ಉಡುಪಿ

ಕ್ಷೇಮಾ ಹೆಲ್ತ್ ಕಾರ್ಡ್ ನೋಂದಣಿ ಇಂದಿನಿಂದ

Published On :

ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಹಾಗೂ ದೇರಳಕಟ್ಟೆ ಕ್ಷೇಮಾ ಆಸ್ಪತ್ರೆ ಸಹಯೋಗದೊಂದಿಗೆ ಬಂಟ್ವಾಳ ರೋಟರಿ ಕ್ಷೇಮಾ ಹೆಲ್ ಕಾರ್ಡ್ ವಿಮಾ ಯೋಜನೆ ನೋಂದಣಿ ಕಾರ್ಯಕ್ರಮ ಜು.20ರಿಂದ ಆರಂಭಗೊಳ್ಳಲಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಬಿ. ಪ್ರಕಾಶ ಕಾರಂತ ತಿಳಿಸಿದರು. ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜು.20ರಂದು ಬೆಳಗ್ಗೆ 9ರಿಂದ 12.30ರವರೆಗೆ ಬಡಗಬೆಳ್ಳುರು ಹಿರಿಯ ಪ್ರಾಥಮಿಕ ಶಾಲೆ, ಬೆಂಜನಪದವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಜು.23ರಂದು ಬೆಳಗ್ಗೆ 9ರಿಂದ 12.30ರವರೆಗೆ ಅಮ್ಮುಂಜೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಜು.27ರಂದು ಬೆಳಗ್ಗೆ 9ರಿಂದ 12.30ರವರೆಗೆ ನರಿಕೊಂಬು ಪ್ರಕಾಶ ಕಾರಂತರ ಮನೆಯಲ್ಲಿ, ಮಧ್ಯಾಹ್ನ 2.30ರಿಂದ 4.30ರವರೆಗೆ ಡಾ. ಗಂಗಾಧರ್ ಅವರ ಗಂಗಾಪುಷ್ಪ ಸಭಾಭವನದಲ್ಲಿ, ಆ.3ರಂದು ಬೆಳಗ್ಗೆ ಸುದೆಕಾರು ಶ್ರೀ ಚಾಮುಂಡೇಶ್ವರಿ ದೈವಸ್ಥಾನ ಹಾಗೂ ಮಧ್ಯಾಹ್ನ ಕುಕ್ಕಾಜೆ ಗ್ರಾ ಪಂ ಸಭಾಭವನದಲ್ಲಿ ಕ್ಷೇಮಾ ಹೆಲ್ತ್ ಕಾರ್ಡ್ ನೋಂದಣಿ ಕಾರ್ಯ ನಡೆಯಲಿದೆ ಎಂದು ಪ್ರಕಾಶ ಕಾರಂತ ತಿಳಿಸಿದರು.ಸೇವಾಂಜಲಿ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ, ಸಂಜೀವ ಪೂಜಾರಿ, ಬಸ್ತಿ ಮಾಧವ ಶೆಣೈ ಇದ್ದರು.


ಚಲಿಸುತ್ತಿದ್ದ ಕಾರಿನ ಮೇಲೆ
ಮರ ಬಿದ್ದು ಮೂವರಿಗೆ ಗಾಯ

ಮೂಲ್ಕಿ: ಮೂಲ್ಕಿ- ಮೂಡುಬಿದಿರೆ ರಾಜ್ಯ ಹೆದ್ದಾರಿಯ ಅಂಗರಗುಡ್ಡೆ ತಿರುವು ಬಳಿ ದೊಡ್ಡ ಮರವೊಂದು ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದು ಕಾರು ಜಖಂಗೊಂಡ ಘಟನೆ ಶನಿವಾರ ಸಂಜೆ ನಡೆದಿದೆ. ಬಿರುಗಾಳಿ ಸಹಿತ ಮಳೆಗೆ ರಸ್ತೆ ಬದಿಲಯಲ್ಲಿದ್ದ ಮರ ರಸ್ತೆಗಡಲಾಗಿ ಬಿದ್ದಿದೆ. ಈ ಸಂದರ್ಭ ಇದೇ ರಸ್ತೆಯಲ್ಲಿ ಹೋಗುತ್ತಿದ್ದ ಕಾರಿನ ಮೇಲೆ ಮರ ಬಿದ್ದಿದ್ದು ಕಾರಿನಲ್ಲಿದ್ದ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಹೆಚ್ಚಿನ ಅನಾಹುತವಾಗಿಲ್ಲ. ಹಿಂದಿನಿಂದ ಬರುತ್ತಿದ್ದ ಕಾರು ಮತ್ತು ಬೈಕ್ ಅಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರು ಮರದ ಗೆಲ್ಲುಗಳನ್ನು ಕಡಿಯುವ ಮೂಲಕ ಕಾರನ್ನು ತೆರವುಗೊಳಿಸಿ ರಸ್ತೆ ಸಂಚಾರ ಸುಗಮಗೊಳಿಸಿದರು. ಬಿರುಸಿನ ಗಾಳಿ ಮಳೆಗೆ ಐಕಳ ಗ್ರಾಪಂ ವ್ಯಾಪ್ತಿಯ ನಾಗನಕಲ್ಲು ನಿವಾಸಿ ರಮೇಶ್ ಎಂಬವರ ಮನೆ ಕುಸಿದು ಬಿದ್ದು ಸುಮಾರು 75000 ನಷ್ಟ ಸಂಭವಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.