ಅಫ್ಜಲ್ನ ಪತ್ರ ಪ್ರಲಾಪ
ಕ.ಪ್ರ. 21.2.13ರಂದು ಪ್ರಕಟವಾದ ರಾಘವೇಂದ್ರ ಆಚಾರ್ಯರ ಲೇಖನ "ಗಲ್ಲು-ಗುಲ್ಲು" ಸಮಯೋಚಿತವಾಗಿತ್ತು. ವಿಚಾರವಾದಿಗಳೆನಿಸಿಕೊಂಡವರು ತಮ್ಮ ಮೂಗಿನ ನೇರಕ್ಕೆ ಪ್ರತಿಪಾದನೆ ಮಾಡಿರುವುದು ಬೇಸರ ತರಿಸುತ್ತಿದೆ. ಅಫ್ಜಲ್ ಅಂತ್ಯಕಾಲದಲ್ಲಿ ತನ್ನ ಮನೆಯವರಿಗೆ ಪತ್ರ ಬರೆದಿರುವುದು ಹಾಸ್ಯಾಸ್ಪದವಾಗಿದೆ! ಈ ಕೆಲಸಕ್ಕಾಗಿ ಆಯ್ದುಕೊಂಡ 'ಅಲ್ಲಾನಿಗೆ' ಕೃತಜ್ಞತೆ ಸಲ್ಲಿಸುತ್ತೇನೆ. ನೀವು ಕುಟುಂಬದವರು ಕಣ್ಣೀರು ಸುರಿಸುವ ಬದಲು ನನ್ನ ಘನತೆಯನ್ನು ಗೌರವಿಸಿ, ಎಂದಿದ್ದಾನೆ. ವಿವೇಕವಿಲ್ಲದೆ ದೇವರ ಹೆಸರನ್ನು ದುರುಪಯೋಗಪಡಿಸುವ ಪ್ರತಿ ಮನುಷ್ಯನಿಗೆ ಇದೇ ಗತಿ ತಾನೆ? ಅವನು ದೇವರ ಹೆಸರಲ್ಲಿ ಮಾಡಿದ 'ಘನ ಕಾರ್ಯವಾದರೂ' ಏನು? ತನಗೆ ಜನ್ಮಕೊಟ್ಟು, ಅನ್ನ ಕೊಟ್ಟು ಪೋಷಿಸುವ ಮಾತೃಭೂಮಿಗೆ ವಿಧೇಯನಾಗಿರದೆ, ಅನ್ಯ ರಾಷ್ಟ್ರಗಳೊಂದಿಗೆ ಕೈ ಜೋಡಿಸಿ ದೆಹಲಿ ಪಾರ್ಲಿಮೆಂಟ್ ಭವನಕ್ಕೆ ಸ್ಫೋಟಕ್ಕಾಗಿ ಪ್ರಯತ್ನಿಸಿದ್ದು! ಒಂದು ಪಕ್ಷ ಆ ನಿಯೋಜನೆ ಸಫಲಗೊಂಡಿದ್ದರೆ ನಮ್ಮ ನೇತಾರರೆಲ್ಲ ಅಂದೇ ಇಹಲೋಕ ತ್ಯಜಿಸುತ್ತಿದ್ದರು. ಇಡೀ ವಿಶ್ವದಲ್ಲೇ ನಮ್ಮ ರಕ್ಷಣಾ ವ್ಯವಸ್ಥೆ ತಲೆತಗ್ಗಿಸುವಂತಾಗುತ್ತಿತ್ತು. ಆ ದಿನ ನಮ್ಮ ಸೈನಿಕರು ಪ್ರಾಣದ ಹಂಗು ತೊರೆದು ಎದೆಯೊಡ್ಡಿ, ದಿಟ್ಟ ಹೋರಾಟ ನಡೆಸಿ ತಮ್ಮ ಅಮೂಲ್ಯ ಜೀವ ತೆತ್ತರು. ಅವರ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು. ಅವರು ಮಾಡಿದ ತಪ್ಪಾದರೂ ಏನು? ಈ ಅಫ್ಜಲ್ ತಾನು ಸಾಯುವ ಮುಂಚೆ ತನ್ನ ಕುಟುಂಬ ವರ್ಗದವರಿಗೆ, (37 ವರ್ಷದ ಮಡದಿ, 13 ವರ್ಷದ ಮಗನಿಗೆ) ತನ್ನ ಅಂತ್ಯದ ಪತ್ರ ಬರೆಯುತ್ತಾನೆ. ಬಹುತೇಕ ಅವನಿಗೆ ಆಗ ಕುಟುಂಬದ ಅರ್ಥ ಅರಿವಾಗಿ ಜ್ಞಾನೋದಯವಾಗಿರಬೇಕು! ಘನ ಸರ್ಕಾರ ದೇಶದ ಭದ್ರತೆಗೆ ಕಾನೂನಿನಲ್ಲಿ ಇನ್ನಷ್ಟು ಬದಲಾವಣೆ ತರಬೇಕು. ಅಪರಾಧಿಗಳಿಗೆ ಹೆಚ್ಚಿನ ಶಿಕ್ಷೆ ಕೊಡುವಂತಾಗಬೇಕು. ದೇಶದ್ರೋಹಿಗಳಿಗೆ ಇದು ಪಾಠವಾಗಬೇಕು.
