ತೆಂಕಪೇಟೆ: ಶಾರದಾದೇವಿ ವಿಗ್ರಹ ಜಲಸ್ತಂಭನ
ಉಡುಪಿ: ಇಲ್ಲಿನ ತೆಂಕಪೇಟೆಯ ಶ್ರೀಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀ ಶಾರದಾ ದೇವಿ ವಿಗ್ರಹವನ್ನು ಮಂಗಳವಾರ ರಾತ್ರಿ ಅಲಂಕೃತ ಪಲ್ಲಕ್ಕಿಯಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆಯ ನಂತರ ದೇವಳದ ಕೆರೆಯಲ್ಲಿ ಜಲಸ್ತಂಭನ ಮಾಡಲಾಯಿತು. ಈ ಬಾರಿ ಹಿತ್ತಾಳೆಯಿಂದ ನೂತನವಾಗಿ ರಚಿಸಿದ ನವಿಲು ಮೆರವಣಿಗೆ ವಿಶೇಷ ಆಕರ್ಷಣೆಯಾಗಿತ್ತು. ಮೆರವಣಿಗೆಯಲ್ಲಿ ಕೊಂಚಾಡಿಯ ಮುಕಾಂಬಿಕಾ ಚೆಂಡೆ ಬಳಗ ವಿಶೇಷ ಆಕರ್ಷಣೆಯಾಗಿತ್ತು. ಜತೆಗೆ ಸಂಚಾರಿ ಆರ್ಕೆಸ್ಟ್ರಾ, ಸ್ತಬ್ಧಚಿತ್ರಗಳು ಮೆರವಣಿಗೆಯ ಶೋಭೆ ಹೆಚ್ಚಿಸಿದವು. ಮೆರವಣಿಗೆಯು ದೇವಳದಿಂದ ಹೊರಟು ಐಡಿಯಲ್ ಸರ್ಕಲ್, ಡಯಾನ ಸರ್ಕಲ್, ಕೆ.ಎಂ. ಮಾರ್ಗವಾಗಿ ಚಿತ್ತರಂಜನ್ ಸರ್ಕಲ್ ಮೂಲಕ ಸಾಗಿ ದೇವಳಕ್ಕೆ ಬಂದು ದೇವಸ್ಥಾನದ ಪದ್ಮ ಸರೋವರದಲ್ಲಿ ರಚಿಸಿದ ತೆಪ್ಪದಲ್ಲಿ ದೇವಿಯ ವಿಗ್ರಹವನ್ನು ಕೂರಿಸಿ ವಂದೇಮಾತರಂ ದೇಶಭಕ್ತಿ ಗೀತೆಯೊಂದಿಗೆ ಬೆಳಗಿನ ಜಾವ 3.45ಕ್ಕೆ ಜಲಸ್ತಂಭನ ಮಾಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

