ಬ್ಯಾಂಕ್ ಶಾಖೆ ಸ್ಥಳಾಂತರಕ್ಕೆ ಆಕ್ಷೇಪ
ಉಡುಪಿ: ನಗರದ ಕವಿ ಮುದ್ದಣ ಮಾರ್ಗದಲ್ಲಿರುವ ರಾಷ್ಟ್ರೀಕೃತ ವಿಜಯ ಬ್ಯಾಂಕಿನ ಶಾಖೆಯನ್ನು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಹಿಂದಿನ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು ಎಂದು ತಿಳಿದು ಬಂದಿದೆ. ಇದರಿಂದ ಬ್ಯಾಂಕಿನ ಗ್ರಾಹಕರಿಗೆ ಅನುಕೂಲವಾಗುವುದರ ಬದಲು ಸಮಸ್ಯೆಯಾಗುವುದು ಎಂದು ನಿವೃತ್ತ ನೌಕರರ ಉಡುಪಿ ಜಿಲ್ಲಾ ಸಂಘದ ಕಾರ್ಯದರ್ಶಿ ಶ್ರೀನಿವಾಸ ಶೆಟ್ಟಿ ತೋನ್ಸೆ ಆಕ್ಷೇಪಿಸಿದ್ದಾರೆ. ವಿಶೇಷವಾಗಿ, ವಿಜಯ ಬ್ಯಾಂಕಿನ ಮೂಲಕ ನಿವೃತ್ತಿ ವೇತನ ಪಡೆಯುವ ಹಿರಿಯ ನಾಗರಿಕರಿಗೆ ಆ ಕಟ್ಟಡಕ್ಕೆ ಹೋಗಿ ಬರಲು ಕಷ್ಟವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬಂಟಕಲ್ಲು: ವಿದ್ಯಾರ್ಥಿ ಸಂಘ ಉದ್ಘಾಟನೆ
ಉಡುಪಿ: ಬಂಟಕಲ್ಲು ಎಂಜಿನಿರಿಂಗ್ ಕಾಲೇಜಿನ ಪ್ರಥಮ ವಿದ್ಯಾರ್ಥಿ ಸಂಘದ ಉದ್ಘಾಟನೆ ಕಾರ್ಯಕ್ರಮ ಇತ್ತೀಚೆಗೆ ಸಂಸ್ಥೆಯ ಆವರಣದಲ್ಲಿ ಜರುಗಿತು. ಟ್ಯಾಪ್ಮಿ ಮಣಿಪಾಲದ ವಿದ್ಯಾರ್ಥಿ ಸಂಘದ ಮಾಜಿ ಉಪಾಧ್ಯಕ್ಷ ಸುಂದರ ಮಡಕ್ಷಿರ ಭಾಗವಹಿಸಿದ್ದರು. ಪ್ರಾಂಶುಪಾಲ ಡಾ. ರಾಧಾಕೃಷ್ಣ ಎಸ್. ಐತಾಳ್ ಅಧ್ಯಕ್ಷತೆ ವಹಿಸಿದ್ದರು. ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ. ಮಟ್ಟದಲ್ಲಿ ನಡೆದ ಯೋಗ ಸ್ಪರ್ಧೆಯಲ್ಲಿ 3ನೇ ಸ್ಥಾನ ಗೆದ್ದು ಕುರುಕ್ಷೇತ್ರದಲ್ಲಿ ನಡೆಯುವ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರತಿನಿಧಿಸಲು ಅವಕಾಶ ಪಡದ ವಿದ್ಯಾರ್ಥಿ ರಂಗನಾಥರನ್ನು ಸನ್ಮಾನಿಸಲಾಯಿತು. ಟ್ರಸ್ಟ್ ಕಾರ್ಯದರ್ಶಿ ರತ್ನ ಕುಮಾರ್, ಪ್ರೊ. ರವಿಪ್ರಭ, ಪ್ರೊ. ಶ್ರೀನಾಥ ವಾರಂಬಳ್ಳಿ, ಪ್ರೊ. ಕಿಶೋರ್ ಕುಮಾರ್, ಉಷಾ ಎಚ್., ಪ್ರಿಯಾಂಕ ಕೆ. ಆರ್. ಭಟ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಹುಲ್ ಕೋಟ್ಯಾನ್ ಇದ್ದರು.
ಚೂಡಿಪೂಜೆ ಸಂಪನ್ನ
ಶಿರ್ವ: ಇಲ್ಲಿನ ಕಾಶೀಮಠದ ಶ್ರೀಮಹಾಲಸಾ ನಾರಾಯಣಿ ದೇವಳದಲ್ಲಿ ಮಹಾಲಸಾ ನಾರಾಯಣಿ ಮಹಿಳಾ ಸೇವಾ ಸಮಿತಿ ವತಿಯಿಂದ ಶ್ರಾವಣ ಮಾಸದ ಕೊನೆಯ ಭಾನುವಾರದ ಚೂಡಿ ಪೂಜೆ ದೇವಳದಲ್ಲಿ ಸಂಪನ್ನಗೊಂಡಿತು. ಸಮಿತಿ ಅಧ್ಯಕ್ಷೆ ಗೌರಿ ಸತ್ಯನಾರಾಯಣ ನಾಯಕ್, ಸದಸ್ಯರಾದ ರೇಖಾ ಶೆಣೈ, ಗೌರಿ ಶೆಣೈ, ನಮೃತಾ ಕಾಮತ್, ಶ್ಯಾಮಲಾ ಶೆಣೈ, ರಜನಿ ಶೆಣೈ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

