ಭ್ರಷ್ಟ ಅಧಿಕಾರಿಗೆ ಭಾರಿ ಶಿಕ್ಷೆ
ಹಿರಿಯ ಅಧಿಕಾರಿಗಳ ಭ್ರಷ್ಟಾಚಾರದ ವಿಚಾರದಲ್ಲಿ ಲೋಕಾಯುಕ್ತರಿಗೆ ದೂರು ಕೊಟ್ಟರೆ, ಅದರಿಂದ ಪ್ರಚಾರ ಸಿಗಬಹುದಷ್ಟೇ. ಪರಿಣಾಮವೇನೂ ಆಗುವುದಿಲ್ಲ ಎಂದು ಭಾವಿಸಿರುವ ಸಿನಿಕರ ಅನಿಸಿಕೆಯನ್ನು ಸುಳ್ಳಾಗುವಂತೆ ಮಾಡುವ ಒಂದು ಪ್ರಕರಣ ಈಗ ನಡೆದಿದೆ.
ರಾಜ್ಯ ಸರ್ಕಾರದ ಉದ್ಯೋಗ ಹಾಗೂ ತರಬೇತಿ ವಿಭಾಗದ ಜಾಯಿಂಟ್ ಡೈರೆಕ್ಟರ್ ರಾಮಚಂದ್ರಪ್ಪ ಅವರ ವಿರುದ್ಧ ಸಲ್ಲಿಸಿದ್ದ ದೂರು ರುಜುವಾತಾಗಿರುವುದರಿಂದ ಅವರಿಗೆ ಲೋಕಾಯುಕ್ತ ನ್ಯಾಯಾಲಯ ಐದು ವರ್ಷಗಳ ಸಶ್ರಮ ಕಠಿಣ ಶಿಕ್ಷೆ ಹಾಗೂ ಎರಡು ಲಕ್ಷ ರುಪಾಯಿಗಳ ದಂಡವನ್ನು ವಿಧಿಸಿದೆ.
ಉಪ್ಪುಂಡವರು ನೀರು ಕುಡಿಯಲೇ ಬೇಕೆನ್ನುವುದು ನಿಜ ಎನ್ನುವ ರೀತಿಯಲ್ಲಿ ಪ್ರಕಟವಾಗಿರುವ ಈ ತೀರ್ಪು, ಭ್ರಷ್ಟಾಚಾರದ ವಿರುದ್ಧದ "ಹೋರಾಟದಲ್ಲಿ" ಒಂದು ಪ್ರಮುಖ ದಾಖಲೆ ಎನ್ನಬಹುದು.
ಈ ಪ್ರಕರಣ ನಡೆದಿದ್ದು 2011ರಲ್ಲಿ. ನಾನಾ ಸಂಸ್ಥೆಗಳಿಗೆ ಸರ್ಕಾರದ ಅನುದಾನವನ್ನು ಕೊಡಿಸಲು ರಾಮಚಂದ್ರಪ್ಪ ಲಂಚ ಕೇಳಿ ಪಡೆಯುತ್ತಿದ್ದರೆನ್ನುವ ದೂರುಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಒಂದು ದೂರನ್ನು ದಾಖಲಿಸಿಕೊಂಡು, ಸೂಕ್ತ ರೀತಿಯಲ್ಲಿ ಬಲೆಯನ್ನು ಬೀಸಿ, ಜಾಯಿಂಟ್ ಡೈರೆಕ್ಟರ್ ಎಂಟು ಲಕ್ಷ ರುಪಾಯಿಗಳ ಲಂಚ ಕೇಳಿ, ಮುಂಗಡ ಪಡೆಯುತ್ತಿರುವಾಗಲೇ ಅವರನ್ನು ಹಿಡಿದ ಪ್ರಕರಣ ಇದು.
ಸರ್ಕಾರದ ಹಿರಿಯ ಅಧಿಕಾರಿಗಳನ್ನು ಹಿಡಿದು, ಅವರ ವಿರುದ್ಧ ಭ್ರಷ್ಟಾಚಾರದ ದಾಖಲೆಗಳನ್ನು, ಸಾಕ್ಷ್ಯವನ್ನು ನ್ಯಾಯಾಲಯ ಒಪ್ಪುವ ರೀತಿಯಲ್ಲಿ ಒದಗಿಸುವುದು ಕಷ್ಟ. ಆ ಕೆಲಸವನ್ನು ಲೋಕಾಯುಕ್ತ ಪೊಲೀಸರು ಮಾಡಿದ್ದಾರೆ. ಅಭಿನಂದನೆಗಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

