ಸಂಪಾದಕೀಯ

ಹುಟ್ಟಿದ ಮೇಲೆ ಮದುವೆ ಆಗಲೇಬೇಕಾ?

Published On :

ಜೆ ಪಿ ನಾಗರಾಜ, ದಾವಣಗೆರೆ 9901193811
ಹುಟ್ಟಿದ ಮೇಲೆ ಮದುವೆ ಆಗಲೇಬೇಕಾ?
ಹಾಗೇನಿಲ್ಲ, ಆದರೆ ಹುಟ್ಟಿಸುವ ಯಡವಟ್ಟು ಮಾಡಿಕೊಂಡವರು ಮದುವೆ ಆಗಲೇಬೇಕಾಗಿ ಬಂದ ಉದಾಹರಣೆಗಳಿವೆ!

ಉಜ್ಜನಿ ಜಲಂಧರ್, 8971857200
ಇಲ್ಲೊಬ್ಬಳು ಮಧ್ಯರಾತ್ರಿ ಫೋನ್‌ಮಾಡಿ ಸ್ವಾತಂತ್ರ್ಯ ಸಿಕ್ತಾ ಅಂತ ಕೇಳ್ತಿದ್ದಾಳಲ್ಲ?
ಒಟ್ಟಾಗಿ ಸಂಭ್ರಮಾಚರಣೆ ಮಾಡೋಣ ಬನ್ನಿ ಅಂತ ಆಫರ್ ಕೊಡಿ.

ಬಿ. ವಿ. ನಾರಾಯಣ್, 9964569971
ಹೆಚ್ಚಾಗಿ 'ಚಳ್ಳೆಹಣ್ಣ'ನ್ನು ಪೊಲೀಸರೇ ತಿನ್ನುತ್ತಾರಲ್ಲ?
ಕಳ್ಳರು ಪೊಲೀಸರಿಗೆ ಕೊಡೋದು ಅದನ್ನು ಮಾತ್ರ!

ಬೆಮೆಲ್ ದೇವೇಗೌಡ, ಪಾಂಡವಪುರ 9481210017
ಪ್ರಾಮಾಣಿಕ ವ್ಯಕ್ತಿ ಇಂದು ಮೂರ್ಖನೋ, ತ್ಯಾಗಿಯೋ?
ಪಳೆಯುಳಿಕೆ!

ಎಂ. ಬಿ. ಕೃಷ್ಣಮೂರ್ತಿ 9449130531
ಅತಿಯಾದರೆ ವೇಗ?
ಪರಊರಿಗೆ ಪ್ರವೇಶ ಬೇಗ!

-ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.