ಪ್ರಾಥಮಿಕ ಶಾಲಾ ಶಿಕ್ಷಕರ ಪರೀಕ್ಷೆಗೆ ಕಾಲಾವಕಾಶ ನೀಡಿ
ಕರ್ನಾಟಕ ಸರ್ಕಾರ ನಾಲ್ಕು ಸಾವಿರ ಪ್ರಾಥಮಿಕ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿರುವುದು ಸಂತೋಷದ ಸಂಗತಿ. ಆದರೆ ಸರ್ಕಾರ ಒಮ್ಮೇಲೇ ಪರೀಕ್ಷಾ ಮಾದರಿ ಬದಲಾವಣೆ ಮಾಡಿ ಅರ್ಜಿ ಸಲ್ಲಿಸಲು ಕನಿಷ್ಠ 1 ತಿಂಗಳು ಕೂಡಾ ಅವಕಾಶ ನೀಡಿಲ್ಲ. ಮೇಲಾಗಿ ಪರೀಕ್ಷಾ ತಯಾರಿಗೆ ಕನಿಷ್ಠ 3 ತಿಂಗಳ ಕಾಲಾವಕಾಶ ನೀಡಬೇಕು. ಅಲ್ಲದೇ ಈಗಾಗಲೇ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನಲೆಯಲ್ಲಿ ಶಿಕ್ಷಕ ಅಭ್ಯರ್ಥಿಗಳಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕಾಗಿ ನೂಕುನುಗ್ಗಲು ಆಗುತ್ತಿದೆ. ಅಲ್ಲದೆ ಈ ಪ್ರಮಾಣ ಪತ್ರಗಳು ಸಿಗಬೇಕಾದರೆ ಕನಿಷ್ಠ 21 ದಿನಗಳ ಕಾಲಾವಕಾಶ ಬೇಕು. ಇದರಿಂದ ಗ್ರಾಮೀಣ ಅಭ್ಯರ್ಥಿಗಳಿಗೆ ಸಕಾಲದಲ್ಲಿ ಅರ್ಜಿ ಸಲ್ಲಿಸಲು ನಿಗದಿಪಡಿಸಿದ (ಮಾರ್ಚ್ 2 ರೊಳಗೆ) ದಿನಾಂಕದೊಳಗೆ ಪ್ರಮಾಣ ಪತ್ರಗಳು ಸಿಗದೇ ನೌಕರಿಯಿಂದ ವಂಚಿತರಾಗುವ ಪ್ರಸಂಗಗಳು ರಾಜ್ಯಾದ್ಯಂತ ನಡೆಯುತ್ತಿವೆ. ಕಾರಣ ಸಂಬಂಧಿಸಿದವರು ಈ ಕೂಡಲೇ ಅರ್ಜಿ ಸಲ್ಲಿಕೆಗೆ ಹಾಗೂ ಪರೀಕ್ಷೆಗೆ ಅವಧಿಯನ್ನು ಮುಂದೂಡಿ ಸಹಕರಿಸಬೇಕಾಗಿ ವಿನಂತಿ.
ಎಸ್.ವ್ಹಿ. ಪಾಟೀಲ, ಬಸವನಬಾಗೇವಾಡಿ
ಜಾಣ ಕುರುಡೇಕೆ?
