'ನಾಲ್ಕನೆಯ ಆಯಾಮ' ಕನ್ನಡದ ಮೊದಲ ನವ್ಯ ಕಾದಂಬರಿ: ಪೂರ್ಣಿಮಾ
ಕಾಂತಾವರ: ಕುಸುಮಾಕರ ದೇವರಗಣ್ಣೂರ ಅವರ 'ನಾಲ್ಕನೆಯ ಆಯಾಮ' ಕಾದಂಬರಿ 1966ರಲ್ಲಿ ಪ್ರಕಟಿಸಲ್ಪಟ್ಟಿದ್ದು, ಕನ್ನಡದ ಮೊದಲನೆಯ ನವ್ಯ ಕಾದಂಬರಿ ಎಂದು ಮುಂಬೈ ವಿಶ್ವವಿದ್ಯಾನಿಲಯ ಕನ್ನಡ ವಿಭಾಗ ಪ್ರಾಧ್ಯಾಪಕಿ ಪೂರ್ಣಿಮಾ ಸುಧಾಕರ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ಕಾಂತಾವರ ಕನ್ನಡ ಸಂಘದ ತಿಂಗಳ ನುಡಿನಮನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.
ನವ್ಯ ಸಾಹಿತ್ಯದ ಮೇಲೆ ಗಾಢ ಪ್ರಭಾವ ಬೀರಿದ್ದ ಅಸ್ತಿತ್ವವಾದದ ಹಿನ್ನೆಲೆಯಲ್ಲಿ ಇದು ರೂಪುಗೊಂಡ ಹಾಗಿದೆ. ಈ ಕಾದಂಬರಿಯ ಕಥಾನಾಯಕನಿಗೆ ಹೆಸರೇ ಇಲ್ಲ, ಈತ ನಮ್ಮ ಯುವ ಸಮುದಾಯದ ನಡುವಿನ ಯಾರೊಬ್ಬನೂ ಆಗಬಹುದಾಗಿದ್ದು, ತನ್ನ ಅಸ್ತಿತ್ವಕ್ಕೆ ತಾನೇ ಜವಾಬ್ದಾರ ಎಂಬ ನಿಲುವಿಗೆ ಬರುತ್ತಾನೆ. ಇದು ನವ್ಯ ಸಾಹಿತ್ಯದ ಹಣೆಪಟ್ಟಿಯಲ್ಲಿ ಹುಟ್ಟಿರುವ ಅನುಭವದ ಹಿನ್ನೆಲೆಯಿಂದ ರೂಪುಗೊಂಡ ಮನೋ ವಿಶ್ಲೇಷಣಾತ್ಮಕ ಕಾದಂಬರಿಯಾಗಿದ್ದರೂ, ಇದು ಎತ್ತುವ ಪ್ರಶ್ನೆಗಳು ಈ ಕಾಲಕ್ಕೂ ಪ್ರಸ್ತುತ ಮತ್ತು ಸಾರ್ವಕಾಲಿಕವಾದದ್ದು ಎಂದರು.
ಉಪನ್ಯಾಸದ ನಂತರ ನಡೆದ ಚರ್ಚೆಯಲ್ಲಿ ಡಾ. ಬಿ.ಜನಾರ್ದನ ಭಟ್, ಉದಯಕುಮಾರ್ ಹಬ್ಬು, ಮೋಹನದಾಸ್ ಕಡಂದಲೆ, ವಿಠಲ ಬೇಲಾಡಿ ಭಾಗವಹಿಸಿದ್ದರು.
ಸಂಘದ ಕಾರ್ಯಾಧ್ಯಕ್ಷ ಡಾ. ನಾ. ಮೊಗಸಾಲೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಪೂರ್ಣಿಮಾ ಸುಧಾಕರ ಶೆಟ್ಟಿ ಅವರನ್ನು ಕನ್ನಡ ಸಂಘದ ಶಾಶ್ವತ ಪ್ರಾಯೋಜಕ ಸಿ.ಕೆ. ಪಡಿವಾಳ್ ನೇತೃತ್ವದಲ್ಲಿ ಗೌರವಿಸಲಾಯಿತು. ನಾರಾವಿ ಬಾಬು ಶೆಟ್ಟಿ ನಿರ್ವಹಿಸಿದರು. ವಿಠಲ ಬೇಲಾಡಿ ಸ್ವಾಗತಿಸಿದರು. ಬೇಲಾಡಿ ರಾಮಚಂದ್ರ ಆಚಾರ್ಯ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

