ಉಡುಪಿ

'ಸೇವಾ ಮನೋಭಾವವಿದ್ದರೆ ಯಶಸ್ಸು ಸಾಧ್ಯ'

Published On :

ಉಡುಪಿ: ಸಮಾಜ ಸೇವೆ ಸವಾಲಿನ ಕ್ಷೇತ್ರವಾಗಿದ್ದು, ಸೇವೆಯ ಪರಿಕಲ್ಪನೆ ಕಾಲ- ಕಾಲಕ್ಕೆ ಬದಲಾಗುತ್ತದೆ. ಬದಲಾವಣೆಯ ವೇಗಕ್ಕೆ ಹೊಂದಿಕೊಂಡು ಸೇವಾ ಮನೋಭಾವದಿಂದ ಕೆಲಸ ಮಾಡಿದರೆ ಯಶಸ್ಸು ಸಾಧ್ಯ ಎಂದು ಮಾನವ ಹಕ್ಕು ಹೋರಾಟಗಾರ ಡಾ. ರವೀಂದ್ರನಾಥ ಶ್ಯಾನುಭಾಗ್ ಹೇಳಿದ್ದಾರೆ. ಅವರು ಇತ್ತೀಚೆಗೆ ನಡೆದ ಉಡುಪಿ ಜಿಲ್ಲಾ ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರ ಅಭ್ಯಾಸ ವರ್ಗದ ದಿಕ್ಸೂಚಿ ಭಾಷಣ ಮಾಡಿದರು. ಹಿರಿಯ ಸಾಮಾಜಿಕ ಕಾರ್ಯಕರ್ತರಾದ ನೇರಳಕಟ್ಟೆ ದೇವದಾಸ ನಾಯಕ್ ಅಭ್ಯಾಸವರ್ಗ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಸಿದ್ದಾಪುರ ಗೋಪಿನಾಥ ಕಾಮತ್, ಕಟಪಾಡಿ ಸತ್ಯೇಂದ್ರ ಪೈ ಭಾಗವಹಿಸಿದ್ದರು. ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಕೋಟಾ ಜಿ. ಸತೀಶ್ ಹೆಗ್ಡೆ ಸ್ವಾಗತಿಸಿ, ಸಂಚಾಲಕ ಆರ್. ವಿವೇಕಾನಂದ ಶೆಣೈ  ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಅಭ್ಯಾಸವರ್ಗದ ವಿವಿಧ ಗೋಷ್ಠಿಗಳು ಮತ್ತು ಕಾರ್ಯಕಲಾಪಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ತಿಕ್ ಪೈ ನಿರೂಪಿಸಿ, ಸಚ್ಚೇರಿಪೇಟೆ ರಾಮಚಂದ್ರ ನಾಯಕ್ ವಂದಿಸಿದರು.
ಗಿಡಮೂಲಿಕೆಗಳ ಮಹತ್ವ ಕುರಿತ ಶಿಬಿರ
ಉಡುಪಿ: ಸನಾತನ ಸಂಸ್ಥೆಯ ವತಿಯಿಂದ ಆಯುರ್ವೇದದಲ್ಲಿ ಗಿಡಮೂಲಿಕೆಗಳ ಮಹತ್ವ ಶಿಬಿರವು ಇತ್ತೀಚೆಗೆ ನಗರದಲ್ಲಿ ನಡೆಯಿತು. ಆಯುರ್ವೇದ ಪಂಡಿತ ಎಂ. ಗೋಪಾಲಕೃಷ್ಣ ಮಲ್ಯ ಅವರು ವಿವಿಧ ಔಷಧೀಯ ಗಿಡಗಳನ್ನು ಮತ್ತು ಔಷಧಿಗಳನ್ನು ಪರಿಚಯಿಸಿದರು. ಶಿಬಿರದಲ್ಲಿ ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಭುಜಂಗ ಶೆಟ್ಟಿ, ಆಸಾರಾಮ ಬಾಪೂ ಅವರ ಭಕ್ತರಾದ ಸತೀಶ್ ಪಡಿಯಾರ್, ಮಾತಾ ಅಮೃತಾನಂದಮಯಿ ಸಂಸ್ಥೆಯ ಆನಂದ ಅಮೀನ್ ಹಾಗೂ ಇತರ ಸಂಘಟನೆಯ 25 ಜನರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.