ಉತ್ತರ ಕನ್ನಡ

ಸೌಹಾರ್ದಯುತ ಮೀನುಗಾರಿಕೆ ನಡೆಯಲಿ: ನಿರ್ಧಾರ

Published On :

ಕಾರವಾರ:  ಗೋವಾ ಹಾಗೂ ಉಕ ಜಿಲ್ಲೆಯಲ್ಲಿ ಮೀನುಗಾರಿಕೆ ಸೌಹಾರ್ದಯುತವಾಗಿ ಹಾಗೂ ಸ್ನೇಹದಿಂದ ಮುಂದುವರೆಯಬೇಕು ಎಂಬ ತೀರ್ಮಾನ ಈಚೆಗೆ ಗೋವಾದ ಮಡಗಾಂವ್‌ನಲ್ಲಿ ಆಯೋಜಿಸಿದ್ದ ಎರಡು ರಾಜ್ಯಗಳ ಸಚಿವರ ಸಭೆಯಲ್ಲಿ ವ್ಯಕ್ತವಾಗಿದೆ.
ಕಳೆದ ಕೆಲವು ದಿನಗಳಿಂದ ಕಾರವಾರ ಮೀನುಗಾರಿಕೆಯ ದೋಣಿಗಳನ್ನು ಗೋವಾ ರಾಜ್ಯದ ಕರಾವಳಿಯಲ್ಲಿ ಪ್ರವೇಶ ಮಾಡಿದ್ದರಿಂದ ಅಲ್ಲಿನ ಪೊಲೀಸರು ಅನಗತ್ಯ ಪ್ರಕರಣ ದಾಖಲಿಸಿ ಮೂರು ದೋಣಿಗಳನ್ನು ಮುಟ್ಟುಗೋಲು ಹಾಕಿದ ಹಿನ್ನೆಲೆಯಲ್ಲಿ ಮೀನುಗಾರಿಕೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಆನಂದ ಅಸ್ನೋಟಿಕರ್ ಹಾಗೂ ಗೋವಾ ಮೀನುಗಾರಿಕಾ ಸಚಿವ ಅವಸ್ಥಿನೋ ಪುರ್ಟಾಡೋ ಹಾಗೂ ರಾಜ್ಯದ ಇಲಾಖಾ ಅಧಿಕಾರಿಗಳ ಸಭೆಯನ್ನು ಕರೆಯಲಾಗಿತ್ತು. ಈ ಸಂದರ್ಭದಲ್ಲಿ ಕಾರವಾರ ಮೀನುಗಾರರ ನಾಯಕರು, ಗೋವಾ ರಾಜ್ಯದ ಬೇತುಲ್ ಹೊರತು ಪಡಿಸಿ ಇನ್ನೆಲ್ಲಿಯೂ ಪೊಲೀಸ್ ಅಧಿಕಾರಿಗಳ ತೊಂದರೆಯಿಲ್ಲ. ಆದರೆ ಕಳೆದ ವಾರ ಮೂರು ಮೀನುಗಾರಿಕಾ ದೋಣಿಗಳನ್ನು ಹಿಡಿದು ಹಾಕಲಾಗಿತ್ತು. ಸಚಿವ ಆನಂದ ಅಸ್ನೋಟಿಕರ್ ಅವರು ದೂರವಾಣಿಯಲ್ಲಿ ಮಾತನಾಡಿದ್ದರಿಂದ ಬಿಡುಗಡೆಗೊಳಿಸಲಾಗಿದೆ. ಇದು ಪುನರಾವರ್ತನೆಯಾಗಬಾರದು. ಉಕ ಜಿಲ್ಲೆಯ ಮೀನುಗಾರಿಕಾ ದೋಣಿಗಳಿಗೆ ವಿಶಿಷ್ಟ ಗುರುತು ಇಲ್ಲ. ಇದರಿಂದಾಗಿ ಈ ಸಮಸ್ಯೆಯಾಗಿರಬಹುದು. ಹೈ ಸ್ಪೀಡ್ ದೋಣಿಗಳನ್ನು ಕಡಲಿಗೆ ಇಳಿಸುವುದು ಬೇಡ. ಇದರಿಂದ ಮತ್ಸ್ಯ ಕ್ಷಾಮದಿಂದ ದೂರ ಉಳಿಯಬಹುದು. ಪ್ರಾಕೃತಿಕ ಅಸಮತೋಲನ ಉಂಟಾಗುವುದು ತಪ್ಪುತ್ತದೆ ಎಂದರು.  ಚರ್ಚೆಯ ಒಂದು ಹಂತದಲ್ಲಿ ಗೋವಾ ಮೀನುಗಾರರೇ ಅದೇ ರಾಜ್ಯದ ಮೀನುಗಾರಿಕಾ ನಿರ್ದೇಶಕರ ಮೇಲೆ ಆಪಾದನೆ ಮಾಡಿದರು. ಅದರಂತೆ ಕಾರವಾರ ಮೀನುಗಾರರ ಪರವಾಗಿ ನಿಂತರು. ಕೇಂದ್ರ ಕಡಲು ಮೀನುಗಾರಿಕೆಯ ನಿಯಮಗಳನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ಮೀನುಗಾರರಿಗೆ ಎರಡು ರಾಜ್ಯದ ಸಚಿವರು ಷರತ್ತು ವಿಧಿಸಿದರು. ಉಕ ಜಿಲ್ಲೆಯಲ್ಲಿ ಒಂದೇ ಒಂದು ಹೈ ಸ್ಪೀಡ್ ಮೀನುಗಾರಿಕಾ ದೋಣಿ ಇಲ್ಲ. ಎಂದು ರಾಜ್ಯ ಮೀನುಗಾರಿಕಾ ಜಂಟಿ ನಿರ್ದೇಶಕ ಗಂಗಾಧರ ಮಡಿಕೇರಿ ಸಭೆಗೆ ತಿಳಿಸಿದರು. ಗೋವಾ, ಉಕ ಮೀನುಗಾರರ ಮುಖಂಡರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.