ಪಡಿತರ ಚೀಟಿ, ಮರು ಪರಿಶೀಲನೆ ಅತ್ಯಗತ್ಯ
ಇದೀಗ ಮತ್ತೊಮ್ಮೆ ಆನ್ಲೈನ್ನಲ್ಲಿ ಹೊಸ ಪಡಿತರ ಚೀಟಿ ಪಡೆಯಲು ಅರ್ಜಿ ಆರಂಭವಾಗಿದೆ. ಆದರೆ ಈ ಬಾರಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಾರಿಗೊಳಿಸಿರುವ ನಿಯಮಗಳು ಮಾತ್ರ ತುಂಬಾನೇ ಗೊಂದಲ ಉಂಟು ಮಾಡುತ್ತಿವೆ. ಹೊಸದಾಗಿ ಪಡಿತರ ಚೀಟಿ ಪಡೆಯಲು ಅರ್ಜಿ ಸಲ್ಲಿಸುವವರು ಈ ಹಿಂದೆ ಪಡಿತರ ಚೀಟಿ ಪಡೆದವರ ಪರಿಚಯದೊಂದಿಗೆ ಅರ್ಜಿಯನ್ನು ಸಲ್ಲಿಸಬೇಕೆಂದು ನಿಯಮ ರೂಪಿಸಲಾಗಿದೆ. ಆದರೆ ನಗರವಾಸಿಗಳಿಗೆ ಅಕ್ಕ-ಪಕ್ಕದ ಮನೆಯವರೇ ಪರಿಚಯವಿರುವುದಿಲ್ಲ. ಅಂಥದ್ದರಲ್ಲಿ ಹೇಗೆ ತಾನೆ ಪಡಿತರ ಚೀಟಿ ಹೊಂದಿದವರನ್ನು ಪರಿಚಯಿಸಿ, ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಸಾಧ್ಯ?
ಹಳೆಯ ಪಡಿತರ ಚೀಟಿದಾರರನ್ನು ಪರಿಚಯಿಸುವ ಜೊತೆಗೇ ಅವರ ಆರ್.ಆರ್. ಸಂಖ್ಯೆಯನ್ನು ನಮೂದಿಸಬೇಕು. ಈಗಾಗಲೇ ಪಡಿತರ ಚೀಟಿ ಪಡೆದಿರುವವರನ್ನು ಪರಿಚಯಿಸಿಕೊಂಡು ಅವರ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿದ ಮೇಲೆ ಮತ್ತೆಯೂ ಅವರ ಆರ್.ಆರ್. ಸಂಖ್ಯೆ ನೀಡಿದರೂ ಯಾರು ತಾನೇ ನೀಡಲು ಒಪ್ಪುತ್ತಾರೆ? ಒಂದು ವೇಳೆ ಒಪ್ಪಿದರೂ ಆರ್.ಆರ್. ಸಂಖ್ಯೆ ನೀಡಿದರೂ ಅವರು ಪಡಿತರ ಚೀಟಿ ಪಡೆಯುವಾಗ ನಮೂದಿಸಿದ ಆರ್.ಆರ್. ಸಂಖ್ಯೆ ನೀಡಿದರೆ ಅದುಅಸಿಂಧುವಾಗಬಹುದು. ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವವರು 921 2357123 ಮೊಬೈಲ್ ನಂಬರ್ಗೆ ತಮ್ಮ ಹೆಸರನ್ನು ತಪ್ಪಿಲ್ಲದಂತೆ ಎಸ್ಎಂಎಸ್ ಕಳುಹಿಸಿಕೊಡಬೇಕು. ಈ ಸಂದೇಶ ಕಳುಹಿಸಿಕೊಟ್ಟ ನಂತರ ತಕ್ಷಣವೇ ಒಂದು ಪ್ರವೇಶ ಸಂಖ್ಯೆ (ಟೋಕನ್ ನಂಬರ್) ಮತ್ತು ಸುರಕ್ಷತಾ ಸಂಖ್ಯೆ (ಸೆಕ್ಯುರಿಟಿ ಕೋಡ್) ಬರುತ್ತದೆ. ಇದನ್ನು ಹಳ್ಳಿಗರು, ಮುಗ್ಧ ಅನಕ್ಷರಸ್ಥರು ಮಾಡಲು ಸಾಧ್ಯವೇ? ಮಾಡಿದರೂ ಅದನ್ನು ಬಳಸಿ ಮಧ್ಯದಲ್ಲಿ ಎಲ್ಲೋ ಬರುವ ಈ ಸಂಖ್ಯೆ ಮತ್ತು ಕೋಡ್ ತುಂಬಲು ಸಾಮಾನ್ಯ ಜ್ಞಾನವಾದರೂ ಬೇಕಲ್ಲವೇ? ಈ ಎಲ್ಲಾ ತೊಂದರೆಗಳನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಗಮನಿಸಿ, ಹೊಸ ಪಡಿತರ ಚೀಟಿ ಪಡೆಯಲು ರೂಪಿಸಿರುವ ಇಂತಹ ನಿಯಮಗಳನ್ನು ಸರಳಗೊಳಿಸುವುದು ಅತ್ಯಗತ್ಯ.
