ಉಡುಪಿ

ಬಾಹುಬಲಿ ನೂತನ ಮೂರ್ತಿ ಮೂಡುಬಿದಿರೆ ಮೆರವಣಿಗೆ 8ರಂದು

Published On :

ಕಾರ್ಕಳ: ಇಲ್ಲಿನ ಜೋಡುಕಟ್ಟೆಯಲ್ಲಿ ಶಿಲ್ಪಿಗಳಾದ ಮಾರಿಮುತ್ತು ಹಾಗೂ ರಾಜೇಂದ್ರ 10 ತಿಂಗಳಲ್ಲಿ ನಿರ್ಮಿಸಿದ 15.5 ಅಡಿ ಎತ್ತರದ ಸುಂದರ ಬಾಹುಬಲಿ ಮೂರ್ತಿಯನ್ನು ಮೆರವಣಿಗೆ ಮೂಲಕ 8ರಂದು ಮೂಡುಬಿದಿರೆಗೆ ಸಾಗಿಸಲಾಗುವುದು ಎಂದು ಮೂಡುಬಿದಿರೆ ಜೈನಮಠಾಧೀಶ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದ್ದಾರೆ.
ನಲ್ಲೂರು ಕೂಷ್ಮಾಂಡಿನಿ ಸಭಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೊದಲು ಈ ಮೂರ್ತಿಯನ್ನು ಜಾರ್ಖಂಡ್ ರಾಜ್ಯದ ಮಧುಬನ್ನ ಸಮ್ಮೇದ ಶೀಖರ್ಜಿ ಎಂಬಲ್ಲಿ ಪ್ರತಿಷ್ಠಾಪಿಸಲು ನಿರ್ಧರಿಸಲಾಗಿತ್ತು. ಆದರೆ ಇದೀಗ  ಖಚಿತವಾದ ಸ್ಥಳ ನಿಗದಿಯಾಗಿಲ್ಲ ಎಂದರು.
ಜೋಡುಕಟ್ಟೆಯಿಂದ ಬೆಳಗ್ಗೆ 10.30ಕ್ಕೆ ಟ್ರಾಲಿ ಮೂಲಕ ಮೂಡುಬಿದಿರೆಯತ್ತ ಬಾಹುಬಲಿ ವಿಗ್ರಹ ಮೆರವಣಿಗೆಗೆ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಚಾಲನೆ ನೀಡುವರು. ಸುನಿಲ್ ಕುಮಾರ್ ಬಜಗೋಳಿ, ಮಹಾವೀರ ಜೈನ್ ಹಾಗೂ ಮಿಯಾರು ಬಜಗೋಳಿ ಪರಿಸರದ ಜೈನ ಹಾಗೂ ಇತರ ಸಮಾಜ ಬಾಂಧವರು ಮೆರವಣಿಗೆಯಲ್ಲಿ ಭಾಗವಹಿಸುವರು ಎಂದರು.
ಮೂಡುಬಿದಿರೆಯ ಅಲಂಗಾರು ದೇವಸ್ಥಾದ ಬಳಿ ಮಧ್ಯಾಹ್ನ 3ಗಂಟೆಗೆ ಸ್ವಾಗತ ನೀಡಲಾಗುವುದು. 3.15ಕ್ಕೆ ಹೊರಟು ಮೂರ್ತಿ ಮೂಡುಬಿದಿರೆ ಮಠ ತಲುಪಲಿದೆ.
ಅಲ್ಲಿ ನಡೆಯುವ ಸ್ವಾಗತ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಹಾಗೂ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಮತ್ತಿತರರು ಪಾಲ್ಗೊಳ್ಳುವರು ಎಂದರು.
ಮೂಡುಬಿದಿರೆಯಲ್ಲಿ ತಾತ್ಕಾಲಿಕ ನೆಲೆ: ಮೂಡುಬಿದಿರೆ ಸಾವಿರ ಕಂಬದ ಬಸದಿ ಬೀದಿಯ ಬಳಿ ಈ ಬಾಹುಬಲಿ ಮೂರ್ತಿ ದರ್ಶನ ಪ್ರತಿಮೆಯಾಗಿ ಮೂರು-ನಾಲ್ಕು ತಿಂಗಳು ನಿಂತ ಸ್ಥಿತಿಯಲ್ಲಿ ಇದ್ದು ಭಕ್ತರಿಗೆ ದರ್ಶನ ನೀಡಲಿದೆ. ನಂತರ ಬಾಹುಬಲಿ ಮೂರ್ತಿ ಪ್ರತಿಷ್ಠಾಪನೆಯ ಖಚಿತ ಸ್ಥಳ ನಿಗದಿಪಡಿಸಲಾಗುವುದು ಎಂದರು.
ಸುನಿಲ್ ಬಜಗೋಳಿ, ಮಹಾವೀರ ಜೈನ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.