆಲ್ಲರಿ ಸಮೀಪದ ಇನ್ನೆರಡು ಕಟ್ಟಡ ಹತ್ತಿದ. ಬಳಿಕ ಕುಡಿದ ಅಮಲು ಇಳಿಯಿತೋ ಏನೋ, ಸಾರ್ವಜನಿಕರ ಸಹಾಯದೊಂದಿಗೆ ಇಳಿದು ಬಂದ. ಈತನನನ್ನು ವಿಚಾರಿಸಿದಾಗ, ಆತ ಮಂಗಳೂರು ಮೂಲದ ರಾಜೇಶ್ ಎಂದು ತಿಳಿದು ಬಂದಿದ್ದು ಠಾಣೆಗೆ ಕರೆದೊಯ್ಯಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.