ಸದುದ್ದೇಶ ಅರಿಯದೆ ಟೀಕೆ ಯೋಗ್ಯವಲ್ಲ
ಮುಖ್ಯಮಂತ್ರಿ ಅಗ್ಗದ ಮದ್ಯ ತಯಾರಿಕೆ ಕುರಿತು ಹಾಗೂ ಹೆಚ್ಚುವರಿ ಮದ್ಯದ ಅಂಗಡಿಗಳನ್ನು ತೆರೆಯಲು ಲೈಸೆನ್ಸ್ ನೀಡುವುದರ ಬಗ್ಗೆ ವಿಚಾರ ಮಂಡಿಸಿದಾಗ ವಿರೋಧ ಪಕ್ಷದವರು ಪೂರ್ವಗ್ರಹ ಪೀಡಿತರಂತೆ ಟೀಕೆ ಮಾಡುತ್ತಿದ್ದು, ಮದ್ಯದ ವಿಷಯದಲ್ಲಿ ಮಠಾಧೀಶರು ಮುಖ್ಯಮಂತ್ರಿಗಳನ್ನು ಅಪರಾಧಿ ಕಟಕಟೆಯಲ್ಲಿ ನಿಲ್ಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕರಾದ ಕುಮಾರಸ್ವಾಮಿಯವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮುಖ್ಯಮಂತ್ರಿಗಳು ಚುನಾವಣಾ ಪೂರ್ವದಲ್ಲಿ ಮದ್ಯದ ದೊರೆಗಳಿಂದ ಹಣ ಪಡೆದಿದ್ದು ಮದ್ಯದ ಲಾಬಿಗೆ ಮಣಿದಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಮಾಧ್ಯಮಗಳ ಜೊತೆ ವಾಹಿನಿಗಳೂ ಕೂಡ ಮದ್ಯದ ವಿಷಯದಲ್ಲಿ ಮುಖ್ಯಮಂತ್ರಿಗಳು ನೀಡುವ ಸ್ಪಷ್ಟೀಕರಣದ ವಿಚಾರ ಮಾಡದೆ ಏಕಮುಖಿಯಾಗಿ ಟೀಕೆ ಮಾಡುತ್ತಿದ್ದಾರೆ.
ಅಗ್ಗದ ಮದ್ಯ: ಸರ್ಕಾರಿ ಸಾರಾಯಿ ಬಂದ ಮೇಲೆ ಬಡ ಕೂಲಿಕಾರರು, ಫ್ಯಾಕ್ಟರಿಗಳಲ್ಲಿ ತಯಾರಾಗುವ ಮದ್ಯ ಕುಡಿಯಲು 180 ಎಂ.ಎಲ್.ಗೆ ಕನಿಷ್ಠ 50ರಿಂದ 60 ರೂ. ತೆರಬೇಕಾಗಿದೆ. ಗಳಿಸುವ 200 ರೂ.ಗಳಲ್ಲಿ 100 ರೂಪಾಯಿ ಮದ್ಯಕ್ಕೆ ಖರ್ಚು ಮಾಡಿದ ಮೇಲೆ ಉಳಿದ ಹಣದಲ್ಲಿ ಸಂಸಾರ ನಿರ್ವಹಣೆ ಮಾಡುವ ತೊಂದರೆಯಾಗಬಾರದೆಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ 25ರಿಂದ 30 ರೂಪಾಯಿಗೆ 180 ಎಂ.ಎಲ್. ಮದ್ಯ ತಯಾರಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಲು ಹೇಳಿದ್ದರು. ಅಗ್ಗದ ಮದ್ಯದಿಂದ ಹೊಸದಾಗಿ ಕುಡುಕರನ್ನು ಸೃಷ್ಟಿ ಮಾಡಬೇಕೆನ್ನುವ ಇರಾದೆ ಮುಖ್ಯಮಂತ್ರಿಗಳಿಗಿಲ್ಲ. ಎಂದೂ ಕುಡಿಯಲಾರದವರಿಗೆ ಪುಕ್ಕಟ್ಟೆ ಸ್ಕಾಚ್ ನೀಡಿದರೂ ಕುಡಿಯಲಾರ. ಕುಡಿತದ ಚಟ ಇದ್ದವರಿಗೆ 100ರಿಂದ 200 ರೂಪಾಯಿ ದರ ಏರಿಸಿದರೂ ಕುಡಿತ ಬಿಡಲಾರ.
