ಉತ್ತರ ಕನ್ನಡ

ಜಿಲ್ಲೆಗೆ ಹೊಸ ತಾಲೂಕು ಇಲ್ಲ

Published On :

ಶಿರಸಿ: ಈ ಸಾರಿಯ ಬಜೆಟ್‌ನಲ್ಲಿ 43 ಹೊಸ ತಾಲೂಕುಗಳನ್ನು ರಚಿಸಿ ಸರ್ಕಾರ ಘೋಷಣೆ ಮಾಡಿದೆ. ಆದರೆ ಜಿಲ್ಲೆಯಲ್ಲಿ ಯಾವುದೇ ಹೊಸ ತಾಲೂಕನ್ನು ರಚನೆ ಕುರಿತಂತೆ ಘೋಷಣೆಯಾಗದಿರುವುದು ಖಂಡನಾರ್ಹ ಎಂದು ಜೆಡಿಎಸ್‌ನ ಜಿಲ್ಲಾ ಉಪಾಧ್ಯಕ್ಷ ಆರ್.ಎಂ. ಹೆಗಡೆ ಹಲ್ಲುಸರಿಗೆ ಹೇಳಿದರು.
ನಗರದ ಜೆಡಿಎಸ್ ಕಚೇರಿಯಲ್ಲಿ ಈಚೆಗೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬನವಾಸಿ, ದಾಂಡೇಲಿ ಹಾಗೂ ಗೋಕರ್ಣಗಳನ್ನು ನೂತನ ತಾಲೂಕನ್ನಾಗಿ ರಚಿಸಬೇಕೆಂದು ಅನೇಕ ಸಾರಿ ಮನವಿ ಸಲ್ಲಿಸಿದ್ದರೂ ಇದಕ್ಕೆ ಪುರಸ್ಕಾರ ಸಿಕ್ಕಿಲ್ಲ ಎಂದರು.
ಸಚಿವರಿಗೆ ಇಚ್ಛಾಶಕ್ತಿಯಿಲ್ಲ: ಆರ್.ವಿ. ದೇಶಪಾಂಡೆ ನಂತರ ಸಂಪೂರ್ಣ 5 ವರ್ಷಗಳ ಕಾಲ ಜಿಲ್ಲೆಯ ಉಸ್ತುವಾರಿ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ ಸಚಿವ ಕಾಗೇರಿ ಸಂಪೂರ್ಣ ವಿಫಲರಾಗಿದ್ದಾರೆ. ಅವರಿಗೆ ರಾಜಕೀಯ ಇಚ್ಛಾಶಕ್ತಿ ಕೊರತೆಯಿರುವ ಕಾರಣ ಹೊಸ ತಾಲೂಕು ರಚನೆಗೆ ಮುಂದಾಗಿಲ್ಲ. ಈ ಸಾರಿಯ ಬಜೆಟ್ ನಿರಾಶಾದಾಯಕವಾಗಿದೆ. ಈ ಬಜೆಟ್‌ನಲ್ಲಿ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದರೂ ಈ ಕುರಿತು ಯಾವುದೇ ಅಭಿಪ್ರಾಯವನ್ನು ಕಾಗೇರಿ ವ್ಯಕ್ತಪಡಿಸದಿರುವುದು ಅಚ್ಚರಿಯನ್ನುಂಟುಮಾಡಿದೆ ಎಂದು ಹಲ್ಲುಸರಿಗೆ ಕಿಡಿಕಾರಿದರು.
ಬಿಜೆಪಿ ದುರಾಡಳಿತ: ಶಿರಸಿ-ಸಿದ್ದಾಪುರ ಕ್ಷೇತ್ರಗಳಲ್ಲಿ ಜೆಡಿಎಸ್ ಕನಿಷ್ಠ 10 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತದೆ. ಜಿಲ್ಲೆಯ ಉಳಿದ 5 ಕ್ಷೇತ್ರಗಳಲ್ಲಿ ಜೆಡಿಎಸ್‌ಗೆ ಕಾಂಗ್ರೆಸ್ ಮಾತ್ರ ಎದುರಾಳಿ. ಬಿಜೆಪಿ ಲೆಕ್ಕಕ್ಕಿಲ್ಲ. ಬಿಜೆಪಿಯ ದುರಾಡಳಿತವೇ ಅದರ ಪಾಲಿಗೆ ಮುಳುವಾಗಲಿದೆ. ಬಿಜೆಪಿಯವರಂತೆ ಪ್ರಚಾರ ಗಿಟ್ಟಿಸಿಕೊಂಡು ನಾವು ಕೆಲಸ ಮಾಡುವುದಿಲ್ಲ. ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಟ್ಟು ಚುನಾವಣೆ ಎದುರಿಸುತ್ತೇವೆ ಎಂದು ಆರ್.ಎಂ. ಹೆಗಡೆ ವಿವರಿಸಿದರು. ಜೆಡಿಎಸ್ ಮುಖಂಡ ನಾಗರಾಜ ಮುರ್ಡೇಶ್ವರ, ಕಲ್ಲು ಕ್ವಾರಿ ಸೇರಿದಂತೆ ಇನ್ನೂ ಅನೇಕ ಸಮಸ್ಯೆಗಳು ಜಿಲ್ಲೆಯನ್ನು ಕಾಡುತ್ತಿದ್ದರೂ, ರಾಜಕೀಯ ಇಚ್ಛಾಶಕ್ತಿಯಿಲ್ಲದ ಮಂತ್ರಿಗಳು ಸಮಸ್ಯೆಗಳ ಪರಿಹಾರಕ್ಕೆ ಮನಸ್ಸು ಮಾಡುತ್ತಿಲ್ಲ. ಕಲ್ಲು ಕ್ವಾರಿ ಕುರಿತಂತೆ ಸಿದ್ದಾಪುರಕ್ಕೊಂದು ನೀತಿ, ಶಿರಸಿಗೆ ಇನ್ನೊಂದು ನೀತಿಯಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸುಭಾಷ ಮಂಡೂರ, ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.