ಬರ್ಬರ ಕಾಯಿದೆ ಪಾಲಕರು
ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ಸಿನ ಆಡಳಿತಕ್ಕೆ ವರ್ಷಕ್ಕೂ ಹೆಚ್ಚು ಅವಧಿಯ ಅಧಿಕಾರದ ಅನುಭವವಾಗಿದೆ. ಈ ಅವಧಿಯಲ್ಲಿ ಜನರಲ್ಲೂ ಹೊಸ ಸರ್ಕಾರದ ವಿಚಾರದಲ್ಲಿದ್ದ ಅಭಿಮಾನ ಕುಗ್ಗುತ್ತಿದೆ. ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಾರ್ಟಿ ಚೇತರಿಸಿಕೊಂಡು ಸಭೆ - ಪ್ರದರ್ಶನಗಳನ್ನು ನಡೆಸುತ್ತಿದೆ.
ಈ ತಿಂಗಳ ಮೊದಲ ಭಾಗದಲ್ಲಿ ಕೋಲ್ಕತಾದಲ್ಲಿ ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ ಏರ್ಪಡಿಸಿದ್ದ ಒಂದು ಪ್ರತಿಭಟನಾ ಪ್ರದರ್ಶನದಲ್ಲಿ ಹಿಂಸಾಚಾರ ನಡೆದಿದ್ದು ನಿಜ. ಆ ಸಂದರ್ಭದಲ್ಲಿ ಪೊಲೀಸರು ಸಂಘಟನೆಯ ಸಕ್ರಿಯ ಕಾರ್ಯಕರ್ತ ಸಂತೋಷ ಸಹಾನಿಯನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರು ಪಡಿಸಿ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದ್ದರು. ಜೈಲಿನಲ್ಲಿ ಸಂತೋಷ ಸಹಾನಿಗೆ ಅನಾರೋಗ್ಯದ ಲಕ್ಷಣಗಳು ಕಂಡು ಬಂದಾಗ, ಅವರನ್ನು ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಸೇರಿಸಲಾಗಿತ್ತು.
ಆ ಸಂದರ್ಭದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಸಹಾನಿಯ ಕಾಲನ್ನು ಮಂಚಕ್ಕೆ ಕೈಕೋಳದ ನೆರವಿನಿಂದ ಕಟ್ಟಿಹಾಕಲಾಗಿತ್ತು. ಖಂಡಿತವಾಗಲೂ ಇದು ಬರ್ಬರ ಪೊಲೀಸ್ ವರ್ತನೆ. ಆಸ್ಪತ್ರೆಗೆ ಬಂದವರಲ್ಲಿ ಅನೇಕರು ಹಾಗೂ ಮಾರ್ಕ್ಸ್ವಾದೀ ಕಮ್ಯುನಿಸ್ಟ್ ಪಾರ್ಟಿ ಪ್ರತಿಭಟಿಸಿದ ಅನಂತರ ಮಂಚದ ಕಾಲಿಗೆ ಹಾಕಿದ್ದ ಕೋಳವನ್ನು ತೆಗೆಯಲಾಯಿತು. ಈಗಲೂ ಕೋಲ್ಕತಾದಂತಹ ಮಹಾನಗರದಲ್ಲಿ ಇಂತಹ ಘಟನೆ ನಡೆಯುವುದು ಸಾಧ್ಯ ಎನ್ನುವುದಾದರೆ, ಭಾರತ ಇನ್ನೂ ತನ್ನ ಬರ್ಬರ ಪರ್ವದಿಂದ ಹೊರಗೆ ಬಂದಿಲ್ಲ ಎಂದೇ ಹೇಳಬೇಕು. ಈ ಬರ್ಬರ ಕೃತ್ಯಕ್ಕೆ ಯಾರೇ ಹೊಣೆಗಾರರಾಗಿರಲಿ, ಅವರು ಖಂಡನೆಗೆ ಅರ್ಹರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