ಹೆಚ್ಚಿನ ಮದ್ಯದ ಅಂಗಡಿ: ಸದ್ಯ ರಾಜ್ಯದಲ್ಲಿ ಅನಧಿಕೃತ ಬಾರ್ಗಳು, ಮದ್ಯದಗಳು ಅಂಗಡಿಗಳಿಂದ ರಾಜ್ಯದ ಬೊಕ್ಕಸಕ್ಕೆ ವರ್ಷಕ್ಕೆ 4000 ಕೋಟಿ ರೂ. ನಷ್ಟವಾಗುತ್ತಿದೆ. ಅಧಿಕೃತ ಲೈಸೆನ್ಸ್ವುಳ್ಳ ಮದ್ಯದ ಅಂಗಡಿಗಳನ್ನು ತೆರೆಯುವುದರಿಂದ ಅನಧಿಕೃತ ಅಂಗಡಿಗಳನ್ನು ಬಂದು ಮಾಡಿಸುವುದೇ ಹೊರತು ಕುಡಿಯುವವರ ಪ್ರಮಾಣದಲ್ಲಿ ಹೆಚ್ಚಿಗೆ ಕುಡುಕರು ಸೃಷ್ಟಿಯಾಗಲಾರರು. ಮುಖ್ಯಮಂತ್ರಿಗಳ ಉದ್ದೇಶ ಅನಧಿಕೃತ ಮಾರಾಟ ನಿಲ್ಲಿಸಿ, ಅಧಿಕೃತ ಮಾರಾಟ ಪ್ರಾರಂಭಿಸಬೇಕೆನ್ನುವುದು. ಇದರಿಂದ ಮದ್ಯ ಮಾರಾಟದಲ್ಲಿ ಹೆಚ್ಚಿನ ಮದ್ಯದ ಅಂಗಡಿಗಳು ಹುಟ್ಟಲಾರವು. ರಾಜ್ಯದ ಬೊಕ್ಕಸಕ್ಕೆ ಲಾಭದ ಜೊತೆಗೆ ಜನರಿಗೆ ಅಧಿಕೃತ ಉತ್ತಮ ಮದ್ಯ ಸಿಗಬೇಕೆನ್ನುವ ಸದುದ್ದೇಶವುಳ್ಳ ಮುಖ್ಯಮಂತ್ರಿಗಳ ಬಗ್ಗೆ ರಾಜ್ಯದಲ್ಲಿ ವೃಥಾ ಟೀಕೆ, ಅಪಹಾಸ್ಯ ಪ್ರಸಾರವಾಗುತ್ತಿರುವುದು ದುರ್ದೈವದ ಸಂಗತಿಯಾಗಿದೆ.
-ವೇದವ್ಯಾಸ ಕೌಲಗಿ, ಕಾಂಗ್ರೆಸ್ ವಕ್ತಾರರು
ಪ್ರವಾಹಕ್ಕೆ ಸಿಕ್ಕ ಪ್ರಾಣಿಗಳ ಬಗ್ಗೆಯೂ ಮರುಕವಿರಲಿ
ಉತ್ತರಾಖಂಡ ಜಲಪ್ರಳಯದಲ್ಲಿ ಜನರೊಂದಿಗೆ ಸಾವಿರಾರು ಅಥವಾ ಲಕ್ಷಾಂತರ ಜಾನುವಾರುಗಳು ಸಾವು ನೋವಿಗೆ ಸಿಲುಕಲಿಲ್ಲವೇ? ಅವುಗಳನ್ನು ರಕ್ಷಿಸಲು ಯಾವ ಕಾರ್ಯವೂ ನಡೆಯಲಿಲ್ಲವೇ? ಅಥವಾ ಜಲಪ್ರಳಯ ನಡೆದಾದ ಆ ಪ್ರದೇಶಗಳಲ್ಲಿ ಯಾವ ಪ್ರಾಣಿಗಳೂ ಇರಲಿಲ್ಲವೆ? ಉತ್ತರಿಸುವವರರಾರು? ಉತ್ತರಿಸಬೇಕಾದ ವ್ಯಕ್ತಿ ಆ ರಾಜ್ಯದ ಮುಖ್ಯಮಂತ್ರಿ ಹೇಳಬೇಕು. ಆದ್ರೆ ವಿಷಯ ಮುಚ್ಚುತ್ತದೆಯೇ? ಅದೇನೆ ಇರಲಿ, ಜಲ ಪ್ರಳಯದಲ್ಲಿ ಸಿಲುಕಿಕೊಂಡ ಮಾನವರನ್ನು ರಕ್ಷಿಸುವುದು ಮತ್ತು ರಕ್ಷಿಸಲಾಗುತ್ತಿರುವುದು ಸಂತಸದ ಸಂಗತಿ. ರಕ್ಷಿಸುತ್ತಿರುವ ನಮ್ಮ ಯೋಧರಿಗೆ ಶಿರ ಸಾಷ್ಟಾಂಗ ನಮಸ್ಕಾರಗಳು. ಜೀವ ಕಳೆದುಕೊಂಡ ಮತ್ತು ಇನ್ನೂ ಸಿಲುಕಿ ನರಳುತ್ತಿರುವ ಅಲ್ಲಿನ ಜನ ಜೀವನಾಧಾರವಾಗಿದ್ದ ಕುದುರೆ-ಕತ್ತೆ-ಕೃಷಿಗೆ ಬಳಸುತ್ತಿದ್ದ ದನ- ಕರು-ಎತ್ತು-ಎಮ್ಮೆ-ಕೋಣ ಹಾಗೂ ಸಾಕು ಪ್ರಾಣಿಗಳ ಪಾಡು ಏನಾಗಿದೆಯೆಂಬುದು ಯಾವ ಮಾಧ್ಯಮದಲ್ಲಿಯೂ ಪ್ರಕಟವಾಗದಿರುವುದು ಆಶ್ಚರ್ಯ. ಇದು ಯಾರಿಗೂ ತಿಳಿದಿಲ್ಲ ಮತ್ತು ತಿಳಿದಿದ್ದರೂ ತಿಳಿಸುತ್ತಿಲ್ಲವೇ? ಈ ಜಲಪ್ರಳಯದಲ್ಲಿ ಸಮಸ್ತ ಪ್ರಾಣಿ ಸಂಕುಲವೇ ಕೊಚ್ಚಿ ಕೊಂಡು ಹೋಯಿತೇ. ಈ ಬಗ್ಗೆ ಯಾವ ಮಾಹಿತಿ ಇಲ್ಲ. ಮೂಖ ಪ್ರಾಣಿಗಳು ಏನಾದವು ಅವುಗಳ ಪಾಡೇನು?
-ಎನ್.ಪಿ. ರಾಘವೇಂದ್ರ ಪ್ರದಾನ್
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
ಜಟಛ್ಝಟ: ಛಟ್ಝಿಡ್ಝ್ಞಜಠ್ಠಛಝಿಛಅ್ಜಟಛ್ಝಟ.್ಛ್ಟಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

