ಪುರಂದರ ದಾಸರ ಚತುಃಶತಮಾನೋತ್ಸವ ದತ್ತಿ ಉಪನ್ಯಾಸ
ಹೆಬ್ರಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ತಾಲೂಕು ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಇಲ್ಲಿನ ನವೋದಯ ವಿದ್ಯಾಲಯದಲ್ಲಿ ಪುರಂದರ ದಾಸರ ಚತುಶತಮಾನೋತ್ಸವ ದತ್ತಿ ಉಪನ್ಯಾಸ ಕಾರ್ಯಕ್ರಮ ಇತ್ತೀಚಿಗೆ ಜರಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಪ್ರಾಂಶುಪಾಲ ನಾರಾಯಣ ಹೆಬ್ಬಾರ್ ಅವರು ಸಾಹಿತ್ಯ, ಸಂಗೀತ ಕಲೆಗಳಲ್ಲಿ ಅಭಿಮಾನ ಇಲ್ಲದವರು ಪಶುಸಮಾನರು. ದಾಸ ಸಾಹಿತ್ಯ ನಮ್ಮ ಬದುಕಿಗೆ ಪ್ರೇರಣೆ ನೀಡಿ ಸಮಾಜದ ಪರಿವರ್ತನೆಗೆ ನಾಂದಿ ಹಾಡಿದೆ ಎಂದರು. ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಸಿ. ರಾವ್, ಸಮಾಜ ಸೇವಕ ಎಚ್. ಭಾಸ್ಕರ ಜೋಯಿಷಾ, ನವೋದಯ ವಿದ್ಯಾಲಯದ ಪ್ರಾಂಶುಪಾಲ ಪ್ರೋ. ಕೆ.ವಿ. ಸುರೇಶ್ ಉಪಸ್ಥಿತರಿದ್ದರು.
ಮೂಲ ಹಕ್ಕಿನೊಂದಿಗೆ ಕರ್ತವ್ಯ ಪಾಲನೆ ಅಗತ್ಯ: ನಾಗಜ್ಯೋತಿ
ಉಡುಪಿ: ಭಾರತೀಯ ಸಂವಿಧಾನ ಎಲ್ಲಾ ಕಾನೂನು ನಿಯಾಮಾವಳಿಗಳಿಗೆ ಅಡಿಪಾಯವಾಗಿದೆ. ಇಲ್ಲಿ ಉಲ್ಲೇಖವಾಗಿರುವ ಮೂಲಭೂತ ಹಕ್ಕುಗಳ ಜೊತೆಗೆ ಕರ್ತವ್ಯಗಳ ಪಾಲನೆ ನಡೆಯಬೇಕು ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ನಾಗಜ್ಯೋತಿ ಹೇಳಿದರು. ಅವರು ವಳಕಾಡು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಉಡುಪಿ ಸಾರ್ವಜನಿಕ ಶಿಕ್ಷಣ ಇಲಾಖೆ, ಉಡುಪಿ ಮತ್ತು ವಕೀಲರ ಸಂಘದ ಆಶ್ರಯದಲ್ಲಿ ಇತ್ತೀಚಿಗೆ ನಡೆದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಶಿಕ್ಷಕಿ ನಿರ್ಮಲಾ ಬಿ. ಅಧ್ಯಕ್ಷತೆ ವಹಿಸಿದ್ದರು. ಉಡುಪಿ ವಕೀಲರ ಸಂಘದ ಅಧ್ಯಕ್ಷ ಮಾಧವ ಆಚಾರ್ಯ, ನಗರಸಭೆ ಸದಸ್ಯೆ ಗೀತಾ ಶೇಟ್, ಶಾಲಾಡಳಿತ ಮಂಡಳಿಯ ಇಂದು ರಮಾನಂದ ಭಟ್, ಸಂಪನ್ಮೂಲ ವ್ಯಕ್ತಿಗಳಾಗಿ ನ್ಯಾಯವಾದಿ ದೇವರಾಜ ಶೆಟ್ಟಿಗಾರ್ ಇದ್ದರು.
ಅಧಿಕಾರಿಗಳಿಗೆ ಅಭಿನಂದನೆ
ಉಡುಪಿ: ರಾಷ್ಟ್ರಪತಿಗಳು ಕೊಡ ಮಾಡುವ ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾದ ಪಶ್ಚಿಮ ವಲಯ ಐ.ಜಿ.ಪಿ. ಸೀಮಂತ್ ಕುಮಾರ್ ಸಿಂಗ್, ಉಡುಪಿ ಹೆಚ್ಚುವರಿ ಎಸ್.ಪಿ. ಸಂತೋಷ್ ಕುಮಾರ್, ಎಸ್.ಪಿ. ಸಿ.ಎಸ್.ಪಿ. ಮಹದೇವಯ್ಯ ಹಾಗೂ ಎ.ಎಸ್.ಐ. ಸದಾನಂದ ಭಂಡಾರಿ ಅವರಿಗೆ ಜಿಲ್ಲಾ ಬಿ.ಜೆ.ಪಿ ವತಿಯಿಂದ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ಅಭಿನಂದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

