ಉಡುಪಿ

'ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ' ಬಹರೇನ್ ಪ್ರದರ್ಶನ

Published On :

ಉಡುಪಿ: ತುಳು ಚಿತ್ರರಂಗದ ಇತಿಹಾಸದಲ್ಲಿ ತೆರೆ ಕಂಡ 50ನೇ ಸಿನಿಮಾ 'ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ' ಸಿನೆಮಾ ಇದೀಗ ಸಾಗರ ದಾಟಿ ಬಹರೇನ್ ದೇಶಕ್ಕೆ ತಲುಪಿದೆ. ಈ ತುಳು ಚಿತ್ರವು ಬಹರೇನ್‌ನ ಮನಮದಲ್ಲಿರುವ ಆನಾಲ್ ಎಂಬ ಚಿತ್ರಮಂದಿರದಲ್ಲಿ ಜೂ. 20ರಂದು ಮಧ್ಯಾಹ್ನ 3 ಗಂಟೆಗೆ ಪ್ರದರ್ಶನಗೊಳ್ಳಲಿದೆ.  
ಬಹರೇನ್‌ನಲ್ಲಿರುವ ಭಾರತೀಯರು ಅದರಲ್ಲೂ ತುಳುವರಿಗಾಗಿಯೇ ಎಸ್.ಎನ್.ಡಿ.ಪಿ. ಬಹರೇನ್ ಎಂಬ ಸಂಘಟನೆ ಈ ಪ್ರದರ್ಶನವನ್ನು ಆಯೋಜಿಸಲಾಗಿದೆ.
ತುಂಗಭದ್ರ ಫಿಲಂಸ್ ಬ್ಯಾನರ್‌ನಡಿ ರಾಜಶೇಖರ್ ಕೋಟ್ಯಾನ್ ನಿರ್ಮಿಸಿ, ನಿರ್ದೇಶಿಸಿ, ನಟಿಸಿರುವ ಈ ಚಿತ್ರಕ್ಕೆ ಪ್ರವೀಣ್ ಗೋಡ್ಕಿಂಡಿ ಅವರ ಸಂಗೀತ, ಚಂದ್ರಶೇಖರ್ ಸುವರ್ಣ ಅವರ ಕಥೆ ಹಾಗೂ ಸುಧಾಕರ ಬನ್ನಂಜೆ ಅವರ ಸಂಭಾಷಣೆ ಇದೆ. ತಾರಾಗಣದಲ್ಲಿ ವಿಜಯ ರಾಘವೇಂದ್ರ, ರಾಜಶೇಖರ್ ಕೋಟ್ಯಾನ್, ಸೂರ್ಯೋದಯ, ಸಚಿವ ಅಭಯಚಂದ್ರ ಜೈನ್, ತುಳು ಸಾಹಿತ್ಯ ಅಕಾಡಮಿ ಮಾಜಿ ಅದ್ಯಕ್ಷ ಉಮನಾಥ ಕೋಟ್ಯಾನ್, ಭೋಜರಾಜ್ ವಾಮಂಜೂರು ನಟಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.