ಲಿಂಗ ತಾರತಮ್ಯ ಧೋರಣೆ ವಿರುದ್ಧ ಜನಜಾಗೃತಿ
ಕಾರ್ಕಳ: ಲಿಂಗ ತಾರತಮ್ಯ ಧೋರಣೆ ವಿರುದ್ಧ ನಿಟ್ಟೆ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಂದ ಜನಜಾಗೃತಿ ಕಾರ್ಯಕ್ರಮ ಕಾರ್ಕಳ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿನಿಯರಾದ ಬಿ. ಪ್ರಾಚಿ ಶೆಣೈ ಮತ್ತು ಕಾವ್ಯ ಅಧಿಕಾರಿ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ಹಲವಾರು ದಶಕಗಳಿಂದ ಸಮಾಜದಲ್ಲಿ ಹೆಣ್ಣಿನ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಬಾಲ್ಯವಿವಾಹ, ಸತಿಸಹಗಮನ ಮೊದಲಾದವುಗಳು ಕಡಿಮೆಯಾದರೂ ವರದಕ್ಷಿಣೆ ಕಿರುಕುಳ, ಅತ್ಯಾಚಾರ, ಭ್ರೂಣಹತ್ಯೆಯಂತಹ ಸಾಮಾಜಿಕ ಪಿಡುಗುಗಳು ನಿರಂತರವಾಗಿ ಮುಂದುವರಿದಿದೆ. ಇಂತಹ ದೌರ್ಜನ್ಯದಿಂದಾಗಿ ಇಂದು ಹೆಣ್ಣು ಮಗುವಿನ ಜನನದ ಸಂಖ್ಯೆ ಕಡಿಮೆಯಾಗುತ್ತಿದೆ. ವಿಕೃತ ಮನಸ್ಸಿನ ದಾಳಿಗೆ ನಿರಂತರವಾಗಿ ಹೆಣ್ಣು ಬಲಿಪಶುವಾಗುತ್ತಿದ್ದಾಳೆ.
ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯ, ಶೋಷಣೆ ವಿರುದ್ಧ ಹಲವಾರು ಕಾನೂನುಗಳಿದ್ದರೂ ಪುರುಷ ಪ್ರಧಾನ ಸಮಾಜದಲ್ಲಿ ಈ ಕಾನೂನುಗಳ ಕಠಿಣ ಅನುಷ್ಠಾನ ಸಾಧ್ಯವಾಗಿಲ್ಲ ಎಂದರು. ಇದರ ವಿರುದ್ಧ ನಾವು ಸಂಘಟಿತರಾಗಿ ಧ್ವನಿ ಎತ್ತಬೇಕು. ಲಿಂಗ ತಾರತಮ್ಯ ಧೋರಣೆಯನ್ನು ಸಮಾಜದಿಂದ ನಾಶಪಡಿಸಬೇಕು. ಇದಕ್ಕಾಗಿ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಿ, ವರದಕ್ಷಿಣೆ ನೀಡಬೇಡಿ ಹಾಗೂ ಪಡೆಯಬೇಡಿ. ಭ್ರೂಣಹತ್ಯೆ ಮಹಾಪರಾಧ. ಎಲ್ಲಿಯೂ ನಡೆದರೂ ಪೊಲೀಸರಿಗೆ ತಿಳಿಸಿ. ಗಂಡು ಮತ್ತು ಹೆಣ್ಣು ಮಕ್ಕಳಲ್ಲಿ ತಾರತಮ್ಯ ಮಾಡದಿರಿ. ಕಡ್ಡಾಯವಾಗಿ ಮತದಾನ ಮಾಡಿ ಈ ಮೂಲಕ ಹೆಣ್ಣಿನ ಸ್ವಾತಂತ್ರ್ಯಕ್ಕೆ, ರಕ್ಷಣೆಗೆ ಬದ್ಧರಾಗಿರುವ ಅಭ್ಯರ್ಥಿಯನ್ನು ಆಯ್ಕೆ ಮಾಡಿ. ನಮ್ಮನ್ನೆಲ್ಲಾ ಹೆತ್ತು, ಬೆಳೆಸಿ ನಮ್ಮೆಲ್ಲರ ಜನನಕ್ಕೆ ಕಾರಣರಾದ ಆ ತಾಯಿಯ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳುತ್ತಾ ಅವರು ಜಾಗೃತಿ ಮೂಡಿಸಿದರು.
ಬೀಳ್ಕೊಡುಗೆ ಸಮಾರಂಭ
ಉಡುಪಿ: ಇಲ್ಲಿನ ಸಿಂಡಿಕೇಟ್ ಬ್ಯಾಂಕಿನಲ್ಲಿ ಸುಮಾರು 33 ವರ್ಷ ಕರ್ತವ್ಯ ನಿರ್ವಹಿಸಿ ಇತ್ತೀಚೆಗೆ ನಿವೃತ್ತರಾದ ವೆಂಕಟರಮಣ ಆಚಾರ್ಯ ಹಾಗು ಅವರ ಪತ್ನಿ ಮಾಲತಿ ವಿ. ಆಚಾರ್ಯ ಅವರನ್ನು ಇತ್ತೀಚೆಗೆ ನಗರದ ಬ್ರಹ್ಮಗಿರಿಯ ಶಾಖೆಯಲ್ಲಿ ಅಭಿನಂದಿಸಲಾಯಿತು. ಬ್ರಹ್ಮಗಿರಿ ಶಾಖೆಯ ಪ್ರಬಂಧಕ ದೇವೆಂದ್ರ ಭಕ್ತ, ಅಧಿಕಾರಿಗಳಾದ ಅನಿತಾ ಶೆಣೈ, ಸುದರ್ಶನ್ ರಾವ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

