ಮಹಿಳೆಯ ದೌರ್ಬಲ್ಯ ದುರ್ಬಳಕೆಯಾಗುತ್ತಿದೆ
ಮುಂಡಗೋಡ: ಯಾವ ಮನೆಯಲ್ಲಿಯೂ ಸುರಕ್ಷತೆ ವಾತಾವರಣ ಉಳಿದಿಲ್ಲ. ಸಮಾಜದಲ್ಲಿ ಮಹಿಳೆಯ ಶೈಕ್ಷಣಿಕ ಹಾಗೂ ಆರ್ಥಿಕ ದೌರ್ಬಲ್ಯವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಸವದತ್ತಿಯ ನ್ಯಾಯವಾದಿ ಹಾಗೂ ಮಹಿಳಾ ಸಂಘಗಳ ಮುಖ್ಯಸ್ಥೆ ಅನಸೂಯಾ ಕಿತದಲ ಹೇಳಿದರು.
ಅವರು ಶನಿವಾರ ಇಲ್ಲಿಯ ಲೊಯೋಲಾ ಸಭಾಂಗಣದಲ್ಲಿ ಅಂತಾ ರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ಸಂಘಟಿತವಾಗುವವರೆಗೆ ಮಹಿಳೆಯರ ಶೋಷಣೆ ನಿಯಂತ್ರಣಕ್ಕೆ ಬರಲು ಸಾಧ್ಯವಿಲ್ಲ. ಸ್ತ್ರೀಯರಿಗೆ ಎಲ್ಲಿ ಗೌರವ ಇರುವುದಿಲ್ಲವೋ ಅಲ್ಲಿ ದೇವರು ನೆಲೆಸುವುದಿಲ್ಲ ಎಂಬ ಮಾತು ಇಂದು ಉಳಿದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಲಕ್ಷ್ಮಿ ಮಾತನಾಡಿ, 10 ವರ್ಷಗಳಲ್ಲಿ 2 ಕೋಟಿ ಹೆಣ್ಣು ಭ್ರೂಣಹತ್ಯೆ ಪ್ರಕರಣಗಳು ನಡೆದಿವೆ. ಇದರ ಬೆಲೆ ನಮಗೆ ಈಗ ಅರ್ಥವಾಗುವುದಿಲ್ಲ. ಮುಂದೊಂದು ದಿನ ಹೆಣ್ಣಿನ ಸಂಖ್ಯೆಯೇ ಇಲ್ಲದಂತಾದಾಗ ಪರಿತಪಿಸಬೇಕಾಗುತ್ತದೆ. ಮಹಿಳೆಯರ ಮೇಲೆ ದೌರ್ಜನ್ಯ ದಬ್ಬಾಳಿಕೆ ಹೆಚ್ಚುತ್ತಿವೆ. ಸಾರ್ವಜನಿಕ ಒತ್ತಡದಿಂದ ಮಹಿಳೆ ಸ್ಥಿತಿ ತೀವ್ರ ಕ್ಲಿಷ್ಟಕರವಾಗುತ್ತಿದೆ. ಹೆಣ್ಣಿನ ಬಗ್ಗೆ ಕೀಳರಿಮೆ, ಅಸಮಾನತೆ ತೊಡೆದು ಹಾಕಬೇಕಿದೆ ಎಂದರು.
ಲೊಯೋಲಾ ಜನಸ್ಫೂರ್ತಿ ಟ್ರಸ್ಟ್ ಅಧ್ಯಕ್ಷೆ ಸುರೇಖಾ ಪೌಲ್ ಸಿದ್ದಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೀಟಾ ಲೀಮಾ, ಅನುರಾಧಾ ನಾರ್ವೇಕರ, ರತ್ನಾ ನಾರ್ವೇಕರ, ಮಲ್ಲಮ್ಮ ವಾಲ್ಮಿಕಿ, ಶೋಭಾ ಜೋಶಿ, ಕಸ್ತೂರಿ ಲಾಡನವರ ಹಾಗೂ ಲೊಯೋಲಾ ವಿಕಾಸ ಸಂಸ್ಥೆ ನಿರ್ದೇಶಕ ಅರುಣ ಲೂಯಿಸ್ ಇದ್ದರು. ಕವಿತಾ ಪವಾರ ಸ್ವಾಗತಿಸಿದರು. ಜಯಶ್ರೀ ಸಣ್ಣಳ್ಳಿಮನೆ ನಿರೂಪಿಸಿದರು. ಅನಿತಾ ಆಗೇರ ವರದಿ ವಾಚಿಸಿದರು.
ಲೊಯೋಲಾ ವಿಕಾಸ ಕೇಂದ್ರ, ಜನಸ್ಫೂರ್ತಿ ಟ್ರಸ್ಟ್ ಮುಂಡಗೋಡ ಹಾಗೂ ಮಹಿಳಾ ಸ್ವ ಸಹಾಯ ಸಂಘಗಳ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

