ಉಡುಪಿ

ದ್ವೇಷ ಸಂಹಾರದಿಂದ ಉಗ್ರರ ನಾಶ: ಪುತ್ತಿಗೆ ಶ್ರೀ

Published On :

ಉಡುಪಿ:  ಜಗತ್ತಿನಲ್ಲಿ ದ್ವೇಷ ಬಿತ್ತರಿಸಿ ಅದರ ಮೂಲಕ ಸ್ವಾರ್ಥ ಸಾಧನೆ ಮಾಡಲಾಗುತ್ತಿದೆ. ಈ ಮಾನಸಿಕ ದ್ವೇಷದ ಸಂಹಾರವಾಗದೆ ಉಗ್ರರ ನಾಶ ಅಸಾಧ್ಯ ಎಂದು ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಬುಧವಾರ ಕಷ್ಣಮಠದ ರಾಜಾಂಗಣದಲ್ಲಿ ನಡೆದ ಕಾಣಿಯೂರು ಪರ್ಯಾಯೋತ್ಸದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ದೈವಿಕ ಶಕ್ತಿ: ಇಡಿ ಜಗತ್ತು ನಡೆಯುತ್ತಿರುವುದೇ ದೈವಿಕ ಶಕ್ತಿಯಿಂದ. ಮನುಷ್ಯರು ದೇವತೆಗಳ ಆರಾಧನೆ ಮಾಡಬೇಕು, ದೇವತೆಗಳು ಮನುಷ್ಯರ ಅಗತ್ಯಗಳನ್ನು ಪೂರೈಸಬೇಕು ಎಂದು ಶ್ರೀಕೃಷ್ಣ ಹೇಳಿದ್ದಾನೆ. ನಮ್ಮ ಹೊಸ ಅನ್ವೇಷಣೆ, ತಂತ್ರಜ್ಞಾನ ಇತ್ಯಾದಿಗಳಿಂದ ಜಗತ್ತು ನಡೆಯುತ್ತಿದೆ ಎನ್ನುವ ಭ್ರಮೆ ಹೋಗಬೇಕಾದರೆ ಒಂದು ಭೂಕಂಪವಾಗಬೇಕು ಅಥವಾ ಮಳೆ ನಿಲ್ಲಬೇಕು. ಆಗ ದೈವಿ ಶಕ್ತಿಯ ಅನುಭವವಾಗುತ್ತದೆ. ಆದ್ದರಿಂದ ಎಲ್ಲರೂ ದೇವರನ್ನು ಆರಾಧನೆ ಮಾಡಬೇಕು ಎಂದರು.
ಪರ್ಯಾಯ ಅಪೂರ್ವ ವ್ಯವಸ್ಥೆ: ಉಡುಪಿಯಲ್ಲಿ ಮಧ್ವಾಚಾರ್ಯರು ಪ್ರತಿಷ್ಠಾಪಿಸಿದ ಶ್ರೀಕೃಷ್ಣನ ಪೂಜೆಗೆ ನಡೆಯುವ ಪರ್ಯಾಯ ಜಗತ್ತಿನಲ್ಲಿಯೇ ಅತ್ಯಂತ ಅಪೂರ್ವ ವ್ಯವಸ್ಥೆ. ಉಡುಪಿಯಲ್ಲಿ ಶ್ರೀಕೃಷ್ಣನನ್ನು ಜಗದ್ಗುರು ಹಾಗೂ ಜಗದೊಡೆಯ ಎಂಬ ಎರಡೂ ನೆಲೆಯಲ್ಲಿ ಆರಾಧಿಸಲಾಗುತ್ತಿದೆ ಎಂದರು.
ಕೃಷ್ಣನಿದ್ದಲ್ಲಿ ಸುಭಿಕ್ಷೆ: ಪರ್ಯಾಯ ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಮಾತನಾಡಿ, ಶ್ರೀಕೃಷ್ಣ ಎಲ್ಲಿರುತ್ತಾನೋ ಅಲ್ಲಿ ಸುಭಿಕ್ಷೆ ಇರುತ್ತದೆ. ಪುತ್ತಿಗೆ ಶ್ರೀಗಳು ಅಮೆರಿಕಾ ಮೊದಲಾದ ದೇಶಗಳಿಗೆ ಹೋಗಿ ಅಲ್ಲಿ ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತಿರುತ್ತಾರೆ ಎನ್ನುವವರಿದ್ದಾರೆ. ಆದರೆ ವಿದೇಶಗಳಲ್ಲಿಯೂ ಓಡಾಡಿ, ಶ್ರಮವಹಿಸಿ ಧರ್ಮದ ಪ್ರಚಾರ ಮಾಡುವ ಏಕೈಕ ವ್ಯಕ್ತಿಯಾಗಿದ್ದಾರೆ. ಅವರ ಈ ಒಳ್ಳೆಯ ಕಾರ್ಯ ಸ್ತುತ್ಯರ್ಹ ಎಂದರು. ಮಠದ ದಿವಾನ ರಘುಪತಿ ಆಚಾರ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬೋರಲಿಂಗಯ್ಯ ಎಂ.ಬಿ., ನಗರಸಭೆ ಅಧ್ಯಕ್ಷ ಯುವರಾಜ, ಉಪಾಧ್ಯಕ್ಷೆ ಅಮೃತಾ ಕೃಷ್ಣಮೂರ್ತಿ ಇದ್ದರು. ವಾಸುದೇವ ಭಟ್ ಪೆರಂಪಳ್ಳಿ ಸ್ವಾಗತಿಸಿ,  ನಿರೂಪಿಸಿದರು. ರಾಘವೇಂದ್ರ ಆಚಾರ್ಯಸಹಕರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.