-ಮೃತ್ಯುಂಜಯಪ್ಪ, ಚಿತ್ರದುರ್ಗ
ಮನೆ ಬಾಡಿಗೆ ಭತ್ಯ ಹೆಚ್ಚಿಸಿ
'ಗಗನಕ್ಕೇರುತ್ತಿರುವ ಬೆಲೆಗಳು, ಬರುವ ಸಂಬಳ ಸಾಲದು' ಇದು ಸರ್ಕಾರಿ ನೌಕರರ ಅಳಲು. ಗ್ರಾಮೀಣ ಪ್ರದೇಶದಲ್ಲಿ ದುಡಿಯುತ್ತಿರುವ ಸರ್ಕಾರಿ ನೌಕರರಿಗೆಲ್ಲ ಸ್ವಂತ ಮನೆ ಇರುವುದಿಲ್ಲ. ಎಲ್ಲರಿಗೂ ತಮ್ಮ ತಾಲೂಕಿನ ಅಥವಾ ಊರಿನ ಅಕ್ಕ-ಪಕ್ಕ ಕೆಲಸ ಸಿಕ್ಕಿರುವುದಿಲ್ಲ. ಬೇರೆ ಜಿಲ್ಲೆ ತಾಲೂಕುಗಳಿಂದ ಬಂದು ವಾಸ್ತವ್ಯ ಹೂಡಿರುತ್ತಾರೆ. ಹೋಬಳಿಯಂತಹ ಕಡೆ ಸಾಧಾರಣ ಎಂದರೂ 2000/ರು ಕಡಿಮೆ ಬಾಡಿಗೆಗೆ ಮನೆ ಸಿಕ್ಕುವುದಿಲ್ಲ. ನೀರಿನ ಅನುಕೂಲತೆ ಇರುವ ಮನೆಗಳಿಗೆ 3000ದಿಂದ 4000 ರುಪಾಯಿ ವರೆಗೆ ಬಾಡಿಗೆ ಇರುತ್ತದೆ. ಒಬ್ಬ ಶಿಕ್ಷಕನಿಗೆ ಸರ್ಕಾರದಿಂದ ಸಿಕ್ಕುವ ಮನೆ ಬಾಡಿಗೆ 1000ದಿಂದ 2000 ರುಪಾಯಿಯ ಒಳಗಿದೆ. ಇಂತಹ ಪರಿಸ್ಥಿತಿಯಲ್ಲಿ ಅವರು ಕಷ್ಟದಲ್ಲಿ ಜೀವನ ಸಾಗಿಸಬೇಕು. ಬೆಂಗಳೂರು ನಗರದ ನೌಕರರಂತೆ ಗ್ರಾಮೀಣ ಪ್ರದೇಶದ ನೌಕರರ ಮನೆ ಬಾಡಿಗೆ ಭತ್ಯವನ್ನು ಹೆಚ್ಚಿಸಿದರೆ ಅನುಕೂಲವಾಗುತ್ತದೆ.
-ಸಾ.ಮ. ಶಿವಮಲ್ಲಯ್ಯ, ಸಾಸಲಾಪುರ, ಕನಕಪುರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

