ಉಡುಪಿ

ನಿಟ್ಟೆ ಕಾಲೇಜಿಗೆ ಸಂಶೋಧನಾ ಪ್ರಶಸ್ತಿ

Published On :

ನಿಟ್ಟೆ: ಭಾರತೀಯ ಯಂತ್ರ ಸಾಧನಗಳ ತಯಾರಕರ ಒಕ್ಕೂಟ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಯಂತ್ರ ಸಾಧನಗಳ ಪ್ರದರ್ಶನದೊಂದಿಗೆ ಆಯೋಜಿಸಲಾದ ಶೈಕ್ಷಣಿಕ ಸಂಶೋಧನಾ ಪ್ರದರ್ಶನದಲ್ಲಿ ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನ ವತಿಯಿಂದ ಪ್ರದರ್ಶಿದ ಡೆವೆಲಪ್‌ಮೆಂಟ್ ಆಫ್ ಮೈಕ್ರೋ ಇಲೆಕ್ಟ್ರೋ-ಡಿಸ್  ಚಾರ್ಜ್ ಮಿಶಿನ್ ವಿದ್ ಪಿಜೋಆಕ್ಚುವೇಟೆಡ್ ಟೂಲ್ ಫೀಡ್ ಸಿಸ್ಟಮ್ ಎಂಬ ಸಂಶೋಧನಾ ಕಾರ್ಯಕ್ಕೆ 5ನೇ ಶ್ರೇಷ್ಠ ಸಂಶೋಧನಾ ಪ್ರಶಸ್ತಿ ಲಭಿಸಿರುತ್ತದೆ. ಈ ಪ್ರದರ್ಶನದಲ್ಲಿ ರಾಷ್ಟ್ರ ಮಟ್ಟದ ಪ್ರತಿಷ್ಠಿತ 24 ಸಂಸ್ಥೆಗಳು ಭಾಗವಹಿಸಿದ್ದವು.  ಈ ಯಂತ್ರ ಸಾಧನವನ್ನು ಯಾಂತ್ರಿಕ ವಿಭಾಗದ ಪ್ರಾಂಶುಪಾಲ ಡಾ. ಮುರಳೀಧರ್, ಟಿ. ಆರ್. ವೇಣುಗೋಪಾಲ್ ಹಾಗೂ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಡಾ. ರತ್ನಮಾಲಾ ಎಂ. ರಾವ್ ಅವರು ಜಂಟಿಯಾಗಿ ಆವಿಷ್ಕರಿಸಿದ್ದಾರೆ. ಈ ಸಂಶೋಧನೆಯನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ನಿಟ್ಟೆ ವಿದ್ಯಾ ಸಂಸ್ಥೆಯು ಜಂಟಿಯಾಗಿ ಪ್ರಾಯೋಜಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.