- ವಸಂತ ಬಿ. ಈಶ್ವರಗೆರೆ, ಹಿರಿಯೂರು, ಚಿತ್ರದುರ್ಗ
ಶಿಕ್ಷಣ ಸಚಿವರೇ ಇತ್ತ ಗಮನ ಹರಿಸುವಿರಾ?
ಯಾದಗಿರಿ ಕ್ಷೇತ್ರಕ್ಕೆ ಒಳಪಡುವ ಕಾಡಮಗೇರಾ ಗ್ರಾಮದ ಶಾಲೆಯಲ್ಲಿ ಕೊಠಡಿಗಳಿಲ್ಲದೆ ಮಕ್ಕಳು ಕಲಿಕೆಯಿಂದ ದೂರ ಉಳಿಯಬೇಕಾದ ದುರದೃಷ್ಟಕರ ಸಂಗತಿ ಎದುರಾಗಿದೆ. ಇಲ್ಲಿನ ಪ್ರಾಥಮಿಕ -ಮಾಧ್ಯಮಿಕ ಶಾಲೆಯಲ್ಲಿ 320 ವಿದ್ಯಾರ್ಥಿಗಳಿದ್ದಾರೆ. ಆದರೆ ಕೇವಲ ನಾಲ್ಕೇ ಕೊಠಡಿಗಳಿದ್ದು ಕಲಿಕೆ ಜಾತ್ರೆ- ಸಂತೆಯಂತೆ ನಡೆಯುತ್ತಿರುವುದು ಇಲ್ಲಿನ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಶಿಕ್ಷಣ ಪ್ರಗತಿಗೆ ಸರ್ಕಾರ ಕೋಟಿ-ಕೋಟಿ ಅನುದಾನ ನೀಡುತ್ತಿದ್ದರೂ, ಹತ್ತಿರದ ಅಧಿಕಾರಿಗಳ ಕೈಯಲ್ಲಿ ಮುಳುಗಿ ಹೋಗುತ್ತಿದೆಯೇ ಹೊರತು ಕೆಲಸ ಕಾರ್ಯಗಳಿಗೆ ಬಂದು ತಲುಪುತ್ತಿಲ್ಲ. ಇಂತಹ ದುರಾಡಳಿತದಿಂದಾಗಿ ಇಲ್ಲಿನ ಮಕ್ಕಳು ಜೀತ ಮಾಡುತ್ತ ಹೊಲ-ಗದ್ದೆಯಲ್ಲಿ ದುಡಿಯುವ ಪಾಡು ಸೃಷ್ಟಿಯಾಗಿದೆ. ಇಂತಹ ದುಸ್ಥಿತಿ ಇರುವಾಗ ಗ್ರಾಮಗಳು ರಾಮರಾಜ್ಯವಾಗಲು ಸಾಧ್ಯವೇ? ದೇಶ ಅಭಿವೃದ್ಧಿಯತ್ತ ಸಾಗಲು ಸಾಧ್ಯವೇ? ಆದ ಕಾರಣ, ಶಿಕ್ಷಣ ಸಚಿವರು ಇತ್ತ ಗಮನ ಹರಿಸಿ ಕಲಿಕೆಗೆ ಅಡೆತಡೆಯಾಗುವ ಅಂಶಗಳನ್ನು ಪರಿಶೀಲಿಸಿ ಸೂಕ್ತ ರೀತಿಯ ವ್ಯವಸ್ಥೆ ಕಲ್ಪಿಸಿಕೊಡಬೇಕು.
- ಶರಣು. ಎನ್.ಕೆ., ಕಾಡುಮಗೇರಾ, ಯಾದಗಿರಿ
-ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

