17ರಂದು ರಥಸಪ್ತಮಿಯ ವಿಶೇಷ ಜಾತ್ರೆ
ಯಲ್ಲಾಪುರ: ತಾಲೂಕಿನ ಇತಿಹಾಸ ಪ್ರಸಿದ್ಧವಾದ ನಾಯಕನಕೆರೆಯ ಬಾಲಾತ್ರಿಪುರಸುಂದರಿ ಶಾರದಾಂಬಾ ದೇವಸ್ಥಾನದಲ್ಲಿ ರಥಸಪ್ತಮಿಯ ವಿಶೇಷ ಜಾತ್ರೆ ಫೆ. 17ರಂದು ನಡೆಯುವುದೆಂದು ದೇವಸ್ಥಾನದ ಅಧ್ಯಕ್ಷ ಡಿ.ಶಂಕರ ಭಟ್ಟ, ಗೌ. ಕಾರ್ಯದರ್ಶಿ ಶಂಕರ ಭಟ್ಟ ತಾರೀಮಕ್ಕಿ ಪ್ರಕಟಣೆ ಮೂಲಕ ಕೋರಿದ್ದಾರೆ. ಪ್ರತಿ ವರ್ಷದಂತೆ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳು, ಹೋಮ-ಹವನಾದಿಗಳು ವೈದಿಕ ವಿದ್ವಾಂಸರಿಂದ ನಡೆಯಲಿವೆ. ಸಂಜೆ 4ಕ್ಕೆ ಭಗವತಿ ವಿದ್ಯಾಮಾತೆ ರಾಜರಾಜೇಶ್ವರಿ ಸರ್ವಾಲಂಕಾರಭೂಷಿತಳಾಗಿ ವಿರಾಜಮಾನಳಾಗಿ ಕಂಗೊಳಿಸಲಿದ್ದಾಳೆ. ಭಕ್ತರು ಕುಂಕುಮಾರ್ಚನೆ, ಉಡಿ ತುಂಬುವುದು ಇನ್ನಿತರ ಸೇವೆ ಸಲ್ಲಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಜಾತ್ರೆಯಲ್ಲಿ ಅಂಗಡಿ ಹಾಕುವವರು ಮುಂಚಿತವಾಗಿ ದೇವಸ್ಥಾನದ ವ್ಯವಸ್ಥಾಪಕರಾದ ಅಶೋಕ ಶೆಟ್ಟಿಯವರನ್ನು ಸಂಪರ್ಕಿಸಿ, ಸ್ಥಳ ಕಾದಿರಿಸಿಕೊಳ್ಳಬಹುದು. ಕಾನೂನು ಬಾಹಿರವಾಗಿ ಅಂಗಡಿಗಳಿಗೆ ಅವಕಾಶವಿರುವುದಿಲ್ಲ ಎಂದು ತಿಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

