ಯುವ ಜನತೆ ಪ್ರೋತ್ಸಾಹಿಸಿ: ಶಾಸಕ ಗೋಪಾಲ ಪೂಜಾರಿ
ಗಂಗೊಳ್ಳಿ: ಯುವಜನ ಮತ್ತು ಕ್ರೀಡಾ ಇಲಾಖೆ ಮೂಲಕ ಯುವ ಜನರನ್ನು ಪ್ರೋತ್ಸಾಹಿಸಿ ಅವರಲ್ಲಿನ ಪ್ರತಿಭೆಯನ್ನು ಬೆಳೆಸುವ ಕಾರ್ಯ ನಡೆಯಬೇಕು. ಯಾವುದೇ ಸ್ಪರ್ಧೆಗಳಲ್ಲಿ ಸ್ಪರ್ಧಾಳುಗಳು ತೀರ್ಪಿಗೆ ತಲೆಬಾಗಿ ತೀರ್ಪನ್ನು ಗೌರವಿಸಿದರೆ ಮುಂದಿನ ಸ್ಪರ್ಧೆಯ ಸಂಘಟಕರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವಾಗಲಿದೆ ಎಂದು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ಅವರು ಶುಕ್ರವಾರ ಗಂಗೊಳ್ಳಿಯ ಸ.ವಿ. ಹಿರಿಯ ಪ್ರಾಥಮಿಕ ಶಾಲೆಯ ಬೈಲೂರು ರಾಮರಾವ್ ಶ್ಯಾನುಭಾಗ್ ರಂಗ ಮಂಟಪದಲ್ಲಿ ಜಿಲ್ಲಾಡಳಿತ ಉಡುಪಿ, ಉಡುಪಿ ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ಜಿಲ್ಲೆ ಹಾಗೂ ಶ್ರೀ ಗುರುಜ್ಯೋತಿ ಸ್ಪೋರ್ಟ್ಸ್ ಕ್ಲಬ್ ಗಂಗೊಳ್ಳಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಉಡುಪಿ ಜಿಲ್ಲಾ ಮಟ್ಟದ ಯುವಜನೋತ್ಸವ 2013-14 ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗಂಗೊಳ್ಳಿಯಂತಹ ಗ್ರಾಮೀಣ ಪ್ರದೇಶದಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವವನ್ನು ಯಶಸ್ವಿಯಾಗಿ ಅಚ್ಚುಕಟ್ಟಾಗಿ ಸಂಘಟಿಸಿದ ಜಿಲ್ಲೆಯ ಶ್ರೀ ಗುರುಜ್ಯೋತಿ ಸ್ಫೋರ್ಟ್ಸ್ ಕ್ಲಬ್ ಅಭಿನಂದನಾರ್ಹ ಎಂದು ಶಾಸಕರು ಶ್ಲಾಘಿಸಿದರು.
ತಾಪಂ ಸದಸ್ಯೆ ಪೂರ್ಣಿಮಾ ಮಾಧವ ಖಾರ್ವಿ, ಗ್ರಾಪಂ ಬಿ. ರಾಘವೇಂದ್ರ ಪೈ, ಸ.ವಿ. ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಸುಮನಾ ಪಡಿಯಾರ್ ಶುಭಾಶಂಸನೆಗೈದರು. ಕುಂದಾಪುರ ತಾಲೂಕು ಯುವಜನ ಮತ್ತು ಕ್ರೀಡಾಧಿಕಾರಿ ದಿನಕರ ಹೆಗ್ಡೆ, ಶ್ರೀ ಗುರುಜ್ಯೋತಿ ಶಿಕ್ಷಣ ನಿಧಿ ಯೋಜನೆಯ ಗೌರವ ಸದಸ್ಯ ಜಿ.ಪುರುಷೋತ್ತಮ ಆರ್ಕಾಟಿ, ಸಂಘದ ಗೌರವಾಧ್ಯಕ್ಷ ವಿಜಯ ಖಾರ್ವಿ, ಸಂಘದ ಕಾರ್ಯದರ್ಶಿ ಶ್ರೀನಿವಾಸ ಖಾರ್ವಿ ಉಪಸ್ಥಿತರಿದ್ದರು.
