ಉಡುಪಿ

ಸರಣಿ ಅಪರಾಧ: ಮೂಲ್ಕಿ ಠಾಣೆಗೆ ಸಿಬ್ಬಂದಿ ಕೊರತೆ

Published On :

ಮೂಲ್ಕಿ: ಮೂಲ್ಕಿ ಠಾಣೆ ವ್ಯಾಪ್ತಿಯಲ್ಲಿ  ಫೆ.24ರಿಂದ ನಿರಂತರವಾಗಿ ಬೆಗ್ಗೆಯಿಂದ ಮಧ್ಯಾಹ್ನದ ಅವಧಿಯಲ್ಲಿ ಆತ್ಮಹತ್ಯೆ, ಕೊಲೆ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದು ಮೂಲ್ಕಿ ಪೊಲೀಸರು ಕಂಗಲಾಗಿದ್ದಾರೆ.
ಮೂಲ್ಕಿ ಠಾಣೆ ಉಪ ನಿರೀಕ್ಷಕ ಸೋಮಯ್ಯ ನಿವೃತ್ತರಾದ ಬಳಿಕ ಬೇರೆ ನೇಮಕಾತಿ ಆಗದ ಕಾರಣ ಉಪ ನಿರೀಕ್ಷಕ ಹುದ್ದೆ ಖಾಲಿಯಿದ್ದು, ಠಾಣಾ ನಿರೀಕ್ಷಕ ರಾಮಚಂದ್ರ ನಾಯಕ್ ರಜೆಯಲ್ಲಿದ್ದಾರೆ. ಪಣಂಬೂರು ಎಸಿಪಿ ರವಿ ಕುಮಾರ್‌ಗೆ ಹೆಚ್ಚಿನ ಹೊಣೆ ಬಿದ್ದಿದೆ.
ಬಗೆಹರಿಯದ ಪ್ರಕರಣ: ಫೆ. 24ರಂದು ಪಡಪಣಂಬೂರು ಬಸ್ ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲಿ ಸುಮಾರು 35-40 ವರ್ಷದ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದ್ದು ಕೊಲೆ ಮಾಡಿ ಬಿಸಾಡಿರಬೇಕೆಂದು ಶಂಕಿಸಲಾಗಿದೆ. ಈವರೆಗೂ ಮಹಿಳೆಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.
ಫೆ. 25ರಂದು ಪುನರೂರು ಸಮೀಪದ ಕಲ್ಲಕಟ್ಟೆ ಎಂಬಲ್ಲಿ 23 ವರ್ಷದ ಗ್ರಹಿಣಿ ಮಲ್ಲಿಕಾ ಮನೆಯಲ್ಲಿ ಯಾರು ಇಲ್ಲದ ಸಂದರ್ಭ ಹತ್ಯೆಯಾಗಿದ್ದು ಕುತ್ತಿಗೆಯಲ್ಲಿ ನೇಣು ಬಿಗಿದ ರೀತಿಯಿದ್ದು ದೇಹ ನೆಲದಲ್ಲಿರುವುದರಿಂದ ಸಂಶಯಾಸ್ಪದ ಸಾವಾಗಿ ಪರಿಗಣಿಸಲ್ಪಟ್ಟಿದೆ. ಫೆ. 26ರಂದು ಮೂಲ್ಕಿ ಸರ್ಕಾರಿ ಆಸ್ಪತ್ರೆಯ ಹಿಂದೆ ಕ್ರೀಡಾಂಗಣದ ಬದಿಯಲ್ಲಿ ವ್ಯಕ್ತಿ ನೇಣು ಹಾಕಿ ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.