ಗ್ರಾಮೀಣ ರಸ್ತೆಗಳು ತುಂಬಾ ಹದಗೆಟ್ಟ ಸ್ಥಿತಿಯಲ್ಲಿರುವುದೇ ಹೆಚ್ಚು. ಕೆಲವು ಕಡೆ ವರ್ಷದಲ್ಲಿ ಎರಡು ಬಾರಿ ಟಾರ್ ಹಾಕಿಸಿ ಬಿಲ್ ಮಾಡಿಕೊಂಡ ಉದಾಹರಣೆಗಳಿವೆ. ಚುನಾವಣೆಗಳು ಸಮೀಪಿಸಿದಾಗ ಮಾತ್ರ ಅಭಿವೃದ್ಧಿ ಕಾರ್ಯಗಳು ಚುರುಕುಗೊಳ್ಳುವುದು ಸರ್ವೆ ಸಾಮಾನ್ಯ. ಇನ್ನು ಇರುವ ರಸ್ತೆಯನ್ನು ಅಗೆದು ತಮ್ಮ ಹೊಲ- ತೊಟಗಳಿಗೆ ಪೈಪ್ (ನೀರಿನ) ಅಳವಡಿಸಿಕೊಂಡು ನಂತರ ಅದನ್ನು ಮುಚ್ಚದೇ ಹಾಗೆಯೇ ಬಿಡುತ್ತಿರುವ ಕೆಲವು ರೈತರ ಅಸಡ್ಡೆಯಿಂದಾಗಿ ವಾಹನಗಳ ಓಡಾಟಕ್ಕೆ ತುಂಬಾ ತೊಂದರೆಯಾಗುತ್ತಿದೆ. ಪಿಡಬ್ಲ್ಯೂಡಿಯವರು ಇದೇ ರಸ್ತೆಯಲ್ಲಿ ಓಡಾಡುತ್ತಿದ್ದರೂ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.
-ಮಾಗಡಿ ಶ್ರೀನಿವಾಸ್, ರಾಮನಗರ ಜಿಲ್ಲೆ
ಪ್ರತಿಕ್ರಿಯೆ
ದಿನಾಂಕ 15-02-2013ರ ಸಂಪಾದಕೀಯದಲ್ಲಿ ರಾಜ್ಯದ ಪದವಿಪೂರ್ವ ಕಾಲೇಜು ಪ್ರಾಂಶುಪಾಲರು ಹಾಗೂ ಉಪನ್ಯಾಸಕರುಗಳು 'ಮಾಡದ ಕೆಲಸಕ್ಕೆ ಹಣ' ಪಡೆದಿರುತ್ತಾರೆಂದು ಆಕ್ಷೇಪಿಸಿದ್ದೀರಿ. ಅದಕ್ಕಾಗಿ ಈ ಸ್ಪಷ್ಟನೆ. ರಾಜ್ಯದ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರುಗಳು ದಿನಾಂಕ 8-12-11 ರಿಂದ ದಿನಾಂಕ 15-12-11ರ ವರೆಗೆ ಮುಷ್ಕರ ಮಾಡಿದ್ದು ನಿಜ. ಈ 8 ದಿನದ ಅವಧಿಯನ್ನು ಸರ್ಕಾರದ ಆದೇಶ ಸಂಖ್ಯೆ ಇಡಿ248 ಡಿಜೆಡಿ 2012ರ ಪ್ರಕಾರ ಆ ವರ್ಷದ 5 ರಜಾ ದಿನಗಳಲ್ಲಿ ಕರ್ತವ್ಯ ನಿರ್ವಹಿಸಿ, ಉಳಿದ 3 ದಿನಕ್ಕೆ ಎಲ್ಲಾ ಉಪನ್ಯಾಸಕರ- ಪ್ರಾಂಶುಪಾಲರ ಗಳಿಕೆ ರಜೆಗಳನ್ನು ಕಳೆದು ಸರಿದೂಗಿಸಲಾಗಿದೆ. ಈ ವಿಷಯವನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ. ಇನ್ನೊಂದು ಮಾತು. ರಾಜ್ಯದ ಪದವಿಪೂರ್ವ ಇಲಾಖೆಯ ಪ್ರಾಂಶುಪಾಲರು, ಉಪನ್ಯಾಸಕರುಗಳು ಎಷ್ಟೇ ಮುಷ್ಕರ ಮಾಡಿದರೂ ಕಳೆದ 5 ವರ್ಷಗಳಿಂದಲೂ ಕೇವಲ ಭರವಸೆಗಳನ್ನು ನೀಡಿ ನಮ್ಮನ್ನು ಎಲ್ಲಾ ಸಂದರ್ಭಗಳಲ್ಲೂ ಮುರ್ಖರನ್ನಾಗಿಸಿದ ಕೀರ್ತಿ ಶಿಕ್ಷಣ ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರದ್ದು!
-ರಮೇಶ್, ಚನ್ನರಾಯಪಟ್ಟಣ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

