ಉತ್ತರ ಕನ್ನಡ

ಸಚಿವ ಆನಂದ ಮತದಾನ

Published On :

ಕಾರವಾರ:  ಇಲ್ಲಿನ ನಗರಸಭೆ ಚುನಾವಣೆಯಲ್ಲಿ ಮೀನುಗಾರಿಕೆ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಆನಂದ ಅಸ್ನೋಟಿಕರ್ ತಮ್ಮ ತಾಯಿಯೊಂದಿಗೆ ಸರದಿಯಲ್ಲಿ ನಿಂತು ಮತದಾನ ಮಾಡಿದರು. ಬೆಳಗ್ಗೆ 9.50ರ ಸುಮಾರಿಗೆ ತಮ್ಮ ತಾಯಿ ಶುಭಲತಾ ಅಸ್ನೋಟಿಕರ್ ಅವರೊಂದಿಗೆ ಸಚಿವ ಆನಂದ್ ಕಾಜುಬಾಗದಲ್ಲಿನ ಸೇಂಟ್ ಜೋಸೆಫ್ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾದ ಮತದಾನ ಕೇಂದ್ರಕ್ಕೆ ಆಗಮಿಸಿದರು. ಅವರು ಆಗಮಿಸುವಾಗ ಸರದಿಯಲ್ಲಿ ಹತ್ತಾರು ಜನರು ಮತದಾನಕ್ಕೆ ಕಾಯುತ್ತಿದ್ದರು. ಸಚಿವ ಆನಂದ್ ತಮ್ಮ ತಾಯಿಯೊಂದಿಗೆ ಸರದಿಯಲ್ಲಿ ನಿಂತರು. ತಾಳ್ಮೆಯಿಂದ 15 ನಿಮಿಷ ಕಾಲ ಕಾದರು. ಮೊದಲು ಶುಭಲತಾ ಅಸ್ನೋಟಿಕರ್ ಮತದಾನ ಮಾಡಿದರು. ನಂತರ ಸಚಿವರು ಮತದಾನ ಮಾಡಿದರು. ವಾರ್ಡ್ ನಂ. 5ರ ಮತದಾರರ ಪಟ್ಟಿಯಲ್ಲಿ ಆನಂದ ಕುಟುಂಬದ ಹೆಸರಿದೆ. ಈ ವಾರ್ಡಿನಲ್ಲಿ ಬಿಜೆಪಿಯಿಂದ ಗಜಾ ಸುರಂಗೇಕರ, ಕಾಂಗ್ರೆಸ್‌ನಿಂದ ರವೀಂದ್ರ ಬಾನಾವಳಿಕರ, ಜೆಡಿಎಸ್‌ನಿಂದ ಪ್ರಶಾಂತ ಬಾನಾವಳಿಕರ ಹಾಗೂ ಇತರ ಆರು ಪಕ್ಷೇತರ ಅಭ್ಯರ್ಥಿಗಳಿದ್ದಾರೆ. ಮತದಾನಕ್ಕೂ ಮುನ್ನ ಆನಂದ ಅಸ್ನೋಟಿಕರ್ ಬಾಡ ಮಹಾದೇವ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಮತದಾನದ ಬಳಿಕ ನಗರದ ವಿವಿಧ ವಾರ್ಡ್‌ಗಳ ಮತದಾನ ಕೇಂದ್ರಗಳತ್ತ ತೆರಳಿ ವೀಕ್ಷಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.