ಮಗಳ ಗಂಡನನ್ನೇ ಕಡಿದು ಕೊಂದ ಆರೋಪಿ ಬಂಧನ
ಬೆಳ್ತಂಗಡಿ: ಪುದುವೆಟ್ಟು ಗ್ರಾಮದ ಮಿಯಾರು ಸಮೀಪ ಬರಾಲಿ ಎಂಬಲ್ಲಿ ಶನಿವಾರ ರಾತ್ರಿ ಕುಡಿತದ ಮತ್ತಿನಲ್ಲಿ ತನ್ನ ಮಗಳ ಗಂಡನನ್ನು ಹಾರೆಯಿಂದ ಕಡಿದು ಕೊಂದ ಆರೋಪಿಯನ್ನು ಭಾನುವಾರ ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
ಪುದುವೆಟ್ಟು ಗ್ರಾಮದ ಮಿಯಾರು ಬರಾಲಿ ನಿವಾಸಿ ಕುಟ್ಟನ್ ಯಾನೆ ನಾರಾಯಣನ್ (64) ಬಂಧಿತ ಆರೋಪಿ. ಶನಿವಾರ ರಾತ್ರಿ 8.30ರ ಸುಮಾರಿಗೆ ಕುಡಿತದ ಮತ್ತಿನಲ್ಲಿ ಮಗಳ ಗಂಡ, ಕಡಬ ಸಮೀಪದ ಕೋಡಿಂಬಾಡಿಯ ಸುರೇಶ್ (50) ಎಂಬಾತನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ.
ಮಾವ ಮತ್ತು ಅಳಿಯ ಇಬ್ಬರು ಕುಡಿತದ ಚಟ ಹೊಂದಿದ್ದು, ಶನಿವಾರ ಚಾರ್ಮಾಡಿಯಲ್ಲಿ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಜೆ ಸುರೇಶ್ ತನ್ನ ಮಾವನ ಮನೆ ಮಿಯಾರಿಗೆ ಬಂದಿದ್ದ ಎನ್ನಲಾಗಿದೆ.
ಮನೆಗೆ ಬಂದ ಸುರೇಶ ಮಾವನೊಂದಿಗೆ ಮನೆಯ ಸಮೀಪ ಮದ್ಯ ಸೇವಿಸಿದ್ದು, ಈ ಸಂದರ್ಭ ಜಮೀನು ಪಾಲು ವಿಚಾರದಲ್ಲಿ ಮಾತಿಗೆ ಮಾತು ಬೆಳೆದಿತ್ತು.
ಇದರಿಂದ ಕುಪಿತಗೊಂಡ ಅಳಿಯ ಮಾವನಿಗೆ ಕಾಲಿನಿಂದ ಒದ್ದು ಹಲ್ಲೆಗೆ ಮುಂದಾದ. ಈ ಸಂದರ್ಭ ಮಾವ ಅಲ್ಲಿಯೇ ಇದ್ದ ಒನಕೆಯಿಂದ ಅಳಿಯನ ತಲೆಗೆ ಬಲವಾಗಿ ಹಲ್ಲೆ ನಡೆಸಿದ್ದು, ನೆಲಕ್ಕೆ ಬಿದ್ದ ಅಳಿಯ ಮತ್ತೆ ತನ್ನ ಮೇಲೆ ಹಲ್ಲೆ ನಡೆಸಬಹುದು ಎಂದು ತಿಳಿದ ಮಾವ ನಾರಾಯಣನ್ ಅಲ್ಲಿಯೇ ಇದ್ದ ಹಾರೆಯಲ್ಲಿ ಸುರೇಶನ ತಲೆಗೆ ಕಡಿದ ಎನ್ನಲಾಗಿದೆ.
ಆರೋಪಿ ಪರಾರಿ: ಘಟನೆ ನಂತರ ಆರೋಪಿ ನಾರಾಯಣನ್ ಪರಾರಿಯಾಗಿದ್ದು, ರಾತ್ರಿಯಿಡೀ ಸಮೀಪದ ಕಾಡಿನಲ್ಲಿ ಅವಿತುಕೊಂಡಿದ್ದ. ಮರುದಿನ ಬೆಳಗ್ಗೆ ಧರ್ಮಸ್ಥಳಕ್ಕೆ ಬಂದು ಅಲ್ಲಿಂದ ಗುರುವಾಯನಕೆರೆಗೆ ಬಂದಿರುತ್ತಾನೆ. ಅಲ್ಲಿಂದ ಕಾರ್ಕಳದ ಈದುವಿನಲ್ಲಿರುವ ತನ್ನ ಸಂಬಂಧಿಕರ ಮನೆಗೆ ಹೋಗಿ ತಪ್ಪಿಸಿಕೊಳ್ಳುವ ಉದ್ದೇಶದಿಂದ ಗುರುವಾಯನಕೆರೆ ಸಮೀಪದ ಪೊಟ್ಟುಕೆರೆ ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾಯುತ್ತಿರುವ ಮಾಹಿತಿ ತಿಳಿದ ಬೆಳ್ತಂಗಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಎಸ್ಪಿ ಡಾ. ಶರಣಪ್ಪ, ಬಂಟ್ವಾಳ ಡಿವೈಎಸ್ಪಿ ರಶ್ಮಿ ಪರಡ್ಡಿ, ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಬಿ.ಆರ್. ಲಿಂಗಪ್ಪ, ಸಬ್ ಇನ್ಸ್ಪೆಕ್ಟರ್ ಪ್ರಕಾಶ್ ದೇವಾಡಿಗ ಭೇಟಿ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

