ಕೋಲ್ಯನ ಪಕ್ಕದ ಮನೆಯ ಮುದುಕಿ ಸತ್ತುಹೋದಳು. ಕೋಲ್ಯ ಮತ್ತು ತಿಮ್ಮ ತಮ್ಮ ದುಃಖ ವ್ಯಕ್ತಪಡಿಸಲು ಆ ಮನೆಗೆ ಹೋದರು. ಅಲ್ಲಿ ಆ ಮುದುಕಿಯ ಮಗಳು ರಾಗವಾಗಿ ಅಳುತ್ತಾ ಕುಳಿತಿದ್ದಳು.
ಮಗಳು: ಅಮ್ಮ, ನಮ್ಮನ್ನೆಲ್ಲ ಬಿಟ್ಟು ಎಲ್ಲಿಗೆ ಹೋಗ್ಬಿಟ್ಟೆ ನೀನು? ಕರೆಂಟ್ ಇರದ, ನೀರಿರದ, ನಿನಗಿಷ್ಟವಾದ ಸೇಬಿನ ಹಣ್ಣಿರದ, ಬಿಸಿಲಿರದ, ಬೆಳಕಿರದ ಜಾಗಕ್ಕೆ ಯಾಕೆ ಹೋದೆ?
(ಅವಳ ಮಾತನ್ನು ಕೇಳಿ ಗಾಬರಿಯಾದ ಕೋಲ್ಯ ತಿಮ್ಮನಿಗೆ ಮೊಣಕೈಯಿಂದ ತಿವಿದು ಹೇಳಿದ...)
ಕೋಲ್ಯ: ಮುದುಕಿ ನಮ್ಮನೆಗೆ ಹೋಗಿದಾಳಾ ಏನ್ಕಥೆ!?