ಶ್ರೀ ವಿದ್ಯಾವಲ್ಲಭ ತೀರ್ಥರಿಗೆ ಪೌರ ಸನ್ಮಾನ
ಉಡುಪಿ: ಕೃಷ್ಣ ಮಠದಲ್ಲಿ 18ರಂದು ಪರ್ಯಾಯ ಪೀಠಾರೋಹಣ ನಡೆಸಲಿರುವ ಕಾಣಿಯೂರು ಮಠದ 30ನೇ ಯತಿ ಶ್ರೀವಿದ್ಯಾವಲ್ಲಭ ತೀರ್ಥರಿಗೆ ಬುಧವಾರ ಸಂಜೆ ರಥಬೀದಿಯಲ್ಲಿ ಉಡುಪಿಯ ಸಮಸ್ತ ನಾಗರಿಕರ ಪರವಾಗಿ ಪೌರ ಸನ್ಮಾನ ನಡೆಯಿತು.
ಪರ್ಯಾಯಕ್ಕೆ ಪೂರ್ವಭಾವಿಯಾಗಿ ದೇಶಸಂಚಾರ ಮುಗಿಸಿ ಹಿಂತಿರುಗಿದ ಶ್ರೀಗಳನ್ನು ವೈಭವದಿಂದ ನಗರಕ್ಕೆ ಬರಮಾಡಿಕೊಂಡು ಮೆರವಣಿಗೆಯಲ್ಲಿ ರಥಬೀದಿಗೆ ಕರೆದು ತಂದು ನಗರಸಭೆ ನಾಗರಿಕರ ಪರವಾಗಿ ಈ ಸನ್ಮಾನ ಕಾರ್ಯಕ್ರಮ ನಡೆಸಿತು. ಪ್ರಸ್ತುತ ಪರ್ಯಾಯ ಪೀಠದಲ್ಲಿರುವ ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥರು ಅಧ್ಯಕ್ಷತೆ ವಹಿಸಿದ್ದರು.
ನಗರಸಭೆ ಅಧ್ಯಕ್ಷ ಪಿ. ಯುವರಾಜ್, ಉಪಾಧ್ಯಕ್ಷೆ ಅಮೃತಾ ಕೃರ್ಷ್ಣಮೂರ್ತಿ, ಪೌರಾಯುಕ್ತ ಶ್ರೀಕಾಂತ್ ರಾವ್, ಸಚಿವ ವಿನಯಕುಮಾರ್ ಸೊರಕೆ, ಶಾಸಕ ಪ್ರಮೋದ್ ಮಧ್ವರಾಜ್ ಸನ್ಮಾನ ನಡೆಸಿದರು.
ಜಿಲ್ಲಾಡಳಿತದ ಪರವಾಗಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಬೋರಲಿಂಗಯ್ಯ ಎಂ. ಬಿ., ಧರ್ಮಸ್ಥಳ ಕ್ಷೇತ್ರದ ಪರವಾಗಿ ಗ್ರಾಮಾಭಿವೃದ್ಧಿ ಯೋಜನೆ ಅಧಿಕಾರಿ ದುಗ್ಗೇಗೌಡ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಕೆ. ರಘುಪತಿ ಭಟ್, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ ರಾಘವೇಂದ್ರ ರಾವ್, ಕಾಣಿಯೂರು ಮಠದ ದಿವಾಣ ರಘುಪತಿ ಆಚಾರ್ಯ, ಗೀತಾ ವಾಸುದೇವ ಇದ್ದರು.
ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಆಚಾರ್ಯ ಸ್ವಾಗತಿಸಿದರು, ಪೆರಂಪಳ್ಳಿ ವಾಸುದೇವ ರಾವ್ ಮತ್ತು ಪ್ರೊ.ಎಂ.ಎಲ್. ಸಾಮಗ ನಿರೂಪಿಸಿದರು.
--
ವಿಕಲಚೇತನ ಮಕ್ಕಳ ತಂಡಕ್ಕೆ ಗೌರವ
ಹೆಬ್ರಿ: ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ರಾಜ್ಯಮಟ್ಟದ ವಿಕಲಚೇತನಾ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಮಕ್ಕಳ ಕ್ರೀಡಾಕೂಟಕ್ಕೆ ಉಡುಪಿ ಜಿಲ್ಲೆಯಿಂದ ತೆರಳಿದ 12 ಕ್ರೀಡಾಳುಗಳ ತಂಡಕ್ಕೆ ಹೆಬ್ರಿಯ ಚೈತನ್ಯ ಯುವ ವೃಂದದಿಂದ ವಿಶೇಷ ಸತ್ಕಾರ ನೀಡಿ ಗೌರವಿಸಲಾಯಿತು. ಚೈತನ್ಯ ಯುವ ವೃಂದದ ಗೌರವ ಸಲಹೆಗಾರ ಭಾಸ್ಕರ ಜೋಯಿಸ್ ಗೌರವಿಸಿದರು. ಸ್ಥಾಪಕ ಅಧ್ಯಕ್ಷ ಪ್ರಕಾಶ ಮಲ್ಯ, ಕಟ್ಟಡ ಸಮಿತಿ ಅಧ್ಯಕ್ಷ ಜನಾರ್ದನ್, ನಿರ್ದೇಶಕ ದಿವಾಕರ ಶೆಟ್ಟಿ, ಚೈತನ್ಯ ವಸಂತ ಶೆಟ್ಟಿ, ದೇವಾನಂದ ನಾಯಕ್, ಶೇಖರ ನಾಯ್ಕ್, ನರೇಂದ್ರ ನಾಯಕ್, ವಸಂತ ಪ್ರಭು, ಶಂಕರ ಶೇರಿಗಾರ್, ಪ್ರಸಾದ ಶೆಟ್ಟಿ, ಇಲಾಖೆಯ ಅಧಿಕಾರಿಗಳಾದ ಡಿಐಆರ್ಟಿ ಶಿವಾಜಿ, ಐಆರ್ಟಿ ಗಂಗೇ ಶ್ಯಾನುಭೋಗ್, ವಿಶೇಷ ಶಿಕ್ಷಕಿಯರಾದ ಗೀತಾ ಹೆಗ್ಡೆ, ಹೆಬ್ರಿ ವಿದ್ಯಾಜನಾರ್ದನ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

