ಭಟ್ರೆ ನಿಮಗೆ ಅಬಕಾರಿ ಸಚಿವ ಸ್ಥಾನ ಸಿಕ್ಕರೆ ಏನ್ಮಾಡ್ತೀರಾ?

Updated on: 
ಲಕ್ಕೂರು ಎಂ. ನಾಗರಾಜ್ ಮಾಲೂರು, 9740297157
ಮನಸ್ಸೊಂದಿದ್ದರೆ ಮಾರ್ಗವು ಉಂಟು. ಕನಸೊಂದಿದ್ದರೆ ಏನು ಉಂಟು ಸಾರ್?
ಕಾಮರಾಜ ಮಾರ್ಗ ಉಂಟು ಅನ್ನುವವರೂ ಇದ್ದಾರೆ!

ಬರ್ಕಲಿ ರಮೇಶ್ ಕಿರಗಂದೂರು 9008 741348
ಭಟ್ರೆ ನಿಮಗೆ ಅಬಕಾರಿ ಸಚಿವ ಸ್ಥಾನ ಸಿಕ್ಕರೆ ಏನ್ಮಾಡ್ತೀರಾ?
ಮೊದಲು ನಿನಗೆ ಒಂದು ಗುಂಡು ಪಾರ್ಟಿ ಕೊಡ್ತೀನಿ!

ರವಿಕುಮಾರ್. ಜಿ.ಬಿ. 944966 9897
ಪ್ರತಿಸಲ ಹಾಲಿನ ದರ ಏರಿಕೆ ಮಾಡುವಾಗ ಹೊರ ರಾಜ್ಯದ ಹಾಲಿನ ದರದ ವಿವರಣೆ ಕೊಡುತ್ತಾರೆ ಏಕೆ?
ಅಲ್ಕೋಹಾಲ್‌ಗೆ ಇದರ ಅಗತ್ಯ ಇಲ್ಲವೆಂದು?

ಕೆನ್ನಾಳು ಭಾಸ್ಕರ್, 90364 16729
ನಿಮಗೆ ಏನು ಕೊಟ್ರೇ ಇಷ್ಟವಾಗುತ್ತೆ ಭಟ್ರೆ?
ದುಡ್ಡು ಎಂದು ಇಲ್ಲೀ ತನಕ ಯಾರೂ ಭಾವಿಸಿಲ್ಲ!

ಬಸವನಗೌಡ ಹೆಬ್ಬಳಗೆರೆ ಚನ್ನಗಿರಿ
'ಕೇಳ್ರಪ್ಪೋ ಕೇಳಿ' ಅಂಕಣವು ಉತ್ತಮವಾಗಿ ಮೂಡಿ ಬರ್ತಿದೆ. ಅದರ ಯಶಸ್ಸು ಸಲ್ಲೋದು ಪ್ರಶ್ನಿಸುವವರಿಗೋ, ಉತ್ತರಿಸುವ ನಿಮಗೋ?
ನನಗೇ ನಾನು ಬೆನ್ನು ತಟ್ಟಿಕೊಳ್ಳಲು ಆಗದ್ದರಿಂದ ನಿಮಗೆ ಕೊಡುತ್ತಿದ್ದೇನೆ!

-ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com