ಹೋಟೆಲ್ ತ್ಯಾಜ್ಯ ಹೆದ್ದಾರಿ ಗಟಾರಕ್ಕೆ: ಮಾಲಿನ್ಯ
ಯಲ್ಲಾಪುರ: ಪಟ್ಟಣದ ತಟಗಾರ ಕ್ರಾಸ್ ಬಳಿ ಇರುವ ಶಾನಭಾಗ ಹೋಟೆಲ್ನ ತ್ಯಾಜ್ಯ ನೀರನ್ನು ರಾಷ್ಟ್ರೀಯ ಹೆದ್ದಾರಿ 63ರ ಗಟಾರಕ್ಕೆ ಬಿಡಲಾಗುತ್ತಿದ್ದು, ತ್ಯಾಜ್ಯ ನೀರು ಚರಂಡಿಯಲ್ಲಿ ಸಂಗ್ರಹವಾಗಿ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ. ಇದಕ್ಕೆ ಪರ್ಯಾಯ ಕ್ರಮ ಕೈಗೊಂಡು ಸ್ಥಳೀಯ ನಿವಾಸಿಗಳಿಗೆ ಉಂಟಾಗುತ್ತಿರುವ ತೊಂದರೆಯನ್ನು ನಿವಾರಿಸಬೇಕೆಂದು ಆಗ್ರಹಿಸಿ, ಉದ್ಯಮನಗರದ ಜನತೆ ಸೋಮವಾರ ತಹಸೀಲ್ದಾರ್ರಿಗೆ ಮನವಿ ಸಲ್ಲಿಸಿದರು.
ಹೋಟೆಲ್ನ ತ್ಯಾಜ್ಯವನ್ನು ಪೈಪ್ ಮೂಲಕ ರಾಷ್ಟ್ರೀಯ ಹೆದ್ದಾರಿ ಪಕ್ಕದ ಕಾಲುವೆಗೆ ಬಿಡಲಾಗುತ್ತಿದೆ. ಅಲ್ಲಿಂದ ಸ್ವಲ್ಪ ದೂರದ ವಿಶ್ವದರ್ಶನ ಶಾಲೆವರೆಗೆ ಮಾತ್ರ ಸರಿಯಾದ ಗಟಾರವಿದೆ. ಮುಂದೆ ಹೆದ್ದಾರಿಗೂ ಸರಿಯಾದ ಗಟಾರ ಇಲ್ಲದೇ ಇರುವುದರಿಂದ ತ್ಯಾಜ್ಯ ನೀರು ಹರಿದು ಹೋಗಲು ಪರ್ಯಾಯ ವ್ಯವಸ್ಥೆಯಿಲ್ಲ. ಚರಂಡಿಯಲ್ಲಿ ತ್ಯಾಜ್ಯ ನೀರು ಸಂಗ್ರಹಗೊಂಡು ವಾತಾವರಣವನ್ನು ಮಲೀನಗೊಳಿಸಿದೆ. ಸೊಳ್ಳೆಗಳು ಹೆಚ್ಚುತ್ತಿವೆ. ಸುತ್ತಮುತ್ತಲಿನ ನಿವಾಸಿಗಳ ಆರೋಗ್ಯದ ಮೇಲೂ ಇದು ಪರಿಣಾಮ ಬೀರುತ್ತಿದೆ. ಈ ಕುರಿತು ವಾರದಲ್ಲಿ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಪಪಂ ಸದಸ್ಯ ಶ್ರೀನಿವಾಸ ಗಾಂವ್ಕಾರ, ನರಸಿಂಹಮೂರ್ತಿ ಕೋಣೆಮನೆ, ಸುಬ್ರಹ್ಮಣ್ಯ ಹೆಗಡೆ, ನಾಗರಾಜ ಅಂಕೋಲೆಕರ್, ಸುನೀಲ ಯಲ್ಲಾಪುರಕರ್, ಬೆಳಗಾಂ ಮೇಸ್ತ್ರಿ, ಹಸನ್ ಮೇಸ್ತ್ರಿ, ಪ್ರದೀಪ ಯಲ್ಲಾಪುರಕರ್, ಬಸೀರ್ ಸೈಯದ್, ಅನ್ವರ್ ಪಿ.ಟಿ, ಪ್ರಕಾಶ ನಾಯ್ಕ, ಆಸೀಬ್ ಮಾಂಡ್ಲಿಕ್, ಸುವರ್ಣಾ ನಾಯ್ಕ, ಗೀತಾ ಯಲ್ಲಾಪುರಕರ್, ಕವಿತಾ ನಾಯ್ಕ, ಶಾಂತಿ ನಾಯ್ಕ ಇದ್ದರು.
ಸಂಜೆ ಪಪಂ ಮುಖ್ಯಾಧಿಕಾರಿ ಎಸ್.ಬಿ. ಪಾಟೀಲ್ ಹಾಗೂ ಆರೋಗ್ಯ ನಿರೀಕ್ಷಕ ನಾಗಪ್ಪ ಈ ಭಾಗದಲ್ಲಿ ಬಂದು ಚರಂಡಿ ಹಾಗೂ ಬಾವಿ ನೀರನ್ನು ಪರಿಶೀಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

