'ರಂಗ ಮಾಧ್ಯಮದಿಂದ ಸಂಸ್ಕೃತಿ ಪುನಶ್ಚೇತನ'
ಉಡುಪಿ: ಕೆಲವು ಮಾಧ್ಯಮಗಳಿಂದ ಶುದ್ಧ ಸಂಸ್ಕೃತಿ ನಾಶ ಮಾಡುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಆದ್ದರಿಂದ ರಂಗ ಮಾಧ್ಯಮದ ಮೂಲಕ ಶುದ್ಧ ಸಂಸ್ಕೃತಿ ಪುನಶ್ಚೇತನಗೊಳಿಸುವ ಪ್ರಯತ್ನ ನಡೆಯಬೇಕಾಗಿದೆ ಎಂದು ಹಿರಿಯ ರಂಗಕರ್ಮಿ, ಸಾಹಿತಿ ಉದ್ಯಾವರ ಮಾಧವ ಆಚಾರ್ಯ ಹೇಳಿದ್ದಾರೆ.
ಇತ್ತೀಚೆಗೆ ಇಲ್ಲಿನ ಪಾಂಬೂರು ಗ್ರಾಮದ ಚರ್ಚ್ ವಠಾರದಲ್ಲಿ ಪರಿಚಯ ಪಾಂಬೂರು ಸಂಸ್ಥೆ ಆಯೋಜಿಸಿದ್ದ 3 ದಿನಗಳ 'ನಾಟಕೋತ್ಸವ- 2014'ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಾಂಸ್ಥಿಕ ಬೆಂಬಲವಿದ್ದರೆ ನಾಶ ಅಸಾಧ್ಯ: ಜಗತ್ತು ವಿಶಾಲವಾಗಿದೆ, ಕಾಲ ಅನಂತವಾಗಿದೆ. ನಾಟಕ ನೋಡುವವರು, ಆಸ್ವಾದಿಸುವವರು ಹಿಂದೆಯೂ ಇದ್ದರು, ಮುಂದೆಯೂ ಬರುತ್ತಾರೆ. ನಡುವೆ ಬೇರೆ ಮಾಧ್ಯಮಗಳ ಪ್ರಭಾವದಿಂದ ನಾಟಕರಂಗ ಸ್ವಲ್ಪ ಹಿನ್ನಡೆ ಸಾಧಿಸಿದ್ದು ನಿಜ. ಆದರೆ ಯಾವುದೇ ಕಲೆಗೆ ಸಾಂಸ್ಥಿಕ ಬೆಂಬಲ ಇದ್ದಾಗ ಅದನ್ನು ನಾಶ ಮಾಡುವುದು ಸಾಧ್ಯ ಇಲ್ಲ ಎಂದು ಅವರು ಅಭಿಪ್ರಾಯಪಟ್ಟರು..
ಸ್ಥಳೀಯ ಚರ್ಚ್ ಧರ್ಮಗುರು ಪಾವ್ಲ್ ರೇಗೊ ಮಾತನಾಡಿ, ನಾಟಕಗಳು ಪ್ರೇಕ್ಷಕರಲ್ಲಿ ಹೊಸತನದ ಜೊತೆಗೆ ಆಳವಾದ ಚಿಂತನೆಗೆ ಅವಕಾಶ ಮಾಡಿಕೊಡುತ್ತವೆ. ಸಮಾಜದಲ್ಲಿ ಜಾಗೃತಿ ಮೂಡಿಸಲು ಇಂತಹ ಪ್ರಯತ್ನ ನಡೆಯಲೇಬೇಕು ಎಂದರು.
ಸಂಸ್ಥೆಯ ಗೌರವ ಅಧ್ಯಕ್ಷ ಪ್ರೊ. ವಿನ್ಸೆಂಟ್ ಆಳ್ವ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆಯ ಗೌರವ ಮಾರ್ಗದರ್ಶಕ ಕೆ.ಎಸ್. ಶ್ರೀಧರಮೂರ್ತಿ, ಕೋಶಾಧಿಕಾರಿ ಐವನ್ ಪೀಟರ್ ಇದ್ದರು. ಸಾರ್ವಜನಿಕ ಸಂಪರ್ಕಾಧಿಕಾರಿ ಬಿ. ಪುಂಡಲೀಕ ಮರಾಠೆ ನಿರೂಪಿಸಿದರು. ಕಾರ್ಯದರ್ಶಿ ಪ್ರಕಾಶ್ ನೊರೋನ್ನಾ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

