ಉತ್ತರ ಕನ್ನಡ

ಅಧಿಕಾರಿ ಭರವಸೆ: ಮತದಾನದಲ್ಲಿ ಭಾಗಿ

Published On :

ಯಲ್ಲಾಪುರ:  ತಮ್ಮನ್ನು ಪಟ್ಟಣ ವ್ಯಾಪ್ತಿಯಿಂದ ಬೇರ್ಪಡಿಸಿ, ಗ್ರಾಪಂ ವ್ಯಾಪ್ತಿಗೆ ಸೇರಿಸಬೇಕೆಂದು ಒತ್ತಾಯಿಸಿ ಯಲ್ಲಾಪುರದ ಬಾಳಗಿಮನೆ ಗ್ರಾಮದ ಕೆಲವು ಮಜರೆ ನಿವಾಸಿಗಳು ಗುರುವಾರ ನಡೆದ ಪಪಂ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಿ ಧರಣಿ ನಡೆಸಿ, ಅಧಿಕಾರಿಗಳು ನೀಡಿದ ಭರವಸೆಯ ನಂತರ ಧರಣಿ ಹಿಂತೆಗೆದುಕೊಂಡು ಮತದಾನದಲ್ಲಿ ಪಾಲ್ಗೊಂಡ ಘಟನೆ ನಡೆದಿದೆ.  ಕರಿಪಾಲು, ಮೂಳೆಮನೆ, ಬದನೇಪಾಲ, ಜೋಗನಜಡ್ಡಿ, ಸಿಂಗನಮನೆ, ಮಾವಿನಗದ್ದೆ, ಹರ್ಕನಪಾಲ, ಕೋಟಿಮನೆ, ಪುರಾಣಜಡ್ಡಿ ಪ್ರದೇಶದ ಮತದಾರರು ಮತದಾನ ಬಹಿಷ್ಕರಿಸಿದ್ದರು. ಶಿರಸಿ ಉಪ ವಿಭಾಗದ ಚುನಾವಣಾ ವೀಕ್ಷಕ ಟಿ. ವೆಂಕಟೇಶ ಹಾಗೂ ತಹಸೀಲ್ದಾರ್ ಎಂ.ವಿ. ಕಲ್ಲೂರಮಠ ಸ್ಥಳಕ್ಕೆ ಆಗಮಿಸಿ, ಪ್ರತಿಭಟನಾಕಾರರಿಂದ ಮನವಿಯನ್ನು ಸ್ವೀಕರಿಸಿ ತಮ್ಮ ಬೇಡಿಕೆಯನ್ನು ಸರ್ಕಾರಕ್ಕೆ ತಲುಪಿಸುತ್ತೇವೆಂದು ಭರವಸೆ ನೀಡಿ ಮತದಾನದಲ್ಲಿ ಪಾಲ್ಗೊಳ್ಳುವಂತೆ ಮನವೊಲಿಸಿದ ನಂತರ ಪ್ರತಿಭಟನಾಕಾರರು ಧರಣಿ ಹಿಂತೆಗೆದುಕೊಂಡು ಮತದಾನದಲ್ಲಿ ಭಾಗವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.