ಉಡುಪಿ

'ಸಂಸ್ಕಾರ ಪ್ರೋತ್ಸಾಹಿದರೆ ಉತ್ತಮ ಕಾವ್ಯ ರಚನೆ'

Published On :

ಉಡುಪಿ: ಜನ್ಮಾಂತರದ ಸಂಸ್ಕಾರ ಎಂಬ ಬೀಜಕ್ಕೆ ಪ್ರೋತ್ಸಾಹ ಎಂಬ ವಾತಾವರಣ ದೊರೆತರೆ ಉತ್ತಮ ಕವಿತೆಗಳು ರಚನೆಯಾಗುತ್ತದೆ. ಇಂತಹ ಕವಿತೆಗಳು ಸಮಾಜದಲ್ಲಿರುವ ಅಶಾಂತಿ ತೊಲಗಿಸಲು ಸಹಕಾರಿಯಾಗುತ್ತದೆ ಎಂದು ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮೆನೇಜ್‌ಮೆಂಟ್ ಸಂಸ್ಥೆಯ ಪ್ರಜ್ಞಾ ಹಾಲ್‌ನಲ್ಲಿ ಬ್ಯಾಂಕ್ ಅಧಿಕಾರಿ ಗಿರೀಶ್ ಐತಾಳ್ ನಾಗೂರು ಅವರ ಪ್ರಥಮ ಕವನ ಸಂಕಲನ ಬೇಲಿ ಮೇಲಿನ ಹೂ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ ಕವಿತ್ವಾಶಕ್ತಿ ದೈವದತ್ತವಾಗಿ ಬರುವಂತಹದು, ಕವಿತೆಯಲ್ಲಿ ಕವಿತಾ ಶಕ್ತಿ ಎಂಬುದು ಅತೀ ಮುಖ್ಯವಾದ ಅಂಶವಾಗಿದೆ. ಕವಿತೆ ಹಾಗೂ ವನಿತೆ ಒಲಿದು ಬಂದರೆ ಸರಸ, ಇಲ್ಲವಾದಲ್ಲಿ ವಿರಸ ಎಂದರು.
ನಿವೃತ್ತ ಪ್ರಾಧ್ಯಾಪಕ ಕನರಾಡಿ ವಾದಿರಾಜ ಭಟ್ ಮಾತನಾಡಿ ಕವನದಲ್ಲಿ ಲಯ, ಛಂದಸ್ಸು ಅತಿ ಮುಖ್ಯ. ಕಥೆಯನ್ನು ಕವನ ರೂಪದಲ್ಲಿ ಬರೆಯುವ ಕವನ ಸಂಕಲನಗಳು ಇಂದಿನ ದಿನಗಳಲ್ಲಿ ಮೂಡಿಬರಬೇಕಾದ ಅವಶ್ಯಕತೆ ಇದೆ. ಜೀವನ ರಹಸ್ಯ, ಆಯಾಮಗಳನ್ನು ತಿಳಿಸುವ ಕಥಾ ಕವನಗಳತ್ತ ಯುವ ಕವಿಗಳು ಬೆಳಕುಹರಿಸಬೇಕು ಎಂದು ಕರೆ ನೀಡಿದರು.
ಕೃತಿಯ ಪರಿಚಯವನ್ನು ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ. ಮಾಧವಿ ಭಂಡಾರಿ ಮಾಡಿದರು. ಕವಿ ಗಿರೀಶ್ ಐತಾಳ್ ನಾಗೂರು ಇದ್ದರು.
ಪೂರ್ಣಪ್ರಜ್ಞ ಇನ್‌ನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಜ್ಮೆಂಟ್ ಸಂಸ್ಥೆಯ ಪ್ರಾಂಶುಪಾಲ ಡಾ. ಎಂ.ಆರ್. ಹೆಗಡೆ ಸ್ವಾಗತಿಸಿ ಎಸ್.ಎಸ್. ನರಸಿಂಹ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಗಿರೀಶ್ ಐತಾಳ್ ಅವರ 'ಮೈಮನ' ವೆಬ್‌ಸೈಟ್ ಅನ್ನು ವಿಜಯ ಬ್ಯಾಂಕಿನ ನಿರ್ದೇಶಕ ಎಚ್. ಹರೀಶ್ ಬಲ್ಲಾಳ್ ಅನಾವರಣಗೊಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.