ಸಂಪಾದಕೀಯ

ಬೊಗಳೆಗೆ ಬೆಲೆ ಇಲ್ಲ

Published On :

ಹತ್ತು ವರ್ಷಗಳ ಹಿಂದೆ ವಾಜಪೇಯಿ ಮಾಡೆಲ್ ಆಗಿದ್ದರು. ಈಗ ದೇಶಕ್ಕೆ ಗುಜರಾತ್ ಸಿ.ಎಂ. ಮೋದಿ. ಕರ್ನಾಟಕಕ್ಕೆ ಶೆಟ್ಟರ್ ಮಾಡೆಲ್ ಬೇಕು ಎಂಬ ಕೂಗು ಕೇಳಿ ಬರುತ್ತಿದೆ" ಹೀಗೆಂದವರು ಭಾಜಪದ ಅನಂತಕುಮಾರ್. (ಕ.ಪ್ರ. ಮಾ.28, ಪು.6).
ಇವರ ಮಾತನ್ನು ಪತ್ರಿಕೆ "ಬೊಗಳೆ" ಎಂಬ ಶೀರ್ಷಿಕೆಯಡಿಯಲ್ಲಿ ಹಾಕಿರುವುದನ್ನು ಮೆಚ್ಚಲೇ ಬೇಕು. ಅನಂತಕುಮಾರ್ ಅವರೇ, ಈ ಕೂಗು ನಿಮಗೆ ಎಲ್ಲೆಲ್ಲಿ ಕೇಳಿ ಬಂತೋ ನಿಮ್ಮ ಪಕ್ಷದ ಪಾಳಯದ ಹೊರತಾಗಿ? ಈಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆ ಭಾಜಪದವರ ಮೊಳಗು ಮುಳುಗಿ ಹೋಗುತ್ತಿದೆಯೆನ್ನುವುದಕ್ಕೆ ಪುರಾವೆ ಅಲ್ಲವೇ?  ಇದು ತಿಳಿದೂ ವೃಥಾ ಬಾಯಿ ಚಪಲಕ್ಕಾಗಿ, ಅಥವಾ ದಿಟ್ಟತನದ ಸೋಗನ್ನು ತೊಟ್ಟು, ದೊಡ್ಡ ದೊಡ್ಡ ಮಾತುಗಳನ್ನುದುರಿಸುವುದು ನಿರರ್ಥಕ. ಮತದಾರರು ಮೂರ್ಖರಲ್ಲ. ರಾಜಕೀಯ ಪಕ್ಷಗಳನ್ನು ಅವರು ಮೂರ್ಖರನ್ನಾಗಿಸುವುದನ್ನು ಬಲ್ಲರು. ಇನ್ನು ಮುಂದೆ "ಪಕ್ಷ" ನೋಡಿ ಮತ ನೀಡುತ್ತಾರೆಂಬ ಭ್ರಮೆ ಯಾರಿಗೂ ಬೇಡ. ಪಕ್ಷಗಳು ನಿಲ್ಲಿಸುವ ಅಭ್ಯರ್ಥಿಯ ನೈಜ ಅರ್ಹತೆ ಮಾನದಂಡ ಆಗುತ್ತದೆ. ಇದುವರೆಗೂ ಪಕ್ಷವನ್ನು ಆತುಗೊಂಡು ಆದರ ಪ್ರಭಾವಳಿಯಲ್ಲಿ ಗೆದ್ದು ಬಂದವರು ಜನತೆಗೆ ಮಾಡಿದ್ದು ಅಷ್ಟರಲ್ಲೇ ಇದೆಯೆನ್ನುವುದು ಮತದಾರರಿಗೆ ಅರಿವಾಗಿದೆ. ರಾಜಕೀಯ ಪಕ್ಷಗಳಿಗೆ ಅಸ್ತಿತ್ವ ಬೇಕಾದರೆ, ಅವು ತಮ್ಮ ಪಕ್ಷದಲ್ಲೇ ಮೊದಲಿನಿಂದಲೂ ಇದ್ದುಕೊಂಡು ತಮ್ಮ ವೈಯಕ್ತಿಕ ವರ್ಚಸ್ಸಿನಿಂದ ಪಕ್ಷಕ್ಕೆ ಒಂದಷ್ಟು ಹೆಸರು ತಂದು ಕೊಟ್ಟವರನ್ನು ಚುನಾವಣೆಗೆ ನಿಲ್ಲಿಸುವ ಸಾಹಸವನ್ನು ಪಕ್ಷಗಳು ಮಾಡಬೇಕು. ಆಗ ಮಾತ್ರ ಮತದಾರರಿಗೆ ನಿಜವಾಗಿ ಆಯ್ಕೆಯಾಗುವ ಸವಾಲು ಎದುರಾಗುತ್ತದೆ. ಪ್ರಜಾತಂತ್ರದ ಯಶಸ್ಸಿನ ಮೊದಲ ಪಾವಟಿಗೆ ಇದು! ಹಳೆಯ ಹುಲಿ, ಗೆಲ್ಲುವ ಕುದುರೆ, ಇನ್ಯಾರದೋ ನೆರಳಿನಾಶ್ರಯದಲ್ಲಿ ಬೆಳೆದವನು ಎಂದು ಮುಂತಾದ ಮಾನದಂಡಗಳನ್ನು ಆಶ್ರಯಿಸುವುದಾದರೆ ಪಕ್ಷದ ಮಾನದಂಡವಾಗುವುದು ಈ ಬಾರಿ ನಿಶ್ಚಿತವೆನ್ನುವುದನ್ನು ರಾಜಕೀಯ ಪಕ್ಷಗಳೆಲ್ಲವೂ ತಿಳಿಯುವುದುಚಿತ. ಈಗ ಯುವ ಪೀಳಿಗೆಯವರೇ ಪ್ರಧಾನವಾಗಿರುವ ಮತದಾರರು ಬೊಗಳೆ ಮತ್ತು ಬುಡುಬುಡುಕೆಯ ಮಾತುಗಳು ಈಗಾಗಲೇ ಅಪಮೌಲ್ಯಗೊಂಡಿವೆ.
- ಸಾಮಗ ದತ್ತಾತ್ರಿ ಶ್ರೀನಿವಾಸನಗರ, ಬೆಂಗಳೂರು
ಎಡವಿದ ವಿದೇಶ ನೀತಿ
ಈ ಕೆ.ಎಂ. ಲಿಂಗರಾಜುರವರ "ಶ್ರೀಲಂಕಾದ ವಿಚಾರದಲ್ಲಿ ಭಾರತ ಎಡವಿತೆ?" ಲೇಖನ ಸಮಯೋಚಿತವಾಗಿದೆ. ಭಾರತ ಎಡವಿಲ್ಲ ಮುಗ್ಗರಿಸಿ ಬಿದ್ದಿದೆ. ದೇಶದ ಹಿತವನ್ನು ಕಾಂಗ್ರೆಸ್ ಪಕ್ಷವು ಎಂದೂ ಪರಿಗಣಿಸಿಲ್ಲ. ತಾನು ಅಧಿಕಾರದಲ್ಲಿದ್ದರೆ ಸಾಕು ಎಂಬ ಧ್ಯೇಯ ಅದಕ್ಕಿದೆ.  ಇನ್ನೊಬ್ಬರ ಹಿತ ಕಾಪಾಡಲು ಹೋಗಿ ಭಾರತದ ಮಾನ, ಮರ್ಯಾದೆ ಹರಾಜು ಹಾಕುತ್ತಿದೆ. ಸ್ವಾರ್ಥಿಗಳು, ಭ್ರಷ್ಟರು, ಬಾಯಿಗೆ ಬಂದಂತೆ ಮಾತನಾಡಿ ನಂತರ ತಾನು ಹಾಗೆ ಹೇಳಲೇ ಇಲ್ಲ ಎನ್ನುವುದು ಸಾಮಾನ್ಯ.
ನಮ್ಮ ಮೇಲೆ ಯಾವಾಗಲೂ ದ್ವೇಷ ಸಾಧಿಸುತ್ತಾ ನಮ್ಮ ಮೇಲೆ ಭಯೋತ್ಪಾದಕರನ್ನು ಕಳಿಸುವ, ನಮ್ಮ ಭಾರತೀಯರನ್ನು ಸಾಯಿಸುತ್ತಿರುವ, ರಾಷ್ಟ್ರಕ್ಕೆ ಮೊಂಡು ಸಲಾಮು ಹೊಡೆದು ಜೀ ಹುಜೂರ್ ಆಗಿ, ನಮ್ಮ ಸ್ವಾಭಿಮಾನವನ್ನು ಹರಾಜು ಹಾಕುತ್ತಿರುವುದು ಎಲ್ಲರಿಗೂ ಗೊತ್ತಿದೆ ಅಲ್ಲವೇ?
ಈಗ ನಮ್ಮ ಭಾರತಕ್ಕೆ ಲಾಲ್‌ಬಹದ್ದೂರ್ ಶಾಸ್ತ್ರಿ ಅಂತಹವರು ಬೇಕು, ಕಾಂಗ್ರೆಸ್ ಪಕ್ಷದಲ್ಲಿದ್ದರೆ, ಆದರೆ ಇವರೆಲ್ಲಾ ಎಲೆಮರೆ ಹೂಗಳಂತೆ ಇದ್ದಾರೆ. ಅಧಿಕಾರದ ಆಸೆಯಿಂದ, ಕುರ್ಚಿಯ ಆಸೆಯಿಂದ ಹಲ್ಲು ಕಿತ್ತ ಹಾವಿನಂತಿದ್ದಾರೆ ಅಲ್ಲವೇ? ಯಾವ ಪಕ್ಷವೇ ಅಧಿಕಾರಕ್ಕೆ ಬರಲಿ, ಆದರೆ ದೇಶದ ಘನತೆ, ಗೌರವ ಕಾಪಾಡಲಿ.
- ಎ.ಪಿ. ರಂಗನಾಥ್, ನಾರಾಯಣಶಾಸ್ತ್ರಿ ರಸ್ತೆ, ಮೈಸೂರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.