ಕೋಲ್ಯ: ನೀನು ನನಗೋಸ್ಕರ ಏನು ಮಾಡಬಲ್ಲೆ?
ಗರ್ಲ್‌ಫ್ರೆಂಡ್: ನಾನು ನಿನಗಾಗಿ ಕೆಂಡದ ಮೇಲೆ ಆಡ್ಡಾಡ ಬಲ್ಲೆ, ಜ್ವಾಲಾಮುಖಿಯಲ್ಲಿ ಜಿಗಿಯಬಲ್ಲೆ..
ಕೋಲ್ಯ: ಓಹ್ ಥ್ಯಾಂಕ್ಯೂ ಡಾರ್ಲಿಂಗ್. ಅಂದ್ಹಾಗೆ ಈಗ ನನ್ನ ಭೇಟಿ ಆಗೋದಕ್ಕೆ ಬರ್ತೀಯಾ?
ಗರ್ಲ್‌ಫ್ರೆಂಡ್: ಇಲ್ಲಪ್ಪ. ಹೊರಗಡೆ ಎಷ್ಟೊಂದು ಬಿಸಿಲಿದೆ ನೋಡಿದ್ಯಾ?!
ಕೋಲ್ಯ ಗರ್ಲ್‌ಫ್ರೆಂಡ್‌ನ ಗಟ್ಟಿಯಾಗಿ ತಬ್ಬಿಕೊಂಡ
ಗರ್ಲ್‌ಫ್ರೆಂಡ್(ನಾಚುತ್ತಾ): ನೀನು ಇನ್ನೊಂದು ಸರ್ತಿ ಇದೇ ರೀತಿ ತಬ್ಬಿಕೊಂಡ್ರೆ. ನಾನು ಜೀವನಪರ್ಯಂತ ನಿನ್ನವಳಾಗಿ ಇರ್ತೀನಿ.
ಕೋಲ್ಯ: ವಾರ್ನಿಂಗ್ ಕೊಟ್ಟಿದ್ದಕ್ಕೆ ಥ್ಯಾಂಕ್ಸ್....