ಆರ್.ಸಿ. ಕೋಡ್ಸರ್ ತಂಡ ಚಾಂಪಿಯನ್
ಶಿರಸಿ: ಸಿದ್ದಾಪುರ ತಾಲೂಕಿನ ಹಸ್ರಗೋಡ ಪಂಚಾಯಿತಿ ವ್ಯಾಪ್ತಿಯ ಲಕ್ಕೀಸವಲಿನಲ್ಲಿ ನಡೆದ ಎರಡನೇ ವರ್ಷದ ಅಘನಾಶಿನಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆರ್.ಸಿ. ಕೋಡ್ಸರ ತಂಡ ಪ್ರಥಮ ಸ್ಥಾನವನ್ನು ಗಳಿಸಿಕೊಂಡಿತು. ದ್ವಿತೀಯ ಸ್ಥಾನವನ್ನು ದರ್ಶನ ಇಲೆವೆನ್ ಕರ್ಮನೆ ತಂಡ ತನ್ನದಾಗಿಸಿಕೊಂಡಿತು.
ಅತ್ಯಂತ ರೋಚಕತೆಯಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ಆರ್.ಸಿ. ಕೋಡ್ಸರ ತಂಡ ಕರ್ಮನೆಯ ದರ್ಶನ ಇಲೆವೆನ್ ತಂಡವನ್ನು ಸೋಲಿಸುವ ಮೂಲಕ ಪ್ರಥಮ ಬಹುಮಾನ ರು. 4000 ಹಾಗೂ ಆಕರ್ಷಕ ಟ್ರೋಫಿಯನ್ನು ಗೆದ್ದಿತು.
ರು. 2000 ಹಾಗೂ ಆಕರ್ಷಕ ಟ್ರೋಫಿ ದರ್ಶನ ಇಲೆವೆನ್ ತಂಡದ ಪರವಾಯಿತು. ಫೈನಲ್ನಲ್ಲಿ ಮೊದಲು ಬ್ಯಾಟ್ ಮಾಡಿದ ದರ್ಶನ ಇಲೆವೆನ್ ತಂಡ ನಿಗದಿತ 15 ಓವರ್ಗಳಲ್ಲಿ 118 ರನ್ ಗಳಿಸಿತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಆರ್.ಸಿ. ಕೋಡ್ಸರ್ ತಂಡ ಕೊನೆ ಓವರ್ನಲ್ಲಿ ಸಿಕ್ಸರ್ಗಳ ಸುರಿಮಳೆ ಸುರಿಸುವ ಮೂಲಕ 6 ವಿಕೆಟ್ಗಳ ಜಯ ದಾಖಲಿಸಿತು. ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಆರ್.ಸಿ. ಕೋಡ್ಸರ ತಂಡದ ಸಂತೋಷ ಪಡೆದುಕೊಂಡರೆ, ಅದೇ ತಂಡದ ಗಣೇಶ ಅತ್ಯುತ್ತಮ ಬ್ಯಾಟ್ಸ್ಮನ್ ಪ್ರಶಸ್ತಿಗೆ ಪಾತ್ರರಾದರು. ಹೊಸಗದ್ದೆಯ ಉಮೇಶ ಅತ್ಯುತ್ತಮ ಬೌಲರ್ ಆಗಿ ಹೊರಹೊಮ್ಮಿದರು. ಆಹ್ವಾನಿತ ಪಂದ್ಯಾವಳಿಯಲ್ಲಿ ಕಾನಸೂರು, ಹಸ್ರಗೋಡ ಹಾಗೂ ಸುತ್ತಲ ಪಂಚಾಯತ್ ವ್ಯಾಪ್ತಿಯ 8 ತಂಡಗಳು ಭಾಗವಹಿಸಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

