ಉಡುಪಿ

ವಿಶ್ವ ತಂಬಾಕು ನಿಷೇಧ ದಿನಾಚರಣೆ

Published On :

ಉಡುಪಿ: ಮಾದಕ ದ್ರವ್ಯ ಸೇವನೆಯಿಂದ ವಿವಿಧ ರೀತಿಯ ದುಷ್ಪರಿಣಾಮಗಳು ಉಂಟಾಗುತ್ತವೆ. ಜೀವನ ಪರ್ಯಂತ ವೈಯುಕ್ತಿಕ ಹಾಗೂ ಕೌಟುಂಬಿಕ ಸ್ವಾಸ್ಥ್ಯ ಹದಗೆಡುತ್ತದೆ. ತಂಬಾಕು ಸೇವನೆ ಚಟವಾಗಿ ಬೆಳೆಯುತ್ತಿದ್ದು, ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕು. ತಂಬಾಕು ಮುಕ್ತ ಸಮಾಜದ ನಿರ್ಮಾಣದಲ್ಲಿ ಯುವಕರು ಮುಂದಾಗಬೇಕು ಎಂದು ಕಾರ್ಕಳ ಆರೋಗ್ಯ ಇಲಾಖೆಯ ಬ್ಲ್ಯಾಕ್ ಹೆಲ್ತ್ ಎಜ್ಯುಕೇಟರ್ ಶಶಿಧರ್ ತಿಳಿಸಿದರು.
ಅವರು ಶನಿವಾರ ಬೆಳ್ಮಣ್ ಸರ್ಕಾರಿ ಪ್ರೌಢಶಾಲೆಯಲ್ಲಿ ಬೆಳ್ಮಣ್ ರೋಟರಿ ಕ್ಲಬ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಮಣ್ ವತಿಯಿಂದ ಏರ್ಪಡಿಸಿದ 'ವಿಶ್ವ ತಂಬಾಕು ನಿಷೇಧ ದಿನಾಚರಣೆ'ಯ ಅಂಗವಾಗಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿ ಆರೋಗ್ಯ ಮಾಹಿತಿ ನೀಡಿದರು.
ಮಳೆಗಾಲ ಸಮೀಪಿಸುತ್ತಿರುವುದರಿಂದ ಸೊಳ್ಳೆಗಳಿಂದ ಹರಡಬಹುದಾದ ರೋಗಗಳು, ಮುಂಜಾಗ್ರತಾ ಕ್ರಮದ ಬಗ್ಗೆ ಮಾಹಿತಿ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಬೆಳ್ಮಣ್ ರೋಟರಿ ಅಧ್ಯಕ್ಷ ಸೂರ್ಯಕಾಂತ್ ಶೆಟ್ಟಿ ವಹಿಸಿ, ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸತೀಶ್ ಮಾಡ, ಮಾಧವ ನಾಯಕ್ ಮತ್ತು ಶಾಲಾ ಮುಖ್ಯ ಸಿಕ್ಷಕಿ ಶಾಂತಿ ಭಟ್ ಭಾಗವಹಿಸಿದ್ದರು. ರೋಟರಿ ಸಮುದಾಯ ಸೇವಾ ನಿರ್ದೇಶಕ ಆಲ್ವಿನ್ ನೇರಿ ಪಿಂಟೊ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕೊಂಕಣಿ ಕೃತಿ 'ಮೊದ್ದು ಮೊರಾಂಟ್‌' ಬಿಡುಗಡೆ
ಉಡುಪಿ: ಖ್ಯಾತ ಬರಹಗಾರ, ಶಿಕ್ಷಕ, ಪೆರ್ನಾಲ್ ಆಲ್ವಿನ್ ದಾಂತಿ ಅವರು ಬರೆದ ಅಂಕಣಗಳ ಸಂಗ್ರಹ 'ಮೊದ್ದು ಮೊರಾಂಟ್‌' ಕೊಂಕಣಿ ಪಸ್ತಕವನ್ನು ಪೆರ್ನಾಲ್ ಫಾತಿಮಾ ಮಾತೆಯ ವರ್ಧಂತ್ಯುತ್ಸವದ ಸಂದರ್ಭದಲ್ಲಿ ಧರ್ಮಗುರು ರೆ.ಫಾ. ಅರ್ಥರ್ ಪಿರೇರಾ ಲೋಕಾರ್ಪಣೆ ಮಾಡಿ ಶುಭ ಹಾರೈಸಿದರು. ಫಾ. ಅರುಣ್ ಡಿ' ಮೆಲ್ಲೊ (ಯುಎಸ್‌ಎ), ಫಾ. ರಾಜೇಶ್ ಡಿ' ಸೋಜ (ಗುಜರಾತ್), ಲೇಖಕರ ಹೆತ್ತವರಾದ ಎಡ್ವರ್ಡ್ ದಾಂತಿ- ಮಗ್ದಲಿನ್ ದಾಂತಿ ಇದ್ದರು.
ಕೊಂಕಣಿ ಜನಪ್ರಿಯ ಪತ್ರಿಕೆ 'ದಿರ್ವೆಂ'ನಲ್ಲಿ 'ಆಲ್ವಿ ಪೆರ್ನಾಲ್‌' ಎಂಬ ಕಾವ್ಯನಾಮದಲ್ಲಿ ಪ್ರಕಟಗೊಂಡ ಸಕಾಲಿಕ ವಿಚಾರಧಾರೆಗಳ 35 ಲೇಖನಗಳು ಈ ಪುಸ್ತಕದಲ್ಲಿ ಮುದ್ರಣಗೊಂಡಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.