ಸಂಪಾದಕೀಯ

ನಿವೃತ್ತ ಅಧಿಕಾರಿಗಳೂ ಚುನಾವಣೆಯೂ

Published On :

ಇದು ಚುನಾವಣೆಯ ಸಮಯ. ರಾಜಕಾರಣಿಗಳ ಮನಸ್ಸು ಚುರುಕಾಗುವುದು ತೀರ ಸಹಜ. ಅದರಲ್ಲೂ ಈಗ ಕರ್ನಾಟಕದಲ್ಲಿ, ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ಸಂಭವವಿದೆ ಎಂದು ಸೂಚನೆ ಸಿಕ್ಕದ ಕೂಡಲೇ ಚುನಾವಣೆಯ ವ್ಯಸನವನ್ನು ಹಚ್ಚಿಕೊಂಡವರು ಕಾಂಗ್ರೆಸ್ ಕಾರ್ಯಾಲಯ ಹಾಗೂ ನಾಯಕರ ಮನೆ ಬಾಗಿಲಿಗೆ ಹೋಗುವುದು ತೀರ ಸಹಜವಾದ ಸಾಮಯಿಕ ಪ್ರಕ್ರಿಯೆ.
ಆದರೆ ಈಗಿನ ಹೊಸ ಬೆಳವಣಿಗೆ ಎಂದರೆ ಇಂತಹ ಚಟ ಸೇವೆಯಿಂದ ನಿವೃತ್ತರಾದ ಅಧಿಕಾರಿಗಳಿಗೆ, ನಿವೃತ್ತರಾಗಲಿರುವವರು ಹಾಗೂ ರಾಜಕೀಯದಲ್ಲಿನ ಅವಕಾಶ ಸಿಗುವುದಾದರೆ ಸ್ವಯಂ ಪ್ರೇರಿತ ನಿವೃತ್ತಿಯನ್ನು ಪಡೆಯಲು ಸಿದ್ಧರಾಗಿದ್ದಾರೆ. ಈಗಿನ  ರಾಜಕೀಯದ ಆಕರ್ಷಣೆ ಅಂತಹದ್ದು. ನಿವೃತ್ತ ಸರ್ಕಾರಿ ನೌಕರರು ರಾಜಕೀಯಕ್ಕೆ ಪ್ರವೇಶಿಸುವುದು ತಪ್ಪೇನೂ ಅಲ್ಲ. ನಿವೃತ್ತ ಐಪಿಎಸ್ ಅಧಿಕಾರಿ ಎಚ್.ಎಂ. ಪಾಟೀಲ್, ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿದ್ದ ಚಿಂತಾಮಣಿ ದೇಶಮುಖ್ ಅವರು ಕೇಂದ್ರದಲ್ಲಿ ಮಂತ್ರಿಗಳೂ ಆಗಿದ್ದವರು. ಆದರೆ ಗುಂಪು ಗುಂಪಾಗಿ ನಿವೃತ್ತ ಅಧಿಕಾರಿಗಳು ರಾಜಕೀಯ ಪಕ್ಷಗಳ ಪ್ರೇಮಿಗಳಾಗಲು ಹೊರಟಾಗ, ಅವರ ಸೇವಾವಧಿಯ ಕೊನೆಯ ದಿನಗಳ ನಿರ್ಧಾರಗಳನ್ನು ಜಾಗೃತ ಸಮಾಜ ಎಚ್ಚರಿಕೆಯಿಂದ ಪರಿಶೀಲಿಸಬೇಕಾಗಬಹುದು. ಕೆಲವು ವರ್ಷಗಳ ಹಿಂದೆ, ಕರ್ನಾಟಕದ ಐ.ಎ.ಎಸ್. ಅಧಿಕಾರಿಯೊಬ್ಬರು, ಕೆಲಸಕ್ಕೆ ರಾಜಿನಾಮೆ ನೀಡಿ, ಆಂಧ್ರಪ್ರದೇಶದಲ್ಲಿ ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆ ಕಣಕ್ಕಿಳಿದು ಸೋತ ಅನಂತರ, ಸರ್ಕಾರಿ ನೌಕರಿಗೆ ಕೊಟ್ಟಿದ್ದ ರಾಜಿನಾಮೆ ಪತ್ರವನ್ನು ಹಿಂದಕ್ಕೆ ಪಡೆದು, ಮತ್ತೆ ಸೇವೆಯಲ್ಲಿ ಮುಂದುವರಿದ ಪ್ರಕರಣವೂ ಇದೆ. ಅದಕ್ಕೆ ಸೇವಾ ನಿಯಮಗಳಲ್ಲಿ ಅವಕಾಶವಿದೆಯಂತೆ. ಸರ್ಕಾರಿ ನೌಕರರೆಂದರೆ ಅಷ್ಟೊಂದು ಪವಿತ್ರಾತ್ಮರೇನು?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.