ಇಂದು ಪೋಷಕರ ದಿನ
ಮುಂಡಗೋಡ: ಲೊಯೋಲಾ ವಿಕಾಸ ಕೇಂದ್ರ, ಎನ್ಕೆಜೆಇ ಮತ್ತು ಸಿಎಸ್ ಚೈಲ್ಡ್ ಫಂಡ್ ಇಂಡಿಯಾ ಆಶ್ರಯದಲ್ಲಿ 2013ನೇ ಸಾಲಿನ ಬಾಲ ಮೇಳ, ಮಕ್ಕಳ ಪೋಷಕರ ದಿನಾಚರಣೆ ಫೆ. 10 ರಂದು ಬೆಳಗ್ಗೆ 10ಕ್ಕೆ ಇಲ್ಲಿಯ ಲೊಯೋಲಾ ವಿಕಾಸ ಕೇಂದ್ರದಲ್ಲಿ ನಡೆಯಲಿದೆ. ಪಪಂ ಅಧ್ಯಕ್ಷ ಎಂ.ಕೆ. ಗಡವಾಲೆ ಕಾರ್ಯಕ್ರಮ ಉದ್ಘಾಟಿಸುವರು. ಲೊಯೋಲಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪಾ. ಆನಂದ ಪ್ರಭು ಅಧ್ಯಕ್ಷತೆ ವಹಿಸಲಿದ್ದಾರೆ. 11ಕ್ಕೆ ಮಕ್ಕಳಿಂದ ಮನರಂಜನೆ ಹಾಗೂ ಮಧ್ಯಾಹ್ನ 1.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.
ಯಲ್ಲಾಪುರ: ನಾಳೆ ಪ್ರತಿಭಟನೆ
ಯಲ್ಲಾಪುರ: ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ಬಂಡವಾಳ ಹೂಡಿಕೆ ವಿರೋಧಿಸಿ, ರೈತರ ಸಾಲಮನ್ನಾ, ಕಾಡುಪ್ರಾಣಿಗಳಿಂದಾಗುತ್ತಿರುವ ರೈತರ ಬೆಳೆಹಾನಿಗೆ ಪರಿಹಾರ, ಸಮರ್ಪಕ ವಿದ್ಯುತ್ ಪೂರೈಕೆ ಮತ್ತಿತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಫೆ. 11ರಂದು ಭಾರತೀಯ ಕಿಸಾನ್ ಸಂಘ ಉತ್ತರ ಕನ್ನಡ ಘಟಕದ ಆಶ್ರಯದಲ್ಲಿ ಕಾರವಾರದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳಿಂದ ಕಿಸಾನ್ ಪ್ರತಿನಿಧಿಗಳು ಧರಣಿಯಲ್ಲಿ ಭಾಗವಹಿಸುತ್ತಿದ್ದು, ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಭಾಸ್ಕರ ಹೆಗಡೆ ಹಿರೇಸರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಧಾರ್ ಕಾರ್ಡ್ಗೆ ಅವಕಾಶ
ಯಲ್ಲಾಪುರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಆಧಾರ್ ಕಾರ್ಡ್ನ್ನು ಮುಂದಿನ ದಿನಗಳಲ್ಲಿ ಭಾರತೀಯ ಪ್ರಜೆಗಳಿಗೆ ಕಡ್ಡಾಯವಾಗಲಿದೆ. ಆದ್ದರಿಂದ ಆಧಾರ್ ಕಾರ್ಡ್ನ್ನು ಹೊಂದಲೇಬೇಕಾಗುತ್ತದೆ. ಪ್ರಸ್ತುತ ಯಲ್ಲಾಪುರ ತಾಲೂಕಿನ ನಾಗರಿಕರಿಗಾಗಿ ಬಸ್ ನಿಲ್ದಾಣದ ಬಳಿ ಇರುವ ಅಂಚೆ ಕಚೇರಿಯಲ್ಲಿ ಕಾರ್ಡ್ ಪಡೆಯುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 8.30ರಿಂದ 12.45, ಮಧ್ಯಾಹ್ನ 2ರಿಂದ 4ರ ವರೆಗೆ ನಾಗರಿಕರು ತಾವು ಹೊಂದಿದ ಚುನಾವಣಾ ಕಾರ್ಡ್ ಮತ್ತು ಅದರ ಪ್ರತಿ ಅಥವಾ ಪಡಿತರ ಚೀಟಿ ಮತ್ತು ಅದರ ಪ್ರತಿ, ಜನನ ಪ್ರಮಾಣ ಪತ್ರ, ಶಾಲಾ ದಾಖಲಾತಿ ಅಥವಾ ಎಸ್ಎಸ್ಎಲ್ಸಿ ಮಾರ್ಕ್ಸ್ ಕಾರ್ಡ್, ಪಾಸ್ ಪೋರ್ಟ್ ಕಡ್ಡಾಯವಾಗಿ ತರಬೇಕಾಗುತ್ತದೆ. ಮತ್ತು ಬ್ಯಾಂಕ್ ಖಾತೆ ಹೊಂದಿದವರು ಬ್ಯಾಂಕ್ ಖಾತೆ ನಂಬರ್, ಬ್ಯಾಂಕಿನ ಐಎಫ್ಎಸ್ಸಿ ಕೋಡ್, ಬ್ಯಾಂಕ್ ಪಾಸ್ಬುಕ್ ತರಬೇಕು. ಒಬ್ಬ ವ್ಯಕ್ತಿಗೆ ಕನಿಷ್ಠ 10 ನಿಮಿಷ ಸಮಯ ಬೇಕಾಗಿದ್ದು, ದಿನಕ್ಕೆ 30ರಿಂದ 35 ಜನರಿಗೆ ಮಾತ್ರ ಅವಕಾಶವಿದೆ. ಸಾರ್ವಜನಿಕರು ಯಾವುದೇ ರೀತಿಯ ಒತ್ತಡ, ಗಲಾಟೆ ಮಾಡದೇ ಸಹಕರಿಸಬೇಕಾಗಿದೆ. ನಾಗರಿಕರು ಕೊಡುವ ಮಾಹಿತಿ ತಪ್ಪಿದ್ದಲ್ಲಿ, ವಿಳಾಸ ತಪ್ಪು ನೀಡಿದರೆ ಕಾರ್ಡ್ ಮನೆಗೆ ತಲುಪುವುದಿಲ್ಲ. ವರ್ಷವಿಡೀ ಆಧಾರ್ ಕಾರ್ಡ್ ಮಾಡುವುದಕ್ಕೆ ಸರ್ಕಾರ ಅವಕಾಶ ಕಲ್ಪಿಸಿದೆ. ಇದು ನಿರಂತರ ಪ್ರಕ್ರಿಯೆ. ಆದ್ದರಿಂದ ಪ್ರತಿಯೊಬ್ಬ ನಾಗರಿಕನಿಗೂ ಕಾರ್ಡ್ ದೊರೆಯುತ್ತದೆ. ನಾಗರಿಕರು ಸಂಯಮದಿಂದ ತಮ್ಮ ಕಾರ್ಡ್ನ್ನು ಪಡೆದುಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದೆ.
ಭರತನಾಟ್ಯ: ಪ್ರಿಯಾಂಕಾ ಪ್ರಥಮ
ಶಿರಸಿ: ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಶೇ. 89 ಅಂಕ ಪಡೆಯುವ ಮೂಲಕ ಶಿರಸಿಯ ನೂಪುರ ನೃತ್ಯ ಶಾಲೆ ವಿದ್ಯಾರ್ಥಿನಿ ಆರ್.ಎಸ್. ಪ್ರಿಯಾಂಕ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