ಉಡುಪಿ ಜಿಲ್ಲೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಜಿ. ಸ್ವಾಗತಿಸಿದರು.
ಪ್ರಶಾಂತ ಶೆಟ್ಟಿ ನಿರೂಪಿಸಿದರು. ಜಿ. ಸೂರ್ಯಕಾಂತ ಖಾರ್ವಿ ವಂದಿಸಿದರು.
ಫಲಿತಾಂಶ: ಶಾಸ್ತ್ರೀಯ ಗಾಯನ (ಹಿಂದುಸ್ಥಾನಿ ಸಂಗೀತ)ದಲ್ಲಿ ಶ್ರುತಿ ಬಿ. (ಪ್ರಥಮ), ಪ್ರಜ್ವಲ್(ದ್ವಿತೀಯ), ಪ್ರಜ್ವಲಾ (ತೃತೀಯ). ಕರ್ನಾಟಕ ಸಂಗೀತಲ್ಲಿ ಐಶ್ವರ್ಯ ಹರೆಗೋಡು (ಪ್ರಥಮ), ತಬಲಾದಲ್ಲಿ ಎನ್. ನಾಗರಾಜ ನಾಯಕ್(ಪ್ರಥಮ), ಆಕಾಶ್(ದ್ವಿತೀಯ), ಕೊಳಲುದಲ್ಲಿ ಗಂಗಾಧರ (ಪ್ರಥಮ), ಅಚ್ಚುತ್(ದ್ವಿತೀಯ), ಹಾರ್ಮೋನಿಯಂನಲ್ಲಿ ಶ್ರುತಿ (ಪ್ರಥಮ), ಧನುಶ್ರೀ (ದ್ವಿತೀಯ), ಭರತನಾಟ್ಯದಲ್ಲಿ ಆಶ್ರಿತಾ (ಪ್ರಥಮ), ವಿನೀತಾ (ದ್ವಿತೀಯ), ಚೈತನ್ಯ (ತೃತೀಯ), ಕೂಚುಪುಡಿದಲ್ಲಿ ವಿನೀತಾ (ಪ್ರಥಮ), ಚೈತನ್ಯ (ದ್ವಿತೀಯ), ಆಶು ಭಾಷಣದಲ್ಲಿ ಸ್ನೇಹಾ (ಪ್ರಥಮ), ಮಾಸುಮ್ ರಾಜ್(ದ್ವಿತೀಯ), ಜಾನಪದ ಗೀತೆಯಲ್ಲಿ ಸರಸ್ವತಿ ಯುವಕ ಮಂಡಲ ಮಲ್ಪೆ (ಪ್ರಥಮ), ಡಾ.ಬಿ.ಆರ್. ಅಂಬೇಡ್ಕರ್ ಯುವಕ ಮಂಡಲ ಮೇಲ್ಗಂಗೊಳ್ಳಿ(ದ್ವಿತೀಯ), ಮಹಾವಿಷ್ಣು ಯುವಕ ಮಂಡಲ ಹರೆಗೋಡು (ತೃತೀಯ), ಜಾನಪದ ನೃತ್ಯದಲ್ಲಿ ಸರಸ್ವತಿ ಯುವಕ ಮಂಡಲ ಮಲ್ಪೆ (ಪ್ರಥಮ), ಮಲ್ಲಿಕಾರ್ಜುನ ಕುಡುಬಿ ಜಾನಪದ ಕಲಾ ಸಂಘ ಮಂದಾರ್ತಿ (ದ್ವಿತೀಯ), ಚೆನ್ನಬಸವೇಶ್ವರ ಯುವಕ ಮಂಡಲ ನಾಯಕವಾಡಿ (ತೃತೀಯ).
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

