ಭಯ

Updated on: 

ಇದಕ್ಕೆ ಹೆದರದವರು ಯಾರೂ ಇಲ್ಲ
    ಉಭಯ ಗುಂಪಿನವರ ಜಗಳ ತಾರಕಕ್ಕೇರಿದಾಗ ಉಂಟಾಗುವ ಭಾವ
    ಅಭಯದಾತರಿಲ್ಲದಾಗ ಹುಟ್ಟಿಕೊಳ್ಳುವ ಏಕಾಂಗಿತನದ ಪರಿಣಾಮ
    ಭಯವನ್ನು ಹೊಡೆದೋಡಿಸುವ ಸರಳ ಉಪಾಯವೆಂದರೆ ಹೆಚ್ಚು ಹೆಚ್ಚು ಕ್ರೈಂ ಸ್ಟೋರಿ ನೋಡುವುದು
    ಗಡಸು ಹೆಂಡತಿ ಕಂಡಾಗ ಭಂಡ ಗಂಡನಿಗಾಗುವ ಅಧೈರ್ಯ
    ಅನುಕಂಪದ ಅಭಾವದಲ್ಲಿ ಏಳುವ ಕಂಪನ
    ಎರಡನೆಯದಿದೆಯೆಂಬ ಭಾವವೇ ಇದರ ಮೂಲ(ದ್ವಿತೀಯಾತ್ ವೈ ಭಯಂ ಭವತಿ)
    ದರಿ ಕಂಡಾಗ ಉಂಟಾಗುವ ಹೆ'ದರಿ'ಕೆ
    ಫ್ರಾಡ್ಗಳಿಂದಾಗುವ ಅಫ್ರೇಡ್
    ಪ್ರೀತಿಯ ಜಾಗದಲ್ಲಿ ದ್ವೇಷವನ್ನು ಹುಟ್ಟಿಸುವ ಭೀತಿ
    ಇದನ್ನು ಉತ್ಪಾದಿಸುವ ಕಾರ್ಮಿಕರಿಗೆ ಭಯೋತ್ಪಾದಕರು ಎನ್ನುತ್ತಾರೆ
    ಸಾವು ಉತ್ಪಾದಿಸುವ ನೋವು
    ಎಲ್ಲ ಬಿಟ್ಟವನನ್ನೂ ಬಿಡದ ಮಾಯೆ
    ಜಯವನ್ನು ಕಸಿದುಕೊಳ್ಳುವ ಶತ್ರು
    ಏನಾದರೂ ಕಂಡರೂ ಭಯ, ಏನೂ ಕಾಣದಿದ್ದರೂ ಭಯ
    ಭಕ್ತಿಯ ಒಡನಾಡಿ
    ಜನಸಾಮಾನ್ಯನ ಭಯವೇ ದೊಡ್ಡವರ ಬಂಡವಾಳ
    ಭಯವಿಲ್ಲದಿರುವಲ್ಲಿ ಆಯುಧವೇತಕೆ
    ಸುಳ್ಳಿನ ಜನಕ
    ಗಡಗಡ ನಡುಗಲು ಮತ್ತೊಂದು ಕಾರಣ

-ವಿಶ್ವನಾಥ ಸುಂಕಸಾಳ
vishwasunkasal@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com