ಅತ್ತೂರು ಕೊಲೆ; ಅಪರಾಧಿಗೆ ಜೀವಾವಧಿ ಶಿಕ್ಷೆ
ಉಡುಪಿ: ಹಣಕಾಸಿನ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಸ್ನೇಹಿತನನ್ನೇ ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಸತ್ರ ನ್ಯಾಯಾಲಯ ಅಪರಾಧಿಗೆ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಅತ್ತೂರು ನಿವಾಸಿ ವೀರೇಂದ್ರ ಪೂಜಾರಿ ಅದೇ ಗ್ರಾಮದ ಸ್ನೇಹಿತ ಸಂದೀಪ ಎಂಬಾತನನ್ನು 2012ರ ಏ. 23ರಂದು ಕೊಲೆ ಮಾಡಿದ್ದ.
ಅತ್ತೂರು ನಿವಾಸಿ ಸಂತೋಷ ಎಂಬವರು ಕುರಿ ಫಂಡ್ ನಡೆಸುತ್ತಿದ್ದು, ಅದರಲ್ಲಿ ವೀರೇಂದ್ರ 20 ಸಾವಿರ ಸಾಲ ಪಡೆದಿದ್ದ. ಆದರೆ ಹಣ ಮರುಪಾವತಿಸದ ಕಾರಣ ಅವರಲ್ಲಿ ಜಗಳವುಂಟಾಗಿತ್ತು. ಇದೇ ಕಾರಣಕ್ಕೆ 2012ರ ಏ.23ರಂದು ವೀರೇಂದ್ರ ಪೂಜಾರಿ ಮತ್ತು ಸಂತೋಷನ ತಮ್ಮ ಸಂದೀಪ್ ನಡುವೆ ಮದುವೆ ಮದರಂಗಿ ಕಾರ್ಯಕ್ರಮವೊಂದರಲ್ಲಿ ಜಗಳ ನಡೆದಿತ್ತು. ಅಲ್ಲಿಂದ ತೆರಳಿದ ವೀರೇಂದ್ರ ಮನೆಗೆ ಬಂದು ತಲವಾರು ತೆಗೆದುಕೊಂಡು ಬಸ್ ನಿಲ್ದಾಣಕ್ಕೆ ಬಂದು ಅಲ್ಲಿದ್ದ ಸಂದೀಪನನ್ನು ಕಡಿದು ಕೊಲೆಗೈದಿದ್ದ. ಈ ಸಂಬಂಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಎಂ. ಅಂಗಡಿ, ಪ್ರಕರಣ ಸಾಬೀತಾಗಿದ್ದರಿಂದ ಅಪರಾಧಿ ವೀರೇಂದ್ರ ಪೂಜಾರಿಗೆ ಜೀವಾವಧಿ ಶಿಕ್ಷೆ ಮತ್ತು 5 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಅಚ್ಚರಿ ಎಂದರೆ ವಿಚಾರಣೆ ಸಂದರ್ಭದಲ್ಲಿ ಘಟನೆಯನ್ನು ನೋಡಿದ ಪ್ರತ್ಯಕ್ಷ ಸಾಕ್ಷಿಗಳು ಕೋರ್ಟ್ನಲ್ಲಿ ವಿರುದ್ಧವಾಗಿ ಸಾಕ್ಷಿ ಹೇಳಿದ್ದರು. ಆದರೆ ಇತರೇ ಸಾಂದರ್ಭಿಕ ಸಾಕ್ಷಿ ಹಾಗೂ ತನಿಖಾಧಿಕಾರಿಯವರು ಸಂಗ್ರಹಿಸಿದ್ದ ಸಾಕ್ಷ್ಯಾಧಾರಗಳಿಂದ ಆರೋಪ ಸಾಬೀತಾಗಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಟಿ.ಎಸ್. ಜಿತೂರಿ ವಾದಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

